ಮೈಸೂರು

ಚಾಲಕರ ವಿರುದ್ಧ 239 ಕೇಸು

Published On :

ಮೈಸೂರು: ನಿಯಮ ಉಲ್ಲಂಘಿಸಿರುವ ಆಟೋ ಚಾಲಕರು, ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಚಾಲಕರ ವಿರುದ್ಧ ಒಟ್ಟು 239 ಪ್ರಕರಣಗಳನ್ನು ದಾಖಲಿಸಿ, 23,900 ದಂಡ ವಸೂಲಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಆಟೋ ಚಾಲಕರು ಪ್ರಯಾಣಿಕರು ಕರೆದಲ್ಲಿಗೆ ಬಾರದೆ ಇರುವುದು, ಹೆಚ್ಚಿನ ಬಾಡಿಗೆಗೆ ಒತ್ತಾಯ, ನಿಷೇಧಿತ ಸ್ಥಳದಲ್ಲಿ ನಿಲುಗಡೆ, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳ ಬಗ್ಗೆ ಸೋಮವಾರ ಕಾರ್ಯಾಚರಣೆ ನಡೆಸಿ 163 ಪ್ರಕರಣಗಳನ್ನು ದಾಖಲಿಸಿ 16,300 ದಂಡ ವಸೂಲಿ ಮಾಡಲಾಗಿದೆ.
ಸಂಚಾರ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಚಾಲಕರು ನಿಗದಿತ ಸ್ಥಳದಲ್ಲಿ ವಾಹನಗಳ ನಿಲುಗಡೆ ಮಾಡದಿರುವುದು ಹಾಗೂ ಇತರೆ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಒಟ್ಟು 76 ಪ್ರಕರಣ ದಾಖಲಿಸಿ ಒಟ್ಟು 7,600 ದಂಡ ವಸೂಲಿ ಮಾಡಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವ ಆಟೋ, ಬಸ್ ಚಾಲಕರ ವಿರುದ್ಧ ಸಾರ್ವಜನಿಕರು ದೂರು ನೀಡಲು ಲಭ್ಯವಿರುವ ಇ-ಮೇಲ್, ಫೇಸ್‌ಬುಕ್ ಇಲ್ಲವೇ ಅಂಚೆ ಕಾರ್ಡಿನ ಮೂಲಕ ಹಾಗೂ ನೇರವಾಗಿ ದೂರನ್ನು ನೀಡಬಹುದು. ನಿಯಮ ಉಲ್ಲಂಘಿಸುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ದೂರು ಕೊಡಿ: ಇಮೇಲ್- ಟಣಡ್ಟ್ಠಜ್ಛ್ಝಡಿಣಠ್ಟಟ್ಝ್ಛಜಅ್ಜಟಛ್ಝಟ.್ಛ್ಟಟ, ಫೇಸ್‌ಬುಕ್- ಂಣಡ್ಟ್ಠಜ್ಛ್ಝಡಿಣಠ್ಟಟ್ಝ್ಛಜ, ಕಂಟ್ರೋಲ್ ರೂಂ. 2418339, 2418100, ಎಸಿಪಿ ಟ್ರಾಫಿಕ್- 2418325, 525.


ಆಟೋ ಚಾಲಕ ಆತ್ಮಹತ್ಯೆ
ಮೈಸೂರು: ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಟಿ. ಸ್ಟ್ರೀಟ್ ಅಕ್ಕಿಚೌಕದ ಬಳಿಯ ಜೈನರ ದೇವಸ್ಥಾನದ ಕೊಠಡಿಯೊಂದರಲ್ಲಿ ಬುಧವಾರ ನಡೆದಿದೆ. ಕುವೆಂಪುನಗರ ನಿವಾಸಿ ಲೇ. ಹರಿರಾಮ್ ಚೌಲ್ ಎಂಬವರ ಪುತ್ರ ಮುರಳಿ ಚೌಲ್ (45) ಆತ್ಮಹತ್ಯೆ ಮಾಡಿಕೊಂಡವರು. ಇವರು ಆಟೋ ಚಾಲನೆ ಮಾಡಿಕೊಂಡಿದ್ದು, ಮದುವೆ ಆಗಿರಲಿಲ್ಲ. ಮಂಗಳವಾರ ಜೈನ ದೇವಸ್ಥಾನದಲ್ಲಿ ಸ್ನೇಹಿತರಿಗಾಗಿ ಎಂದು ಕೊಠಡಿಯೊಂದನ್ನು ಪಡೆದಿದ್ದಾರೆ. ಆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದಷ್ಟೇ ಮುರಳಿ ಪತ್ರ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಲಷ್ಕರ್ ಠಾಣೆ ಇನ್ಸ್‌ಪೆಕ್ಟರ್ ಅನ್ಸರ್ ಅಲಿ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.