'ಔಷಧ ತಜ್ಞರ ಪಾತ್ರ ಪ್ರಮುಖ'
ಮೈಸೂರು: ರೋಗಿಗಳ ರೋಗ ಗುಣಪಡಿಸುವಲ್ಲಿ ವೈದ್ಯರಂತೆ ಔಷಧ ತಜ್ಞರ ಪಾತ್ರವೂ ಮಹತ್ವವಾದದು ಎಂದು ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೃಷ್ಣಮೂರ್ತಿ ಹೇಳಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯರು ನೀಡುವ ಚೀಟಿಯನ್ನು ಓದಿ ಅರ್ಥ ಮಾಡಿಕೊಂಡು ತಕ್ಕುದಾದ ಔಷಧ ನೀಡುವಲ್ಲಿ ಫಾರ್ಮಸಿಸ್ಟ್ಗಳ ತಜ್ಞತೆ ಮೆಚ್ಚುವಂತಹದ್ದು ಎಂದರು.
ಇತ್ತೀಚಿನ ದಿನಗಳಲ್ಲಿ ಔಷಧ ವಿಜ್ಞಾನ ಕೋರ್ಸಿಗೆ ಹೆಚ್ಚು ಬೇಡಿಕೆಯಾಗಿದ್ದು, ಯುವಜನರು ಆಕರ್ಷಿತರಾಗುತ್ತಿದ್ದಾರೆ. ಅದರಂತೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಫಾರ್ಮಸಿಸ್ಟ್ಗಳಿಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹುದ್ದೆಗಳು ಕಾದು ಕುಳಿತಿವೆ. ತಮ್ಮ ಕೌಶಲ್ಯ ಹಾಗೂ ಸೃಜನಶೀಲತೆಯಿಂದ ಪಡೆದುಕೊಳ್ಳಬೇಕಷ್ಟೇ ಎಂದ ಅವರು, ಬೇರೆ ಬೇರೆ ಹೆಸರಿನ ಔಷಧಗಳಲ್ಲಿ ಒಂದೇ ಔಷಧೀಯ ಗುಣವಿರುವುದರಿಂದ 1948ರ ಫಾರ್ಮಸಿಸ್ಟ್ ಕಾಯಿದೆಗೆ ತಿದ್ದುಪಡಿ ತರುವಂತೆ ಒತ್ತಾಯಿಸಿದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಷಿ, ವಿದ್ಯಾರ್ಥಿ ರಾಹುಲ್ ಸಿ. ಮನೋಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

