ಮತದಾನಕ್ಕೆ ಸಕಲ ಸಿದ್ಧತೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಏ. 17ರ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಾದರಿ ನೀತಿ ಸಂಹಿತೆಯಂತೆ ಪ್ರತಿ 15- 20 ಮತಗಟ್ಟೆಗಳಿಗೆ ವಲಯಾಧಿಕಾರಿ ತಂಡಗಳನ್ನು, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಫ್ಲೈಯಿಂಗ್ ಸ್ಕ್ವಾಡ್ಗಳು, ಚೆಕ್ಪೋಸ್ಟ್ಗಳಿಗೆ ಸ್ಥಿರ ಕಣ್ಗಾವಲು ಪಡೆಗಳನ್ನು ನಿಯೋಜಿಸಲಾಗಿದೆ. ಈವರೆಗೆ 22 ಮಾದರಿ ನೀತಿ ಸಂಹಿತೆ ಪ್ರಕರಣಗಳು ವರದಿಯಾಗಿದ್ದು, 10 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. ಅಬಕಾರಿ ಇಲಾಖೆ ಸರಾಸರಿ 322 ದಾಳಿ ನಡೆಸಿದ್ದು, 107 ಪ್ರಕರಣಗಳನ್ನು ದಾಖಲಿಸಲಾಗಿದೆ. 50 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿರುವ 2675 ಮತಗಟ್ಟೆಗಳಿಗೆ ಸರಾಸರಿಯಾಗಿ ಸುಮಾರು 14500 ಅಧಿಕಾರಿ, ಸಿಬ್ಬಂದಿ ನೇಮಿಸಿದ್ದು, ಮೊದಲ ಹಂತದ ತರಬೇತಿ ನೀಡಲಾಗಿದೆ.
ಎರಡನೇ ಹಂತದ ತರಬೇತಿಯನ್ನು ಏ.10 ರಂದು ನೀಡಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ಒಟ್ಟು 356 ಕೆಎಸ್ಆರ್ಟಿಸಿ ಬಸ್ಸುಗಳು, 68 ಮಿನಿ ಬಸ್ಗಳು, 26 ಜೀಪ್ಗಳು ಸೇರಿ ಒಟ್ಟು 448 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಕ್ಷೇತ್ರದ ಸಂಕ್ಷಿಪ್ತ ಮಾಹಿತಿ
ಕ್ಷೇತ್ರಗಳು ಪುರುಷರು ಮಹಿಳೆಯರು ಒಟ್ಟು
ಮಡಿಕೇರಿ 102375 104284 206659
ವಿರಾಜಪೇಟೆ 102566 102356 204922
ಪಿರಿಯಾಪಟ್ಟಣ 85115 80962 166077
ಹುಣಸೂರು 104677 100909 205586
ಚಾಮುಂಡೇಶ್ವರಿ 126290 120873 247163
ಕೃಷ್ಣರಾಜ 110226 110997 221223
ಚಾಮರಾಜ 104303 102632 206935
ನರಸಿಂಹರಾಜ 109215 109648 218863
ಒಟ್ಟು 844767 832661 1677428
ಮತದಾನ ಕೇಂದ್ರಗಳು
ಕ್ಷೇತ್ರ ಒಟ್ಟು ಸೂಕ್ಷ್ಮ ಅತೀಸೂಕ್ಷ್ಮ
ಮಡಿಕೇರಿ 264 88 67
ವಿರಾಜಪೇಟೆ 262 70 51
ಪಿರಿಯಾಪಟ್ಟಣ 220 36 25
ಹುಣಸೂರು 263 35 25
ಚಾಮುಂಡೇಶ್ವರಿ 308 99 39
ಕೃಷ್ಣರಾಜ 223 23 81
ಚಾಮರಾಜ 213 43 91
ನರಸಿಂಹರಾಜ 220 107 89
ಒಟ್ಟು 1973 501 468
ಚುನಾವಣಾಧಿಕಾರಿಗಳ ಮಾಹಿತಿ
ಜಿಲ್ಲಾ ಚುನಾವಣಾಧಿಕಾರಿ- ಸಿ. ಶಿಖಾ
ಸಹಾಯಕ ಚುನಾವಣಾಧಿಕಾರಿ- ಅಬಿರಾಮ್ ಜಿ. ಸಂಕರ್- 94826 35469 (ಮಡಿಕೇರಿ), ಮಲ್ಲಿಕಾರ್ಜುನಯ್ಯ- 97396 01935 (ವಿರಾಜಪೇಟೆ), ಡಾ. ನಂಜುಂಡೇಗೌಡ- 94482 21987 (ಪಿರಿಯಾಪಟ್ಟಣ), ಎಂ.ಕೆ. ಜಗದೀಶ್- 97405 39668 (ಹುಣಸೂರು), ಉಪವಿಭಾಗಾಧಿಕಾರಿ- 94811 88001 (ಚಾಮುಂಡೇಶ್ವರಿ), ಪಾಲಿಕೆ ಆಯುಕ್ತರು- 94498 41234 (ಕೃಷ್ಣರಾಜ), ಸಹಕಾರ ಸಂಘಗಳ ಜಂಟಿ ನಿಬಂಧಕರು- 94494 23177 (ಚಾಮರಾಜ), ಸಹಕಾರ ಸಂಘಗಳ ಉಪ ನಿಬಂಧಕರು- 94489 28132 (ನರಸಿಂಹರಾಜ)
ಚುನಾವಣಾ ವೀಕ್ಷಕರು
ಚುನಾವಣಾ ವೀಕ್ಷಕರು (ಸಾಮಾನ್ಯ)- ಜಿತೇಂದ್ರ ಯಾದವ್- 94482 89200
ಚುನಾವಣಾ ವೆಚ್ಚಗಳ ವೀಕ್ಷಕರು- ಭುವನೇಶ್ ಯಾದವ್- 94482 89201
ಪೊಲೀಸ್ ವೀಕ್ಷಕ- ಎಂ. ರವಿ- 94482- 89202
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

