ಮೈಸೂರು

ಮತದಾನಕ್ಕೆ ಸಕಲ ಸಿದ್ಧತೆ

Published On :

ಮೈಸೂರು: ಮೈಸೂರು- ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಏ. 17ರ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಾದರಿ ನೀತಿ ಸಂಹಿತೆಯಂತೆ ಪ್ರತಿ 15- 20 ಮತಗಟ್ಟೆಗಳಿಗೆ ವಲಯಾಧಿಕಾರಿ ತಂಡಗಳನ್ನು, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು, ಚೆಕ್‌ಪೋಸ್ಟ್‌ಗಳಿಗೆ ಸ್ಥಿರ ಕಣ್ಗಾವಲು ಪಡೆಗಳನ್ನು ನಿಯೋಜಿಸಲಾಗಿದೆ. ಈವರೆಗೆ 22 ಮಾದರಿ ನೀತಿ ಸಂಹಿತೆ ಪ್ರಕರಣಗಳು ವರದಿಯಾಗಿದ್ದು, 10 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಅಬಕಾರಿ ಇಲಾಖೆ ಸರಾಸರಿ 322 ದಾಳಿ ನಡೆಸಿದ್ದು, 107 ಪ್ರಕರಣಗಳನ್ನು ದಾಖಲಿಸಲಾಗಿದೆ. 50 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿರುವ 2675 ಮತಗಟ್ಟೆಗಳಿಗೆ ಸರಾಸರಿಯಾಗಿ ಸುಮಾರು 14500 ಅಧಿಕಾರಿ, ಸಿಬ್ಬಂದಿ ನೇಮಿಸಿದ್ದು, ಮೊದಲ ಹಂತದ ತರಬೇತಿ ನೀಡಲಾಗಿದೆ.
ಎರಡನೇ ಹಂತದ ತರಬೇತಿಯನ್ನು ಏ.10 ರಂದು ನೀಡಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ಒಟ್ಟು 356 ಕೆಎಸ್‌ಆರ್‌ಟಿಸಿ ಬಸ್ಸುಗಳು, 68 ಮಿನಿ ಬಸ್‌ಗಳು, 26 ಜೀಪ್‌ಗಳು ಸೇರಿ ಒಟ್ಟು 448 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.


ಕ್ಷೇತ್ರದ ಸಂಕ್ಷಿಪ್ತ ಮಾಹಿತಿ


ಕ್ಷೇತ್ರಗಳು    ಪುರುಷರು    ಮಹಿಳೆಯರು    ಒಟ್ಟು
ಮಡಿಕೇರಿ    102375    104284    206659
ವಿರಾಜಪೇಟೆ    102566    102356    204922
ಪಿರಿಯಾಪಟ್ಟಣ    85115    80962    166077
ಹುಣಸೂರು    104677    100909    205586
ಚಾಮುಂಡೇಶ್ವರಿ    126290    120873    247163
ಕೃಷ್ಣರಾಜ    110226    110997    221223
ಚಾಮರಾಜ    104303    102632    206935
ನರಸಿಂಹರಾಜ    109215    109648    218863
ಒಟ್ಟು    844767    832661    1677428   

ಮತದಾನ ಕೇಂದ್ರಗಳು

ಕ್ಷೇತ್ರ    ಒಟ್ಟು     ಸೂಕ್ಷ್ಮ     ಅತೀಸೂಕ್ಷ್ಮ
ಮಡಿಕೇರಿ    264    88    67
ವಿರಾಜಪೇಟೆ    262    70    51
ಪಿರಿಯಾಪಟ್ಟಣ    220    36    25
ಹುಣಸೂರು    263    35    25
ಚಾಮುಂಡೇಶ್ವರಿ    308    99    39
ಕೃಷ್ಣರಾಜ    223    23    81
ಚಾಮರಾಜ    213    43    91
ನರಸಿಂಹರಾಜ    220    107    89            
ಒಟ್ಟು    1973    501    468



ಚುನಾವಣಾಧಿಕಾರಿಗಳ ಮಾಹಿತಿ


ಜಿಲ್ಲಾ ಚುನಾವಣಾಧಿಕಾರಿ- ಸಿ. ಶಿಖಾ
ಸಹಾಯಕ ಚುನಾವಣಾಧಿಕಾರಿ- ಅಬಿರಾಮ್ ಜಿ. ಸಂಕರ್- 94826 35469 (ಮಡಿಕೇರಿ), ಮಲ್ಲಿಕಾರ್ಜುನಯ್ಯ- 97396 01935 (ವಿರಾಜಪೇಟೆ), ಡಾ. ನಂಜುಂಡೇಗೌಡ- 94482 21987 (ಪಿರಿಯಾಪಟ್ಟಣ), ಎಂ.ಕೆ. ಜಗದೀಶ್- 97405 39668 (ಹುಣಸೂರು), ಉಪವಿಭಾಗಾಧಿಕಾರಿ- 94811 88001 (ಚಾಮುಂಡೇಶ್ವರಿ), ಪಾಲಿಕೆ ಆಯುಕ್ತರು- 94498 41234 (ಕೃಷ್ಣರಾಜ), ಸಹಕಾರ ಸಂಘಗಳ ಜಂಟಿ ನಿಬಂಧಕರು- 94494 23177 (ಚಾಮರಾಜ), ಸಹಕಾರ ಸಂಘಗಳ ಉಪ ನಿಬಂಧಕರು- 94489 28132 (ನರಸಿಂಹರಾಜ)


ಚುನಾವಣಾ ವೀಕ್ಷಕರು



ಚುನಾವಣಾ ವೀಕ್ಷಕರು (ಸಾಮಾನ್ಯ)- ಜಿತೇಂದ್ರ ಯಾದವ್- 94482 89200
ಚುನಾವಣಾ ವೆಚ್ಚಗಳ ವೀಕ್ಷಕರು- ಭುವನೇಶ್ ಯಾದವ್- 94482 89201
ಪೊಲೀಸ್ ವೀಕ್ಷಕ- ಎಂ. ರವಿ- 94482- 89202

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.