ಕಾರ್ಮಿಕರ ಬೈಕ್ ರ್ಯಾಲಿ
ಕ.ಪ್ರ.ವಾರ್ತೆ ಹುಣಸೂರು ಮೇ 1
ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದವು.
ಪಟ್ಟಣದ ರಂಗನಾಥ ಬಡಾವಣೆಯಲ್ಲಿ ಜಮಾವಣೆಗೊಂಡ ಮಾರೀಸ್ ಸ್ಪಿನ್ನರ್ಸ್ ಕಾರ್ಮಿಕರು, ಕರ್ನಾಟಕ ವೈರ್ಮನ್ ಕಾರ್ಮಿಕರು, ಗ್ರಾಪಂ ನೌಕರರು ತಮ್ಮ ಬೈಕ್ಗಳಿಗೆ ಕೆಂಬಾವುಟ ಕಟ್ಟಿಕೊಂಡು ಕಾರ್ಮಿಕ ವಿರೋಧಿ ನೀತಿ ವಾಪಸಾಗಲಿ, ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಸಿಐಟಿಯು ಜಿಂದಾಬಾದ್ ಎಂಬಿತ್ಯಾದಿ ಘೋಷಣೆ ಕೂಗುತ್ತ ಬೀದಿಗಳಲ್ಲಿ ರ್ಯಾಲಿ ನಡೆಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ವಿ. ಬಸವರಾಜು ಕಲ್ಕುಣಿಕೆ ಮಾತನಾಡಿ, ಸರ್ಕಾರಗಳ ತಪ್ಪು ನೀತಿಯಿಂದಾಗಿ ಕಾರ್ಮಿಕರಿಗೆ ಕಾಯಮಾತಿ ಎನ್ನುವುದು ಕನಸಿನ ಮಾತಾಗಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದಂತಹ ನೀತಿಗಳು ಕಾರ್ಮಿಕರ ಬದುಕನ್ನು ಮೂರಾಬಟ್ಟೆಯನ್ನಾಗಿಸಿವೆ. ಕಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರಗಳು ಕಸಿದುಕೊಳ್ಳುತ್ತಿವೆ. ಬೇಕಾಬಿಟ್ಟಿ ದುಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ವಕೀಲ ಜಗದೀಶ್ ಸೂರ್ಯ, ಗ್ರಾಪಂ ನೌಕರರ ಸಂಘದ ಲೋಕೇಶ್, ಸಿಐಟಿಯು ತಾಲೂಕು ಅಧ್ಯಕ್ಷ ತ್ಯಾಗರಾಜು, ಮಾರೀಸ್ ಸ್ಪಿನ್ನರ್ಸ್ ಮುಖಂಡ ವಿಶ್ವನಾಥ್, ರವಿ, ಪಿ.ಬಿ. ಸುರೇಶ್, ಎಚ್.ಬಿ. ರಾಜು ಜೋಸೆಫ್, ವೈರ್ಮನ್ ಕಾರ್ಮಿಕ ಸಂಘದ ಅಧ್ಯಕ್ಷ ಮಹದೇವ, ಉಪಾಧ್ಯಕ್ಷ ತಷವರ್, ಗೌರವ ಅಧ್ಯಕ್ಷ ಶಫಿವುಲ್ಲಾ, ಖಜಾಂಚಿ ನಜೀಂಖಾನ್, ಮುಖಂಡರಾದ ವಾಹಿಕ್ ಪಾಷ, ಗೋಪಾಲಯ್ಯ, ಕುಳ್ಳೇಗೌಡ, ವಿಜಯಕುಮಾರ್, ರಾಮಚಂದ್ರರೆಡ್ಡಿ, ಚಿನ್ನಸ್ವಾಮಿ, ಜಿಖಾವುಲ್ಲಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

