ಮೈಸೂರು

ರಾಮದೇವ್ ವಿರುದ್ಧ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮೇ 3
ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿರುವ ಯೋಗ ಗುರು ಬಾಬಾ ರಾಮದೇವ್ ಅವರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಲು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯವರು ಜಿಲ್ಲಾಧಿಕಾರಿ ಶನಿವಾರ ಪ್ರತಿಭಟಿಸಿದರು.
ಉತ್ತರಪ್ರದೇಶದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುವ ವೇಳೆ ಬಾಬಾ ರಾಮದೇವ್ ದಲಿತ ಮಹಿಳೆಯರನ್ನು ಅವಮಾನಿಸುವ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ಉತ್ತರ ಪ್ರದೇಶದ ಸರ್ಕಾರ ಕ್ರಮ ಕೈಗೊಂಡಿಲ್ಲ. ಇಂತಹ ಸರ್ಕಾರಗಳನ್ನು ಜನ ತಿರಸ್ಕರಿಸಬೇಕು. ಇಂತಹ ಹೇಳಿಕೆಗಳ ವಿರುದ್ಧ ಮಠಗಳು ಸಹ ಜಾತ್ಯತೀತವಾಗಿ ಬೀದಿಗಿಳಿದು ಖಂಡಿಸಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಬಾಬಾ ರಾಮದೇವ್ ಪ್ರತಿಕೃತಿಯನ್ನು ಚಟ್ಟದಲ್ಲಿ ಹೊತ್ತು ತಂದು ಬೆಂಕಿ ಹಚ್ಚಿ ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಸಂಸ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಶ್ರೀನಿವಾಸ್, ರಾಜಣ್ಣ, ಗಂಗಾಧರ, ಹನುಮಂತು ಬೆಲವತ್ತ, ನಾಗರಾಜು ಮಲಾರ, ಸೋಮಯ್ಯ ಮಲಿಯೂರು, ದೊಡ್ಡಸಿದ್ದು, ಸೋಮಣ್ಣ, ಪುಟ್ಟಸ್ವಾಮಿ, ಕೃಷ್ಣ, ರಾಜು, ಪಿ. ಗುರು ಇದ್ದರು.
ರಾಮದೇವ್ ಬಂಧನಕ್ಕೆ ಆಗ್ರಹ
ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಯೋಗ ಗುರು ಬಾಬಾ ರಾಮದೇವ್ ಅವರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಲು ಆಗ್ರಹಿಸಿ ಕರ್ನಾಟಕ ದಲಿತ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಧನಗಳ್ಳಿ ಕಿರಣ್‌ಕುಮಾರ್, ಮುಖಂಡರಾದ ಸುಹಾಶ್, ಮನು, ಮಂಜ, ಕೆ. ಕುಮಾರ್, ಸಂತೋಷ, ಅಭಿಷೇಕ್, ಸತೀಶ್, ಮಹೇಶ್, ಶಿವು, ರಾಜು, ಚೇತನ್, ಪ್ರೇಮ್, ಸಂದೀಪ್, ಲಕ್ಷ್ಮಣ, ಮಹದೇವಸ್ವಾಮಿ, ದೂರ ರಾಜೇಂದ್ರ, ಸಿದ್ದು ಮಾರ್ಬಳ್ಳಿ, ರಾಜಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.