ನೀರಿನ ಬವಣೆಗೆ ಜಿಟಿಡಿಯೇ ಕಾರಣ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಗೆ ಹಾಲಿ ಶಾಸಕ ಜಿ.ಟಿ. ದೇವೇಗೌಡರೇ ಕಾರಣ ಎಂದು ಹೊಸಹುಂಡಿ ಗ್ರಾಮದ ಎಚ್.ಸಿ. ಕೃಷ್ಣಪ್ರಸಾದ್ ಹಾಗೂ ಗೋಪಾಲಪುರ ಗ್ರಾಮದ ಜಿ.ಕೆ. ಬಸವಣ್ಣ ಆರೋಪಿಸಿದ್ದಾರೆ.
ಕೆ.ಆರ್.ಎಸ್ ಹಿನ್ನೀರಿನಿಂದ ಇಲವಾಲದ 52 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಬೀರಿಹುಂಡಿ ಭಾಗದ ಗ್ರಾಮಗಳು ಸೇರಿದ್ದವು. ಆಗ ಹುಣಸೂರು ಶಾಸಕರಾಗಿದ್ದ ಜಿಟಿಡಿ ತಮ್ಮ ಕ್ಷೇತ್ರಕ್ಕೆ ಹುಣಸೂರು ಗ್ರಾಮಗಳನ್ನು ಸೇರಿಸಿಕೊಂಡು, ಈಗ ಸಮಸ್ಯೆ ಉದ್ಭವಿಸಿರುವ ಗ್ರಾಮಗಳನ್ನು ಪಟ್ಟಿಯಿಂದ ತೆಗೆದು ಹಾಕಿದರು. ಈಗ ಸುಮ್ಮನೆ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಜಿಟಿಡಿಯವರ ಕೊಡುಗೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕ ಗೃಹ ಮಂಡಳಿಯ ಜಮೀನು ಹಗರಣದಲ್ಲಿ ರೈತರಿಗೆ ಅನ್ಯಾಯ ಮಾಡಿ ಕೋಟಿ ಕೋಟಿ ಹಣ ಮಾಡಿರುವ ಬಗ್ಗೆ ಲೋಕಾಯುಕ್ತರಲ್ಲಿ ಕೇಸು ದಾಖಲಾಗಿದೆ. ತನಿಖೆ ನಂತರ ಅವರ ನಿಜ ಬಣ್ಣ ಬಯಲಾಗಲಿದೆ. ಇನ್ನು ಮುಂದೆಯಾದರು ಸಿಎಂ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಮಾಜಿ ಶಾಸಕ ಎಂ. ಸತ್ಯನಾರಾಯಣ ಮಾಡಿರುವ ಕಾರ್ಯಗಳನ್ನೇ ತಮ್ಮದೆಂದು ಗುದ್ದಲಿಪೂಜೆ ಮಾಡುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಇಬ್ಬರು ಟೀಕಿಸಿದ್ದಾರೆ.
ವಾಸವಿ ಜಯಂತಿ ಆಚರಣೆ
ಮೈಸೂರು: ನಗರದ ಶ್ರೀರಾಮಪೇಟೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಾಸವಿ ಜಯಂತಿ ಆಚರಿಸಲಾಯಿತು. ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಅಭಿಷೇಕ, ಸುಪ್ರಭಾತ ಸೇವೆ, ಭಕ್ತರಿಗೆ ಉಪಾಹಾರ, ಅಖಂಡ ಭಜನೆ, ಮಧ್ಯಾಹ್ನ ಸುಮಂಗಲಿಯರಿಂದ ಸಪ್ತವರ್ಣ ಪುಷ್ಪ ಆರತಿ ಮಾಡಲಾಯಿತು. ಅಲ್ಲದೆ ಕನ್ಯಕಾಪರಮೇಶ್ವರಿಗೆ ಮಹಾಮಂಗಳಾರತಿ, ಮಂಟಪೋತ್ಸವ, ಆರ್ಯವೈಶ್ಯ ಭಕ್ತರಿಂದ ಅನ್ನ ಸಂತರ್ಪಣೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

