ಡಾ.ಸಿಪಿಕೆ ಸೇರಿ ಮೂವರಿಗೆ ಮುಕ್ತ ವಿವಿ ಗೌಡಾ
ಖರಗ್‌ಪುರ ಐಐಟಿ ಪ್ರಾಧ್ಯಾಪಕ, ಬರಹಗಾರ ಪ್ರೊ.ಆನಂದ ತೇಲ್ತುಂಬ್ಡೆ,
ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವದಲ್ಲಿ ಖರಗ್‌ಪುರ ಐಐಟಿ ಪ್ರಾಧ್ಯಾಪಕ, ಬರಹಗಾರ ಪ್ರೊ. ಆನಂದ ತೇಲ್ತುಂಬ್ಡೆ, ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಹಾಗೂ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ಅವರಿಗೆ ಗೌರವ ಡಾಕ್ಟರೇಟ್(ಡಿ.ಲಿಟ್) ಪ್ರದಾನ ಮಾಡಲಾಯಿತು.
ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶನಿವಾರ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಪ್ರೊ. ಆನಂದ ತೇಲ್ತುಂಬ್ಡೆ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ನಾನು ಏನಾದರೂ ಸಾಧಿಸಿದ್ದರೆ ಅದಕ್ಕೆ ಡಾ. ಅಂಬೇಡ್ಕರ್ ಕಾರಣ. ನಿಸ್ವಾರ್ಥವಾಗಿ ತುಳಿತಕ್ಕೊಳಗಾದವರ ಪರವಾಗಿ ಕೆಲಸ ಮಾಡುವುದನ್ನು ಭಗತ್ ಸಿಂಗ್ ಅವರಿಂದ ಕಲಿತೆ. ಡಾ.ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ನನ್ನ ಬಾಲ್ಯದ ಹಿರೋಗಳು. ನಾವು ದೌರ್ಬಲ್ಯದಲ್ಲಿ ಶಕ್ತಿಶಾಲಿ ಆಗಿದ್ದೇವೆ. ಜಾತಿ, ದಲಿತರು ಸಮಸ್ಯೆಯಿಂದಾಗಿ ಭಾರತ ಶಕ್ತಿಶಾಲಿಯಾಗಿಲ್ಲ. ಹೀಗಾಗಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಾಗಿ ಬರವಣಿಗೆ ಮೂಲಕ ಮಾಹಿತಿ ಒದಗಿಸುತ್ತಿದ್ದೇನೆ ಎಂದರು.
ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಮಾತನಾಡಿ, ನಾನು ಸಾಹಿತ್ಯ ಕ್ಷೇತ್ರದಲ್ಲಿ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಮಾಡುತ್ತ ಬಂದಿರುವ ಕೆಲಸವನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮೌಲಿಕವಾದದ್ದೆಂದು ಗುರುತಿಸಿ ಗೌರವ ಡಾಕ್ಟರೇಟ್ ದಕ್ಕಿದೆ ಎಂದು ಭಾವಿಸಿದ್ದೇನೆ. ಕುಲಾಧಿಪತಿಗಳು, ಕುಲಪತಿ, ವ್ಯವಸ್ಥಾಪನಾ ಮಂಡಳಿಯ ಯಾರೊಬ್ಬರ ಪರಿಚಯವೂ ನನಗಿಲ್ಲ. ಆಯಾಚಿತವಾಗಿ ಈ ಗೌರವವನ್ನು ನನಗೆ ಸಲ್ಲಿಸುತ್ತಿರುವುದು ಈ ಮುಕ್ತ ವಿವಿ ಸಹೃದಯ ಔದಾರ್ಯಕ್ಕೆ ಸಾಕ್ಷಿಯಾಗಿದೆ.
ಸಾಹಿತಿ ಡಾ. ಸಿಪಿಕೆ ಮಾತನಾಡಿ, ಸರಿಯಾಗಿ 40 ವರ್ಷಗಳ ಹಿಂದೆ ಮೈಸೂರು ವಿವಿ ಪಿಎಚ್.ಡಿ ಪದವಿಯನ್ನು ಪಡೆದ ನನಗೆ ಈಗ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ರಾಜ್ಯ ಮುಕ್ತ ವಿವಿ ಗೌರವ ಡಾಕ್ಟರೇಟ್ ಪದವಿ ನೀಡುತ್ತಿರುವುದು ಸಹಜವಾಗಿಯೇ ಸಂತೋಷ ತಂದಿದೆ.
ಈ ಪದವಿಗೆ ತಕ್ಕ ಯಾವ ಯೋಗ್ಯತೆ ನನಗಿದೆಯೋ ತಿಳಿಯದು. ಹಾಗೊಂದು ವೇಳೆ ಅಲ್ಪ ಸ್ವಲ್ಪ ಇದೆಯೆಂದರೂ ಗುರುತ್ವ ಗುರುತಿಸಿ ಗೌರವಿಸುವ ಕಾರ್ಯ ವಂದನೀಯವಲ್ಲವೇ. ಈ ಹೊತ್ತು ನನ್ನ ಮನೆಯಲ್ಲೇ ನನಗೆ ಗೌರವ. ಮನೆಯವರು ನಿಂದಿಸಿ, ಹೊರಗಿನವರು ಹೊಗಳಿದರೆ ಏನು ಬಂತು ಭಾಗ್ಯ? ನನ್ನ ಭಾಗಕ್ಕೆ ಹಾಗಾಗಿಲ್ಲ ಎಂಬುದು ಸಮಾಧಾನಕಾರ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

