ರಾಷ್ಟ್ರೀಯ ನೃತ್ಯೋತ್ಸವ
ಕ.ಪ್ರ.ವಾರ್ತೆ ಮೈಸೂರು ಮೇ 11
ಭೂಷಣ್ಸ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯ ಪ್ರಸ್ತುತಿ ಕೇಂದ್ರವು ಪಕ್ವಾ ಇಂಟರ್ನ್ಯಾಷನಲ್ ಸಹಕಾರದೊಂದಿಗೆ ವಿಶ್ವ ನೃತ್ಯ ಭೂಷಣ- ರಾಷ್ಟ್ರೀಯ ನೃತ್ಯೋತ್ಸವ ಅನ್ನು ಮೇ 14 ಮತ್ತು 15 ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ.
ವಿವಿಧ ರಾಜ್ಯಗಳ 13 ನೃತ್ಯ ತಂಡಗಳು ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶವಿದೆ ಎಂದು ಭೂಷಣ್ಸ್ ಪ್ರದರ್ಶಕ ಕಲೆ, ದೃಶ್ಯ ಪ್ರಸ್ತುತಿ ಕೇಂದ್ರದ ನಿರ್ದೇಶಕರಾದ ಭದ್ರಿ ದಿವ್ಯ ಭೂಷಣ್, ಡಾ.ಅಂಜನಾ ಭೂಷಣ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 14ರ ಸಂಜೆ 5.30ಕ್ಕೆ ಬೆಂಗಳೂರಿನ ಆತ್ಮಾಲಯ ನೃತ್ಯಶಾಲೆಯ ನಿರ್ದೇಶಕಿ ಡಾ.ಪದ್ಮಜಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಹೈದರಾಬಾದ್ನ ಕ್ರಾಂತಿ ನಾರಾಯಣ್ ತಂಡದಿಂದ ಕುಚಿಪುಡಿ, ಡಾ. ಪದ್ಮಜಾ ಸುರೇಶ್, ಡಾ.ಅಂಜನಾ ಭೂಷಣ್ ಅವರಿಂದ ಭರತನಾಟ್ಯ, ಮುಂಬೈನ ಸಜಿ ಮೆನನ್ ಅವರಿಂದ ಮೋಹಿನಿ ಆಟಂ, ಮುಂಬೈನ ಡಾ.ನೀತಾ ಸರ್ವೆ, ಚೇತನ್ ಸರೈಯಾ ಮತ್ತು ಸುಗಂಧ ಬಿಶ್ವಾಸ್ ಅವರಿಂದ ಕಥಕ್ ಹಾಗೂ ಮುಂಬೈನ ಮಾಧುರಿ ಪ್ರತಾಪ್ ಅವರಿಂದ ಭರತನಾಟ್ಯ ಪ್ರದರ್ಶನವಿದೆ ಎಂದರು.
ಮೇ 15ರ ಸಂಜೆ 5.45ಕ್ಕೆ ಚೆನ್ನೈನ ಪ್ರವೀಣ ವಾಡಪಲ್ಲಿ ಅವರಿಂದ ಭರತನಾಟ್ಯ, ಅನಂತಪುರದ ಪಟ್ನಮ್ ಶಿವಪ್ರಸಾದ್ ತಂಡದಿಂದ ಕುಚಿಪುಡಿ, ಗ್ವಾಲಿಯರ್ನ ಆದಿತಿ ನಿಗಮ್ ಅವರಿಂದ ಭರತನಾಟ್ಯ, ಭುವನೇಶ್ವರ್ನ ಮಂಜುಶ್ರೀ ಪಾಂಡ ಅವರಿಂದ ಒಡಿಸ್ಸಿ, ಹೈದರಾಬಾದ್ನ ಯಾಮಿನಿ ಕಲ್ಲೂರಿ ಅವರಿಂದ ಕುಚಿಪುಡಿ, ಪಶ್ಚಿಮ ಬಂಗಾಳದ ಅಭಿನಂದನ್ ಚಟರ್ಜಿ ಅವರಿಂದ ಕಥಕ್ ಹಾಗೂ ಗುವಾಹಟಿಯ ಪೋಂಪಿ ಗೋಗೈ ಅವರಿಂದ ಭರತನಾಟ್ಯ ಪ್ರದರ್ಶನವಿದೆ ಎಂದರು.
ಪಕ್ವಾ ಇಂಟರ್ನ್ಯಾಷನಲ್ನ ನಿರ್ದೇಶಕಿ ಶ್ರುತಿ ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

