ಕಾವೇರಿ ತಟದಲ್ಲೇ ನೀರಿಗೆ ಬರ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 18
ಸಮುದ್ರದ ನಂಟಿದ್ದರೂ ಉಪ್ಪಿಗೆ ಬರ ಎಂಬಂತೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಚುಂಚನಕಟ್ಟೆಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗದೆ ಸಮಸ್ಯೆ ಉಂಟಾಗಿದ್ದರೂ, ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸುತ್ತಿಲ್ಲ.
ಜಿಲ್ಲೆಯ ಉತ್ತಮ ಪ್ರವಾಸಿ ತಾಣ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಇಲ್ಲಿ 1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುಪ್ಪೆ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದು, ಜನತೆ ಕೈಪಂಪುಗಳನ್ನು ಆಶ್ರಯಿಸುವಂತಾಗಿದೆ. ಒಂದು ದಶಕದ ಹಿಂದೆ ನಿರ್ಮಿಸಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸಮರ್ಪಕ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡು ಟ್ಯಾಂಕ್‌ನ ಮೇಲಿನ ಮುಚ್ಚಳ ಇಲ್ಲದೆ ಗಾಳಿಯಲ್ಲಿ ಹಾರಿ ಬರುವ ಧೂಳು ಮತ್ತು ಪಕ್ಷಿಗಳ ಮಲ ಮೂತ್ರಗಳು ನೀರಿನೊಂದಿಗೆ ಬೆರೆತು ಗಬ್ಬು ನಾರುತ್ತಿದೆ.
ಟ್ಯಾಂಕ್‌ನಿಂದ ಸಂಪರ್ಕ ಕಲ್ಪಿಸಿರುವ ವಾಲ್ವ್‌ಗಳ ಗುಂಡಿಗಳಲ್ಲಿ ಪ್ಲಾಸ್ಟಿಕ್, ಕಸಕಡ್ಡಿಗಳು ನೀರಿನೊಂದಿಗೆ ಕೊಳೆತು ಸಂಗ್ರಹಗೊಂಡು ಕುಡಿಯುವ ನೀರಿನ ಜೊತೆಗೆ ಮಿಶ್ರಣವಾಗಿ ಬರುವ ನೀರನ್ನೇ ಸಾರ್ವಜನಿಕರು ಕುಡಿಯಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಸಮರ್ಪಕವಾಗಿ ನೀರು ಬಿಡದಿರುವುದು ಮತ್ತು ವಿದ್ಯುತ್ ಸಮಸ್ಯೆ ಕಾರಣ ಎಂದು ಗ್ರಾಪಂ ಸಿಬ್ಬಂದಿ ಸಿದ್ದ ಉತ್ತರ ನೀಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.
7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಕಿರು ನೀರು ಯೋಜನೆಯ ಮಿನಿ ಟ್ಯಾಂಕ್ ಇದ್ದರೂ ಕಾವೇರಿ ನದಿಯ ದಂಡೆಯಲ್ಲಿನ ಚುಂಚನಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಈಗಲಾದರು ಟ್ಯಾಂಕ್ ಅನ್ನು ದುರಸ್ಥಿಪಡಿಸಿ ವಾಲ್ವ್‌ಗಳನ್ನು ಸ್ವಚ್ಛಗೊಳಿಸಿ ಗ್ರಾಮಕ್ಕೆ ನಿಯಮಿತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾಪಂ ಮುಂದಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

