ಈಶಾನ್ಯ ರಾಜ್ಯ ಕರಕುಶಲ ಆರಂಭ
ಕ.ಪ್ರ.ವಾರ್ತೆ , ಮೈಸೂರು , ಮೇ 18
ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯವು ಅಂತಾರಾಷ್ಟ್ರೀಯ ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ಮತ್ತು ಜಾನಪದ ಕಲಾವಿದರ ವಸ್ತುಪ್ರದರ್ಶನ ಕಾರ್ಯಾಗಾರ ಆಯೋಜಿಸಿದೆ.
ಮೇ 18 ರಿಂದ 22 ರವರೆಗೆ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ನಾಗಲ್ಯಾಂಡ್ ರಾಜ್ಯದ ಕಲಾವಿದರು ಭಾಗವಹಿಸಿದ್ದಾರೆ. ಈ ಪ್ರದರ್ಶನದಲ್ಲಿ 14 ಮಳಿಗೆಗಳಿದ್ದು, ಮಣಿಪುರದ ಕಲಾವಿದರು ಈಚಲು ಮರದಿಂದ ಬುಟ್ಟಿ ತಯಾರಿಕೆ, ಅಸ್ಸಾಂ ಕಲಾವಿದರು ಜೊಂಡಿನಿಂದ ಬ್ಯಾಗ್, ಮಣಿಪುರ ಕಲಾವಿದರು ಮಣ್ಣಿನಿಂದ ಅಲಂಕಾರಿಕ ವಸ್ತುಗಳು, ತ್ರಿಪುರ ಕಲಾವಿದರು ಬಿದಿರಿನಿಂದ ಪೀಠೋಪಕರಣ, ಮೇಘಾಲಯದ ನೇಕಾರರು, ನಾಗಾಲ್ಯಾಂಡ್ ಕಲಾವಿದರು ಅಲಂಕಾರಿಕ ಆಯುಧಗಳ ತಯಾರಿಕೆ, ಬಿಹಾರ ಕಲಾವಿದರು ಸ್ಥಳೀಯ ಮಣ್ಣಿನಿಂದ ವಿಗ್ರಹ ತಯಾರಿಕೆ ಮಾಡಿದ್ದಾರೆ.
ಇದೆ ವೇಳೆ ಆಯೋಜಿಸಿದ್ದ ಚಿತ್ರಕಲಾ ಶಿಬಿರದಲ್ಲಿ ಸುಮಾರು 10 ಶಾಲೆಯ 38 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಶಿಬಿರಕ್ಕೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರು ಮಠ್ ಚಾಲನೆ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ಬಿಹಾರ ಕಲಾವಿದ ಲಾಲಾ ಪಂಡಿತ್ ಅವರು ಟೆರಾಕೋಟ ಮಣ್ಣಿನ ಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಜೊತೆ ಅವರ ಇಡಿ ಕುಟುಂಬ ಈ ಕಲೆಯಲ್ಲಿ ತೊಡಗಿಸಿಕೊಂಡಿದೆ. ಬಿಹಾರದ ದರ್ಭಾಂಗ ಜಿಲ್ಲೆಯ ಲಾಲ್ಬಾಗ್ನ ಪಾರಂಪರಿಕ ಕಲೆಯಾದ ಈ ಕಲೆಯನ್ನು ವಿಶ್ವ ಪ್ರಸಿದ್ಧಗೊಳಿಸಿದ್ದಾರೆ. ಮೈಸೂರಿಗೆ ಪ್ರಥಮ ಬಾರಿ ಭೇಟಿ ನೀಡಿರುವ ಅವರು ಟೋಕಿಯೋ, ವಾಷಿಂಗ್ಟನ್ ಡಿಸಿ (ಒಕ್ಲಹಾಮು ಸ್ಟೇಟ್), ಇಟಲಿಯ ಮಿಲಾನ್ಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಮಣ್ಣು ಬಳಿಸಿ ಪುರಾಣ ಪ್ರಸಿದ್ಧರಾದ ಗಣೇಶ, ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ನಾಗದೇವತೆ ಮುಂತಾದ ಮೂರ್ತಿಗಳನ್ನು ತಯಾರಿಸುವುದು ಇವರ ವಾಡಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

