ಮ್ಯಾನ್ ಹೋಲ್ ಮುಚ್ಚಲು ಕ್ರಮ
ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಗ್ರಾಮದ ಬಸ್ ನಿಲ್ದಾಣದ ಮುಂಭಾಗ ಮೈಸೂರು ಮಾನಂದವಾಡಿಯ ಮುಖ್ಯರಸ್ತೆಯ ಬದಿಯಲ್ಲಿರುವ ಬೋರ್ವೆಲ್ ಕೆಟ್ಟಿದ್ದು, ಬೋರ್ವೆಲ್ ಪಕ್ಕದಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರಿನ ಮೇನ್ ಮ್ಯಾನ್ ಹೋಲ್ ತೆಗೆದಿದ್ದು, ಅದರ ಮೇಲೆ ಚಪ್ಪಡಿಗಳನ್ನು ಹಾಕದೆ ಹಾಗೆಯೇ ಬಿಟ್ಟಿರುವುದರಿಂದ ರಾತ್ರಿ ವೇಳೆ ಪಾದಚಾರಿಗಳು ಓಡಾಡುವ ಜಾಗವಾಗಿದೆ. ಬಿದ್ದು ಗಾಯಾಳುಗಳಾಗುವ ಸಂಭವ ಇದೆ. ತುರ್ತಾಗಿ ಈ ಮ್ಯಾನ್ ಹೋಲ್ ಅನ್ನು ಮುಚ್ಚಿಸಬೇಕಾಗಿ ಹಾಗೂ ಕೆಟ್ಟಿರುವ ಬೋರ್ವೆಲ್ನ್ನು ರಿಪೇರಿ ಮಾಡಿಸಿಕೊಡಬೇಕೆಂದು ಮತ್ತು ಬೋರ್ವೆಲ್ ತುಂಬ ತಳಮಟ್ಟದಲ್ಲಿರುವುದರಿಂದ ಕಲುಷಿತ ನೀರೆಲ್ಲ ಅಲ್ಲೆ ಇಂಗಿ ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗಿದೆ. ಆದಕಾರಣ ಸ್ಥಳೀಯ ಗ್ರಾಪಂನವರು ಬೋರ್ವೆಲ್ ಮೇಲೆ ಒಂದು ಅಡಿಯವರೆಗೆ ಗಾರೆ ಹಾಕಿಸಿ ಕೊಳಚೆ ನೀರು ಹೋಗಲು ಚರಂಡಿಗಳನ್ನು ಶುಚಿ ಮಾಡಿಸಿ ಕೊಡಬೇಕೆಂದು ಒತ್ತಾಯ.
ಅಂತರಸಂತೆ ಗ್ರಾಮಸ್ಥರು
ಪಾದಚಾರಿ ಮಾರ್ಗದ ಒತ್ತುವರಿ
ಮೈಸೂರಿನ ಚಾಮರಾಜಪುರಂ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿರುವ ಮೈಸೂರು ಟೆನ್ನಿಸ್ ಕ್ಲಬ್ ವತಿಯಿಂದ ಪಾದಚಾರಿ ಮಾರ್ಗದ ಒತ್ತುವರಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ಟೆನ್ನಿಸ್ ಕ್ಲಬ್ ಸದಸ್ಯರ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ವ್ಯವಸ್ಥೆ ಕಲ್ಪಿಸಿವೆ. ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನು ಹೊತ್ತೊಯ್ಯುವ ಟೈಗರ್ ಕೈಕಟ್ಟಿ ಕುಳಿತಿದೆ. ದ್ವಿಚಕ್ರ ವಾಹನ ಸವಾರರ ಫೋಟೋ ಕ್ಲಿಕ್ಕಿಸುವ ಟ್ರಾಫಿಕ್ ಪೊಲೀಸರು, ಫೋಟೋಗ್ರಾಫರ್ಗಳು ಜಾಣಕುರುಡರಾಗಿದ್ದಾರೆ. ನಡೆದುಕೊಂಡು ಹೋಗುವ ಶ್ರೀಸಾಮಾನ್ಯನ ಹಿತದೃಷ್ಟಿ ಕಾಯುವವರಾರು?
ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಸಿಐಟಿಬಿ ಎರಡನೇ ಹಂತ, ಕುವೆಂಪುನಗರ
ಮುಖ್ಯಮಂತ್ರಿ ಆಡಳಿತದಲ್ಲಿ ವಿಫಲ
ನಾವು ಈ ರಾಜ್ಯದ ಮತದಾರರು ಹೇಳುತ್ತೇವೆ- ಸಿದ್ದರಾಮಯ್ಯನವರು ಉತ್ತಮ ಆಡಳಿತ ಕೊಡಲಾಗಲಿಲ್ಲ. ಉದಾ- ಅಕ್ರಮ- ಸಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿ 1 ವರ್ಷ ಮುಗಿಯಿತು. ಆದರೂ ಮಾಡಲಿಲ್ಲ. ಎಪಿಎಲ್ ಪಡಿತರರಿಗೆ 30 ಕೆಜಿ ಅಕ್ಕಿ ಕೊಡಲಾಗಲಿಲ್ಲ. ಶಾದಿಭಾಗ್ಯ ಬಡವ ಹಿಂದುಳಿದವರಿಗೂ ಹಂತ ಹಂತವಾಗಿ ವಿಸ್ತರಿಸುತ್ತೇವೆ ಎಂದು ಹೇಳಿದರು ಇದುವರೆಗೂ ಕೊಟ್ಟಿಲ್ಲ. ರಾಜ್ಯದ ರೈತರ ಕಷ್ಟಗಳ ಬಗ್ಗೆ ಗಮನ ಹರಿಸಿಲ್ಲ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಕೊಲೆ ಸುಲಿಗೆ, ಪುಂಡರ ಹಾವಳಿ ಹೆಚ್ಚಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ದಿನೇ ದಿನೇ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ತಿಂಗಳು ತಿಂಗಳು ಗಗನಕ್ಕೆ ಏರುತ್ತಿದೆ. ರಾಜ್ಯದ ನಿಷ್ಠ 9 ಜಿಲ್ಲೆಗಳಲ್ಲಿ ಆಗಾಗ್ಗೆ ಶೋಷಣೆಗಳು ನಡೆಯುತ್ತಿವೆ. ಇಷ್ಟೆಲ್ಲಾ ದುರಾಡಳಿತ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳ ಮಂತ್ರಿಮಂಡಲದ ಯಾವ ಬಾಯಲ್ಲಿ ಸಿದ್ದರಾಮಯ್ಯನವರನ್ನು ಹೊಗಳುತ್ತಿದ್ದಾರೆ. ನಿಜವಾಗಲು ಇವರಿಗೆ ಕಣ್ಣು, ಕಿವಿ, ಬಾಯಿ ಇದೆಯಾ ಮತದಾರ ಪ್ರಭುಗಳೇ ನೀವೆ ಹೇಳಿ ಸಿದ್ದರಾಮಯ್ಯನವರ ಒಂದು ವರ್ಷದ ಆಡಳಿತದ ಹರ್ಷ ತಂದಿದೆಯಾ?
ಎಂ.ಪಿ. ಪುಟ್ಟಮಲ್ಲಪ್ಪ, ಗಾಂಧಿನಗರ
ಕೊಳೆಗೇರಿ ನಿವಾಸಿಗಳ ಪಟ್ಟಿಗೆ ಮನವಿ
ಮೈಸೂರಿನ ಗಾಂಧಿನಗರದ ಸಿದ್ದಪ್ಪಾಜಿ ರಸ್ತೆ, 2 ಹಾಗೂ 3ನೇ ಮುಖ್ಯರಸ್ತೆ, ದುರ್ಗಾಂಭದೇವಿ ದೇವಸ್ಥಾನದ ಹಿಂಭಾಗ, ಲಿಡ್ಕರ್ ಕಾಲೋನಿ ಬಡಾವಣೆ ಹಾಗೂ ಕೊಳಚೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಸುಮಾರು 100 ವರ್ಷಕ್ಕೂ ಹೆಚ್ಚು ಹಳೇ ಕಾಲದ ಮಣ್ಣಿನ ಗೋಡೆಯಿಂದ ನಿರ್ಮಿಸಿದ ಹಂಚಿನ ಮನೆಗಳು ಸುಮಾರು ಶೇ.70 ರಷ್ಟು ಭಾಗ ಮಳೆಗಾಲದಲ್ಲಿ ಶಿಥಿಲಗೊಳ್ಳುತ್ತವೆ. ಇದರಿಂದ ಮನೆಯಲ್ಲಿ ವಾಸವಿರುವ ಮಕ್ಕಳು ಭಯಭೀತರಾಗಿದ್ದಾರೆ. 2011ನೇ ಸಾಲಿನಲ್ಲಿ ರಾಜೀವ್ಗಾಂಧಿ ಆವಾಜ್ ವಸತಿ ಯೋಜನೆಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಿ, ಮನೆಗಳನ್ನು ಸರ್ವೆ ಮಾಡಿ ಮೈಸೂರು ನಗರ ಪಾಲಿಕೆಗೆ ವರದಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಗರ ಪಾಲಿಕೆಯು ತಕ್ಷಣ ಕಾರ್ಯಪ್ರವೃತ್ತವಾಗುವಂತೆ ತಾವು ಆದೇಶ ನೀಡುವಂತೆ ಕೋರುತ್ತೇವೆ.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

