ಸಿಟಿ ಜಿಮ್ಖಾನ ತಂಡಕ್ಕೆ ಜಯ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 23
ನಾಗೇಶ್ ಮತ್ತು ಕಾರ್ತಿಕ್ ಅವರ ಅರ್ಧ ಶತಕದ ನೆರವಿನಿಂದ ಮೈಸೂರು ಸಿಟಿ ಜಿಮ್ಖಾನ ತಂಡ ಆರ್ಬಿಎನ್ಸಿಸಿ- ಬಿ ತಂಡದ ವಿರುದ್ಧ 135 ರನ್ಗಳ ಅಂತರದಲ್ಲಿ ಜಯಗಳಿಸಿತು.
ಮಾನಸ ಗಂಗೋತ್ರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ಸಿಟಿ ಜಿಮ್ಖಾನ ತಂಡ ನಿಗದಿತ 50 ಓವರ್ಗೆ ಏಳು ವಿಕೆಟ್ ಕಳೆದುಕೊಂಡು 284 ರನ್ಗಳಿಸಿತು. ತಂಡದ ಪರ ಟಿ.ಎನ್. ನಾಗೇಶ್(70) ಮತ್ತು ಕಾರ್ತೀಕ್ ಅಜೇಯ 84 ರನ್ ಕಲೆಹಾಕಿದರು. ಆರ್ಬಿಎನ್ಸಿಸಿ- ಬಿ ತಂಡವು 32.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ತಂಡದ ಪರ ಶ್ರೇಯಸ್(32) ರನ್ಗಳಿಸಿದರು.
ಗಂಗೋತ್ರಿ ಗ್ಲೇಡ್ಸ್ನಲ್ಲಿ ನಡೆದ ಮತ್ತೊಂದು ಪಂದ್ಯಾವಳಿಯಲ್ಲಿ ಎಂಯುಸಿಎಸ್ಸಿ ತಂಡದ ವಿರುದ್ಧ ಫ್ಯೂಚರ್ ಸಿಸಿ ತಂಡ 5 ವಿಕೆಟ್ ಅಂತರದಿಂದ ಜಯಗಳಿಸಿತು. ಎಂಯುಸಿಎಸ್ಸಿ ತಂಡ 49.3 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 180 ರನ್ಗಳಿಸಿದರೆ, ಫ್ಯೂಚರ್ ಸಿಸಿ ತಂಡ 44.1 ಓವರ್ಗೆ 5 ವಿಕೆಟ್ ಕಳೆದುಕೊಂಡು 181 ರನ್ಗಳಿಸಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರಾವಳಿ ಕ್ರಿಕೇಟರ್ಸ್ ತಂಡದ ವಿರುದ್ಧ, ಮೈಸೂರು ಜಿಮ್ಖಾನ ತಂಡ 7 ವಿಕೆಟ್ ಅಂತರದಲ್ಲಿ ಜಯಗಳಿಸಿತು. ಎಸ್ಜೆಸಿಇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಯನಗರ್ ಸಿಸಿ ವಿರುದ್ಧ ರೈಸಿಂಗ್ ಸ್ಟಾರ್ ತಂಡ 207 ರನ್ಗಳ ಅಂತರದಲ್ಲಿ ಜಯಗಳಿಸಿತು. ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜೈಯಿಂದ್ ತಂಡದ ವಿರುದ್ಧ ಪಿಇಟಿ ಸಿಸಿ ತಂಡ 3 ವಿಕೆಟ್ ಅಂತರದಲ್ಲಿ ಜಯಗಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

