ಅನ್ನಭಾಗ್ಯ ವಶ: ಇಬ್ಬರ ಬಂಧನ
ಮೈಸೂರು: ಪ್ರತ್ಯೇಕ ಕಡೆಗಳಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ದಾಸ್ತಾನು ಮಾಡಿದ್ದ ಒಟ್ಟು ರು. 50,000 ಮೌಲ್ಯದ ಪಡಿತರ ಅಕ್ಕಿ ಹಾಗೂ ಗೋದಿಯನ್ನು ಸಿಸಿಬಿ ಘಟಕದ ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಲಷ್ಕರ್ ಮೊಹಲ್ಲಾ ಅಶೋಕ ರಸ್ತೆ 15ನೇ ಪಶ್ಚಿಮ ಕ್ರಾಸ್ ರಸ್ತೆ ನಿವಾಸಿ ಸೈಯ್ಯದ್ ಎಕ್ಬಾಲ್ (31) ಹಾಗೂ ಮಂಡಿ ಮೊಹಲ್ಲಾ ಸೈಯ್ಯದ್ ಜಾಕೀರ್ ಪಾಷ (45) ಬಂಧಿತ ಆರೋಪಿಗಳು. ಸೈಯ್ಯದ್ ಎಕ್ಬಾಲ್ ಅಶೋಕ ರಸ್ತೆಯ 15ನೇ ಪಶ್ಚಿಮ ಕ್ರಾಸ್ನ ಮನೆಯೊಂದರಲ್ಲಿ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ವಿತರಿಸುವ 50 ಕೆ.ಜಿ. ಸಾಮರ್ಥ್ಯದ 23 ಚೀಲಗಳಲ್ಲಿ, 15 ಕೆ.ಜಿ. ತೂಕವಿರುವ 27 ಚೀಲಗಳಲ್ಲಿ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿದ್ದ. ಈತನು ಪ್ಯಾರು ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಸೈಯ್ಯದ್ ಜಾಕೀರ್ ಪಾಷ ಮನೆಯಲ್ಲಿ 50 ಕೆ.ಜಿ. ಸಾಮರ್ಥ್ಯದ 28 ಚೀಲ ಗೋದಿ ಹಾಗೂ 33 ಚೀಲಗಳಲ್ಲಿ ಅಕ್ಕಿಯನ್ನು ಸಂಗ್ರಹಿಸಿದ್ದ. ಈತನು ಅಕ್ಕಿಯನ್ನು ಬಾಬ್ಜಾನ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಸಿಸಿಬಿ ಇನ್ಸ್ಪೆಕ್ಟರ್ಗಳಾದ ಕೆ.ಎನ್. ಯಶವಂತಕುಮಾರ್, ಆರ್. ಜಗದೀಶ್, ಎಎಸ್ಐಗಳಾದ ಎಂ.ಜೆ. ಜಯಶೀಲನ್, ಎ. ಜಾರ್ಜ್ ಮತ್ತು ಸಿಬ್ಬಂದಿ ವಿಜಯ್, ಉಮೇಶ್, ಶ್ರೀನಿವಾಸಪ್ರಸಾದ್, ರಮೇಶ್, ಬಿ. ರಾಧೇಶ್, ಯಾಕೂಬ್ ಷರೀಫ್, ರಾಮಚಂದ್ರು, ಶ್ರೀಧರ್ಪ್ರಸಾದ್, ಸುನೀಲ್ ಹಾಗೂ ಮಲ್ಲಿಕಾರ್ಜುನ್, ಡಿ. ಸತೀಶ್, ಜಯಮ್ಮ ಅವರು ಈ ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

