ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಬೆಟ್ಟದಪುರದಿಂದ ಬಿ.ಕೆ.ಶ್ರೀಕಾಂತ್ ಪತ್ರ ಬರೆಯುತ್ತಾರೆ. 'ಡಿ.2 ಮೈಸೂರು ಆವೃತ್ತಿಯ ಪುಟ 10ರಲ್ಲಿ 'ಬುದ್ಧನ ಜನ್ಮ ಸ್ಥಳದಲ್ಲಿ ಬೌದ್ಧ ದೇಗುಲ ಪತ್ತೆ!' ಶೀರ್ಷಿಕೆಯ ಬಾಕ್ಸ್‌ನಲ್ಲಿ 'ಲುಂಬಿನಿ ಬಗ್ಗೆ' ಪ್ರಕಟಿಸಿದ್ದೀರಿ. 'ಈ ಸ್ಥಳದಲ್ಲಿ ವಿರಕ್ತ ನಿವಾಸಗಳ ಅಸಂಖ್ಯಾತ ಅವಶೇಷಗಳು, ಪವಿತ್ರ ಬೋ ಮರ ಹಾಗೂ ಸ್ನಾನದ ಕೊಳವೂ ಇದೆ'ಎಂದಿದೆ. 'ಬೋ' ಮರ ಎಂದರೆ ಬೋಧಿ ವೃಕ್ಷವೇ ಹೇಗೆ?'
'ಅದೇ ಪುಟದಲ್ಲಿ 'ತೆಹಲ್ಕಾ: ಕಾಂಗ್ರೆಸ್ ಮೌನಕ್ಕೆ ಬಿಜೆಪಿ ಅಚ್ಚರಿ' ಶೀರ್ಷಿಕೆಯಲ್ಲಿ ವಿವರಿಸುವಾಗ 'ಚರ್ಚೆಗೆಳೆದು ತಂದಿದ್ದಾರೆ ತಂದಿದ್ದಾರೆ' ಎಂದು ಎರಡು ಬಾರಿ ಮುದ್ರಿತವಾಗಿದೆ. ಪುಟ 8ರ 'ಕಾಡಾನೆ ಓಡಿಸಲು ಹೋದ ರೈತ ಬಲಿ' ಶೀರ್ಷಿಕೆಯ ಮೊದಲ ಪ್ಯಾರಾದಲ್ಲಿ ವಿವರ ಹೀಗಿದೆ. 'ಗದ್ದೆಗಳಿಗೆ ದಾಳಿ ಮಾಡುತ್ತಿದ್ದ ಕಾಡಾನೆಗಳನ್ನು ಓಡಿಸಲು ಹೋದ ರೈತನ ದಾಳಿ ಬಲಿಯಾಗಿದ ಘಟನೆ' ಎಂದಿದೆ. ಅದೇ ದಿನದ 'ಬೈಟುಕಾಫಿ'ಯಲ್ಲಿ ಎಸ್.ವಿರಂಗನಾಥ್ ಬಗ್ಗೆ ಬರೆದು ಮೊದಲ ಪ್ಯಾರಾದಲ್ಲಿ 'ಪಾರದರ್ಶಕ ಕ್ರಿಯೆ ವಿಸ್ಮಯಕಾರಿ..... ನಂತರ ಎರಡು ಸಾಲು ಗೋಜಲಾಗಿದೆ, ಇದೇನೆಂದು ತಿಳಿಸಿ. ಅದೇ ಲೇಖನದ ಕೊನೆಯಲ್ಲಿ 'ಅಂದರಿಕೆ ಮಂಚಿ ವಾಳ್ಳು'(ಎಲ್ಲರಿಗೂ ಒಳ್ಳೆಯವನಾಗಿರುವವ) ಎಂಬುದು ಖಂಡಿತ ವ್ಯಂಗ್ಯೋಕ್ತಿಯಲ್ಲ.'
'ಪುಟ 7ರ 'ಅನುಭವ ಮಂಟಪ'ದ ನಂಬಿರಾಜ್‌ರ 'ಗಾಳಿಪಟ'ದಲ್ಲಿ 'ನಾವೆಲ್ಲ ಈಗ ಹೇಗೆ ಒಂದಾಗಿದ್ದೇವೆ ನೋಡಿ' ಶೀರ್ಷಿಕೆಯ ಘಟನೆ ಪ್ರಕಟವಾಗಿದೆ. 'ನೀವೆಲ್ಲ ಕಣ್ಣುಮುಚ್ಚಿ ನಿದ್ದೆ ಮಾಡುತ್ತೀರಿ' ಎಂದಿದೆ. ಅವರು ಕಣ್ಣು ಮುಚ್ಚದೆ ನಿದ್ದೆ ಮಾಡ್ತಾರಾ ಸಾರ್?  ಚಿಕ್ಕಂದಿನಲ್ಲಿ ಊಟ ಮಾಡುವಾಗ ಮಾತನಾಡದೇ ಊಟ ಮಾಡ್ತಿರ್ಲಿಲ್ಲ. ಆಗ ಅಪ್ಪ ಬಾಯ್ಮುಚ್ಕೊಂಡ್ ಊಟ ಮಾಡೋ ಅಂತಿದ್ರು!' ಎಂದು ಬರೆದಿದ್ದಾರೆ.
'ಪಾರದರ್ಶಕ ಕ್ರಿಯೆ ವಿಸ್ಮಯಕಾರಿ.....' ನಂತರ ಏ್ಟಟಿಜಡಡಿಣ ್ಝಡ ಝಿಜ ಜ್ಝ್ಠಿಡಡಿ ಝಛಛಠಡಿಜ್ಠ ್ಝಟಿ ಝಿಜ ಛ್ಟ್ಟ್ಞಿ ್ಟಜಿ ಢ್ಝಿಡಜ್ಟಟ ಎಂದಾಗಬೇಕಿತ್ತು. ಇಂಗ್ಲಿಷ್‌ನಲ್ಲಿದ್ದ ಸಾಲನ್ನುಪುಟ ನಿರ್ವಾಹಕರು ಕನ್ನಡದ ಫಾಂಟ್ ಬಳಸಿದ್ದರಿಂದ ಹಾಗೆ ಓದಲು ಅಸಾಧ್ಯವಾದ ಲಿಪಿಯಲ್ಲಿ ಪ್ರಕಟವಾಗಿದೆ. ಇನ್ನು ಕಾಡಾನೆ ಸುದ್ದಿಗೆ ಸಂಬಂಧಿಸಿ 'ಕಾಡಾನೆ ಓಡಿಸಲು ಹೋದ ರೈತ ಆನೆಯ ದಾಳಿಗೆ ಬಲಿಯಾದ ಘಟನೆ......' ಎಂದು ಸ್ಪಷ್ಟವಾಗಿ ಬರೆದಿದ್ದರೆ ಯಾವುದೇ ಗೊಂದಲವಿರುತ್ತಿರಲಿಲ್ಲ.
ಬೆಂಗಳೂರಿನಿಂದ ಮಹಾಂತೇಶ್ ಪಾಟೀಲ್ ಎಂಬುವವರು ಕರೆ ಮಾಡಿ ಡಿ.11ರ ಸಂಚಿಕೆಯ 2ನೇ ಪುಟದಲ್ಲಾದ ತಪ್ಪನ್ನು ಗಮನಕ್ಕೆ ತಂದಿದ್ದಾರೆ. "ಅಂಗವಿಕಲ ಬಾಲಕನ ಬಿಟ್ಟುಹೋದ ಪಾಲಕರು' ಎಂಬ ಸುದ್ದಿ ಪ್ರಕಟವಾಗಿದೆ. ಇದರಲ್ಲಿ 2 ವರ್ಷದ ಮಗು ಅಥವಾ ಶಿಶುವಿಗೆ ನೀವು ಬಾಲಕ ಎಂದು ಬರೆದಿದ್ದೀರಿ. ಮಗು, ಶಿಶು ಹಾಗೂ ಬಾಲಕನಿಗೆ ಇರುವ ವ್ಯತ್ಯಾಸ ದಯವಿಟ್ಟು ತಿಳಿಸಿ ಎಂದು' ದೂರವಾಣಿ ಕರೆ ಮಾಡಿ ಮನವಿಮಾಡಿದ್ದಾರೆ.
ಎರಡು ವರ್ಷದವರೆಗೆ ಶಿಶು, ನಂತರದ 9 ವರ್ಷದವರೆಗೆ ಮಗು, 18 ವರ್ಷದವರೆಗೆ ಬಾಲಕ, ನಂತರ ಯುವಕ, ವಯಸ್ಕ, ಹಿರಿಯ ಎಂದೆಲ್ಲ ವರ್ಗೀಕರಿಸಲಾಗುತ್ತದೆ. ಆದರೆ ಈ ಸುದ್ದಿಯಲ್ಲಿ ಬಾಲಕ ಎಂದು ಬಳಸುವ ಬದಲಿಗೆ ಶಿಶು ಅಥವಾ ಮಗು ಎಂದು ಬರೆಯಬೇಕಿತ್ತು.

-ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.