ದೇವಸ್ಥಾನಕ್ಕೆ ಹೋದಾಗ ಗಂಟೆ ಹೊಡಿತಾರಲ್ಲ ಏಕೆ?

Updated on: 

ರಮೇಶ ಭಟ್, ಆವರ್ಸೆ 9164276058
ಭಕ್ತಾದಿಗಳು ದೇವಸ್ಥಾನಕ್ಕೆ ಹೋದಾಗ ಗಂಟೆ ಹೊಡಿತಾರಲ್ಲ ಏಕೆ?
ದೇವರೇ, ನಿಂಗೆ ಕ್ಲಾಸ್ ತಗೋಳೋಕೆ ಬಂದಿದೀನಿ ಅನ್ನೋದರ ಸೂಚನೆ!ಅನ್ಸುತ್ತೆ...

ಕೆನ್ನಾಳು ಭಾಸ್ಕರ್, ಪಾಂಡವಪುರ 9036416729
ತಪಸ್ಸು ಮಾಡಬೇಕೆಂದಿದ್ದೇನೆ, ತಾವು ಏನಂತೀರಿ?
ಈ ಕಾಲದಲ್ಲಿ ಹಂಗೆಲ್ಲ ಮಾಡಿದರೆ ಮೇನಕೆ ಸಿಗಲ್ಲ, ಗೊತ್ತಿರಲಿ!

ಜೆ. ಪಿ. ನಾಗರಾಜ, ದಾವಣಗೆರೆ 9901193811
ಪ್ರೀತಿ ಯಾರು ಸೃಷ್ಟಿಸಿದ್ದು?
ಪ್ರೀತಿ ಏನೆಲ್ಲ ಸೃಷ್ಟಿಗೆ ಕಾರಣವಾಗಿದೆ ಎಂಬ ಕುರಿತಷ್ಟೇ ನಮ್ಮ ಆಸಕ್ತಿ.

ಹರಳಹಳ್ಳಿ ಪುಟ್ಟರಾಜು, 9632838088
ಕವಿಗಳು ಹೆಣ್ಣನ್ನು ಬಳಕುವ ಬಳ್ಳಿಗೆ ಹೋಲಿಸುವುದೇಕೆ?
ಆದಿಕವಿಗಳ ಕಾಲದಲ್ಲಿ ಪ್ಲಾಸ್ಟಿಕ್ ಹಗ್ಗ ಇರಲಿಲ್ಲ ಅನ್ಸುತ್ತೆ...

ಬೋ. ಪಾ. ವೆಂಕಟೇಶ, ಹೊಸಕೋಟೆ
ಮಾರ್ಕೆಟ್‌ನಲ್ಲಿ ರೆಡಿಮೇಡ್ ಗಂಡ ಸಿಗುವಂತಿದ್ದರೆ?
ಟೊಮೇಟೊ ಮಾರಾಟವಾಗದೇ ರಸ್ತೆಗೆ ಸುರಿದ ರೈತರ ಸುದ್ದಿ ಏಕಾಏಕಿ ನೆನಪಾಗುತ್ತಿದೆಯಲ್ಲ!?

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com