ಹೆಂಡತಿ ಕಾಟಕ್ಕೂ, ಸೊಳ್ಳೆ ಕಾಟಕ್ಕೂ ಏನು ವ್ಯತ್ಯಾಸ?
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9900739725
ಹೆಂಡತಿ ಕಾಟಕ್ಕೂ, ಸೊಳ್ಳೆ ಕಾಟಕ್ಕೂ ಏನು ವ್ಯತ್ಯಾಸ?
ಒಂದು ಹೊಡೆದ್ರೆ ಸೊಳ್ಳೆ ಸಾಯುತ್ತೆ. ಹೆಂಡತಿಗೆ ಹೊಡೆದ್ರೆ ಜೈಲಿಗೆ ಹೋಗ್ಬೇಕಾಗುತ್ತೆ!
ವಿ. ಹೇಮಂತಕುಮಾರ ಬೆಂಗಳೂರು, 9035992900
ನಿನ್ನ ಮುನಿಸನ್ನು ಕ್ಷಣಕಾಲ ದೂರಸರಿಸಿ, ನನ್ನೊಂದಿಗೆ ತುಸು ತುಂಟಾಟಕ್ಕಿಳಿಯಬಾರದೇ ನನ್ನ ನಲ್ಲ ಅಂತ ಸಂದೇಶ ಕಳಿಸಿದ್ದಾಳಲ್ಲ?
ಆಗಲೇ ನಿನ್ನ ಮೀಸೆ ಮೇಲೆ ಕಾಣಿಸುತ್ತಿದೆ.
ಚಿರಪ್ರಭ ನಂಜನಗೂಡು, 8553793107
ವಾಸಕ್ಕೆ ಆಶ್ರಯ ಮನೆ, ಊಟಕ್ಕೆ 1ಕ್ಕೆ 1 ಕೆ.ಜಿ. ಅಕ್ಕಿ ಮುಂದೆ?
10ಕ್ಕೆ ಕ್ವಾರ್ಟರ್ ಸಾರಾಯಿ, ಜತೆಗೆ ಉಪ್ಪಿನಕಾಯಿ ಫ್ರೀ!
ಫ್ಯಾಷನ್ ಡಿಸೈನರ್ ಮಧು, 9945737427
ಸ್ವಲ್ಪ 'ಫಿಗರ್' ಮೆಂಟೇನ್ ಮಾಡಿದ್ರೆ ನರ್ಸ್ ಜಯಲಕ್ಷ್ಮಿ ಸಿನಿಮಾ ಹಿರೋಯಿನ್ ಆಗಬಹುದಲ್ವಾ?
ಅವರಿಗೆ ಫಿಗರ್ ಇದ್ದಾಗ ಪ್ರಚಾರ ಸಿಗಲಿಲ್ಲ, ಪ್ರಚಾರ ಸಿಕ್ಕಾಗ ಫಿಗರ್ ಇರಲಿಲ್ಲ!
ವಿಷ್ಣುಶಂಕರ್, ಶಿವಮೊಗ್ಗ
ಸ್ವಚ್ಛಂದವಾಗಿ ಹಾಡುತ್ತ ಹಾರಾಡುವ ಗಿಣಿಯನ್ನು ಪಂಜರದಲ್ಲಿಟ್ಟು ಪ್ರೀತಿ ಅನ್ನುತ್ತಾರಲ್ಲ?
ದೇವರು ಸರ್ವಾಂತರ್ಯಾಮಿ ಅಂತ ಹೇಳಿ ದೇವಿಸ್ಥಾನದಲ್ಲಿಟ್ಟು ಪೂಜಿಸುವ ಹಾಗೆ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

