ಸಂಪಾದಕೀಯ

ನಾವೆಷ್ಟು ಪುಣ್ಯವಂತರು!

Published On :

ದಿನಾಂಕ 19.07.2013ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನಮ್ಮ ರಾಜ್ಯದ ಘಟನೆಗಳನ್ನು ಓದಿ ನಾವೆಷ್ಟು ಪುಣ್ಯವಂತರು ಎಂದು ತುಂಬಾ ಖುಷಿಪಟ್ಟೆ.
1. ವಿಧಾನಸಭೆಯಲ್ಲಿ ಹಿಂದಿನ ಮಂತ್ರಿಯೋರ್ವರ ಭಾವಚಿತ್ರವನ್ನು ತೆಗೆದು ಹಾಕಿದ್ದರಿಂದ, ಆ ಮಂತ್ರಿಯ ಜಾತಿಯವರು ವಿರೋಧವನ್ನು ವ್ಯಕ್ತಪಡಿಸಿದರು.
2. ಒಂದು ಜಾತಿಯ ಮಠದ ವಿದ್ಯಾಸಂಸ್ಥೆಯ ಮೇಲೆ ಕೇಂದ್ರ ಸರ್ಕಾರದ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳ ದಾಳಿಗೆ ಪ್ರತಿಯಾಗಿ ಆ ಮಠದ ಜಾತಿಯ ಜನರಿಂದ ಆಕ್ರೋಶ, ವಿರೋಧ.
3. ಪಂಚ್‌ಮುಖಿಯಲ್ಲಿನ ನೀರಿನ ವಿಚಾರ. ಕಾವೇರಿ ಮತ್ತು ಇನ್ನಿತರ ಜಲಾಶಯಗಳ ನೀರಿನ ಮಟ್ಟ, ನಮಗಿಂತಲೂ ತಮಿಳುನಾಡಿನ ಮಂತ್ರಿಗಳಿಗೆ ಹೆಚ್ಚು ನಿಖರ ಮಾಹಿತಿ ಇರುವುದೆಂದು. ಮೇಲ್ನೋಟಕ್ಕೆ ಇದು ತುಂಬಾ ಸಣ್ಣ ವಿಷಯ, ಹಾಸ್ಯವೆನಿಸಿದರೂ ಇದರ ಹಿಂದಿನ ಅರ್ಥ ನಮ್ಮ ರಾಜ್ಯದ ನಾಯಕರಿಗಿಂತ ತಮಿಳುನಾಡಿನ ಮಂತ್ರಿಗಳಿಗೆ ರಾಜಕೀಯಬದ್ಧತೆ, ಹಠದಿಂದ ಕಾಲಕಾಲಕ್ಕೆ ಹೆದರಿಸಿ, ಬೆದರಿಸಿ, ನೀರು ಹರಿಸಿಕೊಳ್ಳುವ ಬುದ್ಧಿವಂತಿಕೆ. ನಮ್ಮ ರಾಜ್ಯದ ಅನೈಕತೆ, ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ದುರ್ಬಲ ರಾಜಕೀಯವೇ ಕಾರಣ. ನಮ್ಮ ರಾಜ್ಯದ ನೀರಾವರಿ ಕಾಲುವೆಗಳ ನಿರ್ವಹಣೆಯಲ್ಲಿ ಭ್ರಷ್ಟಾಚಾರ, ಕಾಲುವೆ ನಿರ್ಮಾಣದಲ್ಲಿ ದೋಷ, ಕಳಪೆ ಕಾಮಗಾರಿ ಕಡಿಮೆ ಗುಣಮಟ್ಟ ನೀರು ಹರಿಸಲು ರಾಜಕೀಯ. ಪದೇ ಪದೇ ಕಾಲುವೆಗಳ ರಿಪೇರಿ ಇಂಥಹ ದೋಷಗಳಿಂದ ನೀರಾವರಿಯಲ್ಲಿ ಹಿಂಜರಿತ. ನಾನು ಒಬ್ಬ ಅಧಿಕಾರಿ. ನಾನು ವರ್ಗಾವಣೆಯಾದೆ. ನನ್ನ ಬೆಂಬಲಕ್ಕೆ ಯಾವ ಮಂತ್ರಿಯೂ ಇಲ್ಲ. ಆದರೆ ಕೆಲವು ದಿನಗಳ ಹಿಂದೆ ಒಂದು ಜಾತಿ ಮಂತ್ರಿಯವರು ಅವರ ಜಾತಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಆಂದೋಲನ ಮಾಡುವುದಾಗಿ ಬೆದರಿಕೆ ಹಾಕಿದರು. ನನ್ನ ಜಾತಿಯ ಜನಸಂಖ್ಯೆ ಕೇವಲ ಒಂದು ಅಥವಾ ಎರಡು ಪ್ರತಿಶತ. ನಮ್ಮ ಓಟು ಯಾವ ಲೆಕ್ಕಕ್ಕೂ ಇಲ್ಲ. ಹಾಗಾಗಿ ನಮ್ಮ ಸಮಸ್ಯೆಗಳಿಗೆ ಯಾರೂ ಕ್ಯಾರೆ ಎನ್ನುವುದಿಲ್ಲ. ಕೆಲವು ಪಕ್ಷಗಳು ಅಧಿಕಾರಕ್ಕಾಗಿ, ಓಟಿಗೋಸ್ಕರ, ಧರ್ಮದ ಅಡಿಪಾಯಕ್ಕೆ ಮುಲಾಮು ಹಚ್ಚುತ್ತಾರೆ. ಕೆಲವು ನಾಯಕರಂತೂ ನಮ್ಮ ಧರ್ಮವೇ ಅತ್ಯಂತ ಶ್ರೇಷ್ಠ. ನಮ್ಮ ಧರ್ಮವನ್ನು ಬಿಟ್ಟು ಬೇರಾವ ಧರ್ಮವೂ ಪ್ರಪಂಚದಲ್ಲಿ ಇರಬಾರದೆಂಬ ಧರ್ಮಾಂಧತೆ. ಇಂಥಹ ವಾತಾವರಣವಿರುವ ದಿನಗಳಲ್ಲಿ ನಮ್ಮ ನಾಯಕರಿಗೆ ಈ ರಾಜ್ಯದ, ರಾಷ್ಟ್ರದ ನೆಮ್ಮದಿ, ಅಭಿವೃದ್ಧಿಗೆ ಕಾಲ, ಹಣ, ಕಾರ್ಯಬದ್ಧತೆ ಎಲ್ಲಿದೆ?
-ಕೆ.ಎಸ್. ಕೃಷ್ಣಮೂರ್ತಿ, ಮೈಸೂರು.

ನಿರುದ್ಯೋಗಿ ದೈಹಿಕ ಶಿಕ್ಷಕರ ಗೋಳು

ದೈಹಿಕ ಶಿಕ್ಷಕರ ಕಡ್ಡಾಯ ನೇಮಕಾತಿಗೆ 6-8-2007ರಂದು ರಾಜ್ಯಪತ್ರ 43 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡಾ ಶಿಕ್ಷಕರಿಲ್ಲದ್ದು ಸತ್ಯ-ವಿಚಿತ್ರ. ಕುಂಭಕರ್ಣನ ಗಾಢ ನಿದ್ರೆಯಲ್ಲಿ ಮಲಗಿದೆ ಶಿಕ್ಷಣ ಇಲಾಖೆ ಮಾತ್ರ ಬಡಿದೆಬ್ಬಿಸಲು ಹೊಸ ಶಿಕ್ಷಣ ಸಚಿವರು ವಹಿಸಲೇ ಬೇಕು ಮುಖ್ಯಪಾತ್ರ! 15.06.2007ರಂದು ಸರ್ಕಾರದ ಸಚಿವ ಸಂಪುಟ ಸಮಿತಿ 952 ದೈಹಿಕ ಶಿಕ್ಷಕರನ್ನು ವಯೋವುತಿ ಮೇಲೆ ನಿಯೋಜಿಸಲು ಅನುಮತಿ. ಅಧಿಸೂಚನೆಗೆ ಆಗ್ರಹಿಸಿ ಬಿಜೆಪಿ ಸರ್ಕಾರಕ್ಕೆ 425 ಮನವಿಗಳ ವಿನಂತಿ. ಆದರೂ ಶಿಕ್ಷಣ ಸಚಿವರಾಗಿದ್ದ ಕಾಗೇರಿ ಮಾಡಲಿಲ್ಲ ದೈಹಿಕ ಶಿಕ್ಷಕರ ನೇಮಕಾತಿ! ನೊಂದು ಬೆಂದ ವಯೋವುತಿ ಮೀರುತ್ತಿರುವ 3 ನಿರುದ್ಯೋಗಿ ದೈಹಿಕ ಶಿಕ್ಷಕರು 29.06.2010ರಂದು ಬೆಂಗಳೂರಿನಲ್ಲಿ ಧರಣಿ ಮಾಡುತ್ತ ವಿಷ ಕುಡಿದರು. ಆಗ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆ ಕಾರ್ಯಗತಗೊಳಿಸದೇ ಅಳುತ್ತಲೇ ರಾಜಿನಾಮೆ ನೀಡಿದರು! ಸಿಂಹಾಸನ ಏರಿದ ನಗುವ ಮುಖ್ಯಮಂತ್ರಿ ಸದಾನಂದಗೌಡರು ಹುಸಿ ಆಶ್ವಾಸನೆ ನೀಡಿ, ನಗುನಗುತ್ತಲೇ ಕೈ ಕೊಟ್ಟರು. ಆಸೆ ಚಿಗುರಿಸಿದ ಮೌನ ಮುಖ್ಯಮಂತ್ರಿ ಜಗದೀಶ ಶೆಟ್ಟರು 45 ಮನವಿಗಳಿಗೆ ಸ್ಪಂದಿಸದೇ ತಣ್ಣೀರು ಬಿಟ್ಟರು!  ಸಿದ್ದರಾಮಯ್ಯನವರು ಸದನದಲ್ಲಿ ತೋಳು ತಟ್ಟಿದ ಜಟ್ಟಿ ಮುಖ್ಯಮಂತ್ರಿಯಾಗಿ ಈಗ ಕುಳಿತುಕೊಂಡರೆ ಹೇಗೆ ಕೈ ಕಟ್ಟಿ? 80 ಸಾವಿರ ನಿರುದ್ಯೋಗಿ ದೈಹಿಕ ಶಿಕ್ಷಕರ ಹಸದೈತಿ ಹೊಟ್ಟೆ 952 ವಯೋವುತಿ ಹುದ್ದೆಗಳ ನೇಮಕ ಮಾಡಿ ನೀಡುವರೇ ಅನ್ನಾಕ ಒಂದರೊಟ್ಟಿ?
-ಎಂ.ಡಿ. ಹೊಟೆಗಾಳಿ.  ಹುಬ್ಬಳ್ಳಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.