ಈ ಕಾಲದಲ್ಲೇಕೆ ಪುರಂದರದಾಸರಂಥವರು ಹುಟ್ಟುತ್ತಿಲ್ಲ?

Updated on: 

ಕೆನ್ನಾಳು ಭಾಸ್ಕರ್, 9036416729
ನಾವು ನಾಗರೀಕರಾಗೋದು ಇನ್ನು ಯಾವ ಶತಮಾನಕ್ಕೆ?
ಮಾನವಿದ್ದರೆ ಸಾಕು, ಶತಮಾನದ ಲೆಕ್ಕ ಬೇಡ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 9632838088
ಈ ಕಾಲದಲ್ಲೇಕೆ ಪುರಂದರದಾಸರಂಥವರು ಹುಟ್ಟುತ್ತಿಲ್ಲ?
ಹುಟ್ಟಿದರೂ ಬೆಳೆಯುತ್ತ ಹೋದಂತೆಲ್ಲ ಅವರನ್ನು ಸಾಫ್ಟ್‌ವೇರ್ ಎಂಜಿನಿಯರ್ ಆಗಿಸುವ ಕಲೆ ಪಾಲಕರಿಗೆ ಸಿದ್ಧಿಸಿದೆ!

ಸರಸ್ವತಿ ರಮೇಶ್, ಹನುಮನಾಳು
ಹೆಣ್ಣು ಮಾಯೆಯಂತೆ. ಗಂಡು...?
ಇದೇನ್ ಮಾಯೆ ನೋಡೇಬಿಡೋಣ ಅಂತ ಹೊರಟ ಅನ್ವೇಷಕ!

ರಮೇಶ್ ಭಟ್ ಆವರ್ಸೆ, ಕುಂದಾಪುರ 9164276058
ಹುಡುಗರ ಹಾಸ್ಟೆಲ್, ಹುಡುಗಿಯರ ಹಾಸ್ಟೆಲ್ ಒಟ್ಟಿಗೇ ಇದ್ದರೆ...?
ಶಿಶು ವಿಹಾರಕ್ಕೆ ಬೇಡಿಕೆ ಬರುವ ಅಪಾಯ!

ಕಾಳಿದಾಸ, ರಾಮಕೃಷ್ಣನಗರ, ಮೈಸೂರು
ಭಾರತೀಯರು ಸೊನ್ನೆಯನ್ನು ಕಂಡು ಹಿಡಿಯದಿದ್ದರೆ ಏನಾಗುತ್ತಿತ್ತು?
ಎಲ್ಲದರಲ್ಲೂ ಭಾರತದ್ದು ಶೂನ್ಯ ಸಾಧನೆ ಎಂದು ಬಯ್ದುಕೊಳ್ಳೋದು ತಪ್ತಿತ್ತು ಅಂತೀರಾ?

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com