ಪಾಕಿಸ್ತಾನದ ಜನತಂತ್ರ
1947ರ ಆಗಸ್ಟ್ 14 ರಂದು ಸ್ಥಾಪನೆಯಾದ ಪಾಕಿಸ್ತಾನದಲ್ಲಿ 2013 ಮಾರ್ಚ್ 16ರ ವರೆಗೆ ಜನತಾಂತ್ರಿಕವಾಗಿ ರಚನೆಯಾಗಿದ್ದ ಯಾವ ಸರ್ಕಾರವೂ ತನ್ನ ಪೂರ್ಣಾವಧಿಯನ್ನು ಮುಗಿಸಿರಲಿಲ್ಲ. ಕಳೆದ ಶನಿವಾರ ಪಾಕಿಸ್ತಾನದ ರಾಜಕೀಯ ನಾಯಕರು ಆ ಕಳಂಕವನ್ನು ತೊಳೆದುಕೊಂಡರು. ಅಲ್ಲಿನ ಇತ್ತೀಚಿನ ಸರ್ಕಾರ ಶನಿವಾರ ತನ್ನ ಚುನಾಯಿತ ಅವಧಿಯನ್ನು ಪೂರೈಸಿ, ಮುಂದಿನ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಅಲ್ಲಿನ ಸಂವಿಧಾನದಂತೆ ಒಂದು ಹಂಗಾಮಿ ಸರ್ಕಾರಕ್ಕೆ ವಹಿಸಿಕೊಟ್ಟಿದೆ.
ಇನ್ನು ಮೂರು ತಿಂಗಳಲ್ಲಿ ಹಂಗಾಮಿ ಸರ್ಕಾರ, ಅಲ್ಲಿ ಚುನಾವಣೆಯನ್ನು ನಡೆಸಿ ಹೊಸ ಸರ್ಕಾರದ ರಚನೆಗೆ ಮುಂದಾಗಬೇಕಿದೆ. ಈ ಬೆಳವಣಿಗೆ ನಿಜವಾಗಲೂ ಸ್ವಾಗತಾರ್ಹ. ಯಾವುದೇ ದೇಶದಲ್ಲೇ ಆದರೂ ಜನತಾಂತ್ರಿಕ ವ್ಯವಸ್ಥೆ ಗಟ್ಟಿಯಾದರೆ ಜನತಾಂತ್ರಿಕ ಭಾರತ ಅದನ್ನು ಸ್ವಾಗತಿಸಲೇ ಬೇಕು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ಜನತಾಂತ್ರಿಕ ಪ್ರಯೋಗ ಅಷ್ಟೇನೂ ಹಿತವಾಗಿರಲಿಲ್ಲ. ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸೇನೆಗೇ ಹೆಚ್ಚು ಅಧಿಕಾರ ಇದ್ದಿದ್ದೂ ನಿಜ. ಆದರೂ ಸೇನಾ ನಾಯಕರು ಜನತಾಂತ್ರಿಕ ಚೌಕಟ್ಟನ್ನು ಉಳಿಸಿಕೊಳ್ಳುವ ಪ್ರಯತ್ನ ನಡಸುತ್ತಿರುವ ಹೇಳಿಕೆಗಳನ್ನಂತೂ ನೀಡುತ್ತಿದ್ದರು.
ಅಂತರಂಗದಲ್ಲಿ ಸೇನೆಯ ಪ್ರಮುಖರು ಪಾಕಿಸ್ತಾನಿ ಜನ ಸಮುದಾಯಗಳ ಹಕ್ಕುಗಳ ದಮನ ಮಾಡಲೂ ಬಯಸಿದ್ದು, ಭಾರತದ ವಿರುದ್ಧದ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದೂ ನಿಜ. ಈಗ ಪರಿಸ್ಥಿತಿ ಸುಧಾರಿಸಬಹುದೆನ್ನುವುದು ಭಾರತದ ನಿರೀಕ್ಷೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

