ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಎನ್. ರಾಮಕೃಷ್ಣ ಹೊಳ್ಳ ಅವರು ಬರೆಯುತ್ತಾರೆ- 'ಫೆ.20ರ 'ಕನ್ನಡಪ್ರಭ'ದ 'ಬೈಟುಕಾಫಿ'ಯಲ್ಲಿ ಬಂದ 'ಟೈರ್' ಲೇಖನದ ಬಗ್ಗೆ ಬಹಳ ಅದ್ಭುತವಾಗಿ ತಿಳಿಸಿದ್ದೀರಿ. ಬರೀ ವಾಹನಕ್ಕೆ ಹಾಕುವ ಟೈರ್‌ನ ಹಿಂದೆ, ಅಷ್ಟೆಲ್ಲ ವಿಷಯಗಳು ಅಡಗಿವೆ, ಅಂತ ನಿಮ್ಮ ಪತ್ರಿಕೆಯಲ್ಲಿ ಬಂದ ಮೇಲೆ ಗೊತ್ತಾಯಿತು. ಅದಕ್ಕೆ ನಮ್ಮ 'ಕನ್ನಡಪ್ರಭ'ಕ್ಕೆ ಅನಂತ ವಂದನೆಗಳು. ಅಂದ ಹಾಗೇ, ಬೇಬಿ ಸಿಂಧು ಕಿರುತೆರೆಗೆ ಎಂಟ್ರಿ ಕೊಟ್ಟ ಮೊದಲ ಧಾರವಾಹಿ 'ಮಾಂಗಲ್ಯ'. ಅದು ಕಿರುಚಿತ್ರ 'ಮಾಂಗಲ್ಯ' ಅಂತ ಮುದ್ರಿತವಾಗಿದೆ. ಅದು ತಪ್ಪು. ಅದು ಮಾಂಗಲ್ಯ ಎಂಬ ಮೆಗಾಧಾರಾವಾಹಿ (5 ವರ್ಷ) ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿತ್ತು' ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಿಂದ ರಂಜಿತ ಎಸ್. ರನಸಿಂಗೆ ಅವರು ಬರೆಯುತ್ತಾರೆ- 'ಫೆ.18ರಂದು ಬೆಳಗಾವಿ ಜಿಲ್ಲಾ ಪುಟದಲ್ಲಿ (ಪುಟ3) ಸುಪ್ರೀಂಕೋರ್ಟ್ ತೀರ್ಪಿನ ನಂತರ ರಾಷ್ಟ್ರಪತಿಗಳ ನಿರ್ಧಾರವೇ ಅಂತಿಮ ಅಂತ ಶಂಕರ ಬಿದರಿಯವರು ನೀಡಿದ ಹೇಳಿಕೆ ಪ್ರಕಟಿಸಿದ್ದೀರಿ. ಆದರೆ ಪಕ್ಕದಲ್ಲಿ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿರುವ ಶಂಕರ ಬಿದರಿ ಅವರ ಫೋಟೊ ಪ್ರಕಟಿಸಿದ್ದೀರಿ. ಕೆಳಗಡೆ ಶಂಕರಬಿದರಿ ನಿವೃತ್ತ ಪೊಲೀಸ್ ಅಧಿಕಾರಿ ಅಂತ ಉಲ್ಲೇಖಿಸಿದ್ದೀರಿ. ಇದು ಎಷ್ಟು ಸರಿ? ನಿವೃತ್ತಿಯಾದರೂ ಪೊಲೀಸ್ ಇಲಾಖೆಯ ಧಿರಿಸನ್ನು ಧರಿಸಬಹುದೇ?' ಎಂದು ಪ್ರಶ್ನಿಸಿದ್ದಾರೆ.
ನಿವೃತ್ತರಾದ ನಂತರ ಪೊಲೀಸ್ ಇಲಾಖೆ ಸಮವಸ್ತ್ರ ಧರಿಸುವಂತಿಲ್ಲ. ಆದರೆ ಅವರು ಕರ್ತವ್ಯದಲ್ಲಿದ್ದಾಗ ಸಮವಸ್ತ್ರ ಧರಿಸಿದಾಗ ತೆಗೆದ ಚಿತ್ರ ಪ್ರಕಟಿಸಬಾರದು ಎಂಬ ನಿಯಮವೇನೂ ಇಲ್ಲ. ಶಂಕರ ಬಿದರಿ ಅವರು ಸಮವಸ್ತ್ರ ಧರಿಸಿದ ಚಿತ್ರಗಳೇ ಸಂಗ್ರಹದಲ್ಲಿ ಹೆಚ್ಚಿವೆ. ಆದ್ದರಿಂದ ಹಾಗೆ ಬಳಸಲಾಗಿದೆ ಅಷ್ಟೇ.
ಚೇತನ್ ಕಡೂರು ಅವರು ಬರೆಯುತ್ತಾರೆ- 'ಮಾರ್ಚ್ 9ರಂದು ಪ್ರತಾಪ್‌ಸಿಂಹ ಅವರ ಟಿಪ್ಪುಸುಲ್ತಾನ್ ಕುರಿತ ಲೇಖನದಲ್ಲಿ ಊರಿನ ಹೆಸರು ಪ್ರಸ್ತಾವಿಸುವಾಗ ಒಂದು ಕಡೆ 'ವೀರಾಜಪೇಟೆ' ಎಂದು, ಹಾಗೆ ಓದುತ್ತಾ ಹೋದಾಗ ಇನ್ನೊಂದು ಕಡೆ 'ವಿರಾಜಪೇಟೆ' ಎಂದು ಬರೆದಿದ್ದಾರೆ. ಹಾಗಾಗಿ ಇದರಲ್ಲಿ ಯಾವುದು ಸರಿ? ಹಾಗೆ ಮಾರ್ಚ್ 11ರ 'ಬೈಟುಕಾಫಿ'ಯಲ್ಲಿ ಖಜಜ ಟಿಜಛ್ಠ ಎಂದು ಎರಡು ಶಬ್ದಗಳನ್ನು ಪನ್ ಮಾಡಿ ಬರೆದಿದ್ದೀರಿ. ಸಾಮಾನ್ಯ ಓದುಗನಿಗೆ ಈ ರೀತಿ ಬರೆದಾಗ ಅರ್ಥ ಮಾಡಿಕೊಳ್ಳುವುದು ಕಷ್ಟ. ಜತೆಗೆ ಈ ಎರಡು ಶಬ್ದಗಳು ಇಂಗ್ಲೀಷ್‌ನಲ್ಲಿ ಎರಡೆರಡು ಅರ್ಥ ಕೊಡುತ್ತದೆ. ಹಾಗಾಗಿ ಆದಷ್ಟು ತುಂಬ ಸರಳವಾಗಿ ಶೀರ್ಷಿಕೆಗಳನ್ನು ಕೊಡಬಹುದಲ್ಲವೇ ಎಂಬುದು ನನ್ನ ಅನಿಸಿಕೆ.'
ವಿರಾಜಪೇಟೆ ಎಂಬುದು ಸರಿಯಾದ ಬಳಕೆ. ಸರಳ ಶೀರ್ಷಿಕೆಗಳನ್ನು ಕೊಡಬಹುದು. ಅದಕ್ಕೆ ಕೊಂಚ ಕೂಡ ಕಷ್ಟಪಡಬೇಕಾದ ಅಗತ್ಯವಿಲ್ಲ. ಆದರೆ ಆಕರ್ಷಣೀಯವೆನಿಸುವಂತೆ, ಪನ್ ಮಾಡಿ, ಓದುಗರ ಬುದ್ದಿಗೆ ಕೆಲಸ ಕೊಡುವ ಶೀರ್ಷಿಕೆಗಳನ್ನು ನೀಡಬೇಕು ಎಂಬುದು ನಮ್ಮ ಉದ್ದೇಶ. ಎಲ್ಲ ಶೀರ್ಷಿಕೆಗಳೂ ಸುಲಭವಾಗಿ ಅರ್ಥವಾಗಬೇಕು ಎಂದು ಯಾಕೆ ಬಯಸಬೇಕು? ನಿಮ್ಮ ಮಂಡೆಗೂ ತುಸು ಕೆಲಸ ಕೊಡೋಣ ಏನಂತೀರಾ?
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

