ಒಂದಿಷ್ಟು ಪ್ರಶ್ನೆಗಳು
ಮೂಢ ನಂಬಿಕೆ ಪ್ರತಿಬಂಧಕ ವಿಧೇಯಕ (ಕರಡು) ರೂವಾರಿಗಳಾದ (ಬುದ್ಧಿಜೀವಿ, ವಿಚಾರವಂತ, ಪ್ರಗತಿಪರ) ಸಾಹಿತಿಗಳ ಕೂಟದ ಸದಸ್ಯರಿಂದ ಸ್ಪಷ್ಟೀಕರಣಕ್ಕಾಗಿ)
-ಬದುಕಿಗೆ ಮಾರ್ಗದರ್ಶಕರಾಗಿ, ದೇಶ, ಭಾಷೆ, ನಾಡು, ನುಡಿಗಾಗಿ ತಮ್ಮನ್ನು ಅರ್ಪಿಸಿಕೊಂಡು ಅಮರರಾದ ಮಹಾನುಭಾವರ ಪುತ್ತಳಿ (ವಿಗ್ರಹ/ಪ್ರತಿಮೆ) ಗಳನ್ನು ದೇಶದೆಲ್ಲೆಡೆ ಅನಾವರಣ ಮಾಡಿ, ನಗರ/ಪಟ್ಟಣಗಳಲ್ಲಿ ವೃತ್ತಗಳಿಗೆ, ಮಾರ್ಗಗಳಿಗೆ ಹೆಸರಿಟ್ಟು ಗೌರವಿಸುವುದು ಕೃತಜ್ಞತೆಯ ರೂಪವೋ ಅಥವ ನಿಮ್ಮ ದೃಷ್ಟಿಯಲ್ಲಿ ವಿಗ್ರಹಾರಧನೆಯೋ/ ವ್ಯಕ್ತಿಪೂಜೆಯೋ.
-ಸರ್ಕಾರಿ ಕಛೇರಿಗಳಲ್ಲಿ, ನ್ಯಾಯಾಲಯಗಳಲ್ಲಿ, ರಾಜಕೀಯ ಪಕ್ಷಗಳ ಕಛೇರಿಗಳಲ್ಲಿ ಭಾವಚಿತ್ರಗಳನ್ನು ಹಾಕುವುದು, (ದೇಶದ ನಾಯಕ/ನಾಯಕಿ) ಅವರ ಜಯಂತಿಗಳನ್ನು ಆಚರಿಸುವುದು ಗೌರವವೋ, ಅಥವಾ ವ್ಯಕ್ತಿಗತ ಪೂಜೆಯೋ/ ಮೌಢ್ಯವೋ?
-ವಿಜಯದಶಮಿಯಂದು ತಾಯಿ ಚಾಮುಂಡೇಶ್ವರಿಗೆ ಹಾಗೂ ರಾಜ್ಯೋತ್ಸವದಂದು ತಾಯಿ ಶ್ರೀ ಭುವನೇಶ್ವರಿಗೆ ಮಾನ್ಯ ಮುಖ್ಯಮಂತ್ರಿಗಳಾದಿಯಾಗಿ, ಆಹ್ವಾನಿಸಿದರೇ ತಾವುಗಳು ಕೂಡ ಆರ್ಭಟಿಸುವಿರಲ್ಲಾ ಇದು ರಾಜಕೀಯ ಲಾಭಕ್ಕೋ, ದೇವರ ಮೇಲಿನ ನಂಬಿಕೆಗೋ ಅಥವಾ ಮೌಢ್ಯವೋ? ಇದು ಕೂಡ ನಿಮ್ಮ ದೃಷ್ಟಿಯಲ್ಲಿ ವಿಗ್ರಹಾರಾಧನೆ ಅಲ್ಲವೇ?
-ಜಲಾಶಯಗಳು ಭರ್ತಿಯಾದಾಗ ಮಾನ್ಯ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ಸತ್ ಸಂಪ್ರದಾಯವೋ ನಿಮ್ಮ ದೃಷ್ಟಿಯಲ್ಲಿ ಮೌಢ್ಯವೋ/ಕಂದಾಚಾರವೋ.
-ಮಂತ್ರಿಗಳು / ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ನಿಮ್ಮ ದೃಷ್ಟಿಯಲ್ಲಿ ಮೌಢ್ಯವೇ?
-ರಾಜಕೀಯ ನಾಯಕರೂ, ಅಷ್ಟೇ ಏಕೆ ನಿಮ್ಮಂತ ಬುದ್ಧಿಜೀವಿಗಳು ಸಹ ಸಚ್ಚಾರಿತ್ರ್ಯ ಹೊಂದಿರುವ ಮಠಗಳ ಸ್ವಾಮಿಗಳಿಗೆ ಪಾದಪೂಜೆ ಮಾಡಿ, ಫಲ ಮಂತ್ರಾಕ್ಷತೆ ಸ್ವೀಕರಿಸುವಿರಲ್ಲ ಅದು ನಿಮ್ಮ ದೃಷ್ಟಿಯಲ್ಲಿ ಏನು? ವ್ಯಕ್ತಿ ಪೂಜೆಯೋ/ ಅಂಧ ಶ್ರದ್ಧೆಯೋ/ಮೌಢ್ಯವೋ ಅಥವಾ ಸತ್ ಸಂಪ್ರದಾಯವೋ.
-ಸಂವಿಧಾನ ಬದ್ಧವಾಗಿ ರಚಿತವಾಗಿರುವ ಮುಜರಾಯಿ ಖಾತೆ, ಖಾತೆಗೊಬ್ಬರು ಮಂತ್ರಿಗಳು ಹಾಗೂ ಸರ್ಕಾರವೇ ದೇವಾಲಯಗಳ ಪೂಜಾ ಕೈಂಕರ್ಯಗಳಿಗೆ ಅರ್ಚಕರ ನೇಮಿಸಿ, ವೇತನ ನೀಡುವುದು, ನಿಮ್ಮ ದೃಷ್ಟಿಯಲ್ಲಿ ಏನು ಸ್ವಾಮಿ?
-ಕನಕ ಬೇಕು ಆದರೆ ಅವರ ಅಂಕಿತವಾದ ಆದಿಕೇಶವನಲ್ಲಿ ಶ್ರದ್ಧೆ ಇಲ್ಲ ಅಲ್ಲವೇ?
-ವಾಲ್ಮೀಕಿ ಬೇಕು ಅವರು ರಚಿಸಿದ ರಾಮಾಯಣ/ಶ್ರೀರಾಮ ಬೇಡ ಅಲ್ಲವೇ?
-ಮಹಾತ್ಮ ಗಾಂಧಿ ಬೇಕು. ಆದರೆ ಅವರ ಆದರ್ಶಗಳಾದ ಭಗದ್ಗೀತೆ/ಶ್ರೀರಾಮ/ ಸತ್ಯ ಹರಿಶ್ಚಂದ್ರ/ ಬೇಡ ಅಲ್ಲವೇ.
-ಕುವೆಂಪುರವರು ಬೇಕು ಆದರೆ ರಾಮಾಯಣ ದರ್ಶನಂ/ವಚನ ವೇದದಲ್ಲಿ ವಿಶ್ವಾಸವಿಲ್ಲ ಅಲ್ಲವೇ.
ಯಾಕೆ ಸ್ವಾಮಿ, ವ್ಯಕ್ತಿ ಬೇಕು ಆದರೆ ವ್ಯಕ್ತಿತ್ವ ಅವರ ಭಾವನೆ/ಆದರ್ಶ ಬೇಡ. ಯಾರನ್ನು ಮೆಚ್ಚಿಸಲು ಈ ಇಬ್ಬಂದಿತನ ಹೇಳುವಿರಾ? ಕಡೆಯದಾಗಿ ಕಂದಾಚಾರ/ಸಮಾಜಕ್ಕೆ ಮಾರಕವಾಗುವ ಯಾವ ಮೌಢ್ಯಾಚರಣೆಗಳಿಗೆ, ಪ್ರಜ್ಞಾವಂತ, ನಾಗರೀಕರ ಬೆಂಬಲ ಎಂದೂ ಇರುವುದಿಲ್ಲ. ಇದು ಸುಸ್ಪಷ್ಟ. ಹಾಗಾಗಿ ಬುದ್ಧಿಜೀವಿ ಸಾಹಿತಿಗಳಿಗೆ ಸಮಾಜ ತಿದ್ದುವ ಪಾರುಪತ್ಯಕ್ಕೆ ಅವರ ಮಾರ್ಗದರ್ಶನ ಅನಗತ್ಯವೆಂದು ತೋರುತ್ತದೆ.
-ಸತ್ಯ, ಮೈಸೂರು
ತಾಯ್ನುಡಿ ಕಲಿಕೆಯೇ ಉತ್ತಮವೆಂದ ಭಾರತ ರತ್ನ
ಭಾರತ ದೇಶದಲ್ಲಿ ನೀಡಬಹುದಾದ ಅತ್ಯುನ್ನತ ಗೌರವ 'ಭಾರತ ರತ್ನ' ಕನ್ನಡಿಗರಾದ ಸಿಎನ್ಆರ್ ರಾವ್ ಅವರಿಗೆ ಸಂದಿರುವುದು ಸಂತಸದ ವಿಷಯವೇ ಸರಿ. ಈ ಸಂದರ್ಭದಲ್ಲಿ ಗಣ್ಯರು ತಮ್ಮ ಸಾಧನೆಗೆ ತಾವು ತಾಯ್ನುಡಿಯಲ್ಲಿ ಕಲಿತದ್ದರಿಂದ ನೆರವಾಗಿರುವ ಬಗ್ಗೆ ಒತ್ತಿ ಹೇಳಿದ್ದಾರೆ. ಅಲ್ಲದೆ ನಾಡಿನ ಎಲ್ಲ ತಾಯ್ತನ್ದೆಯರೂ ತಮ್ಮ ಮಕ್ಕಳಿಗೆ ವಿಜ್ಞಾನವನ್ನು ಕನ್ನಡದಲ್ಲೇ ಕಲಿಸಲು ಕರೆ ನೀಡಿದ್ದಾರೆ. ಹಿರಿಯರ ಈ ಮಾತು ನೂರಕ್ಕೆ ನೂರು ಸತ್ಯ. ಈ ಮುನ್ನ ಭಾರತ ರತ್ನ ಪ್ರಶಸ್ತಿ ಪಡೆದ ವಿಶ್ವೇಶ್ವರಯ್ಯ, ಎ ಪಿ ಜೆ ಅಬ್ದುಲ್ ಕಲಾಂ, ಸರ್ವಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಅನೇಕ ಗಣ್ಯರು ಕಲಿತದ್ದು ತಾಯ್ನುಡಿಯಲ್ಲೇ ಅಲ್ಲವೇ? ಕನ್ನಡ ಮಾಧ್ಯಮದಲ್ಲಿ ಕಲಿತ ಕ್ಯಾಪ್ಟನ್ ಗೋಪಿನಾಥ್ ಅವರು ಏರ್ ಡೆಕ್ಕನ್ ಸಂಸ್ಥೆಯನ್ನು ಕಟ್ಟಲಿಲ್ಲವೇ? ಇನ್ಫೋಸಿಸ್ ಹುಟ್ಟು ಹಾಕಿದ ನಾರಾಯಣ ಮೂರ್ತಿಯವರು ಕಲಿತದ್ದೂ ಕನ್ನಡದಲ್ಲೇ ಅಲ್ಲವೆ? ಇವರೆಲ್ಲರ ಸಾಧನೆಯೇ ನಮಗೆ ನಮ್ಮ ಮಕ್ಕಳನ್ನು ತಾಯ್ನುಡಿಯಲ್ಲಿ ಕಲಿಸಲು ಪ್ರೇರಣೆಯಾಗಲಿ.
-ವಲ್ಲೀಶ ಕುಮಾರ್ ಎಸ್., ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

