ತಪ್ಪಾಯ್ತು ತಿದ್ಕೋತೀವಿ
ಶಿವಮೊಗ್ಗ ಜಿಲ್ಲೆ ಸಾಗರದಿಂದ ಸಂಕೇತ್ ಹುತ್ಗಾರ್ ಅವರು ಬರೆಯುತ್ತಾರೆ- ' ಎರಡು ತಪ್ಪುಗಳನ್ನು ತಿಳಿಸಲೇಬೇಕಾಗಿದೆ. 'ಇದೆಂಗಾಯ್ತಪಾ..' ಎಂದು ಉದ್ಗರಿಸಲೇಬೇಕಾದ ದೊಡ್ಡ ತಪ್ಪೇ ಆಗಿದೆ. 'ಕನ್ನಡಪ್ರಭ'ದ ನ.17ರ ಸಂಚಿಕೆಯಲ್ಲಿ... ಪುಟ ಎರಡರಲ್ಲಿ 'ಥ್ಯಾಂಕ್ಯೂ ಸಚಿನ್ ಥ್ಯಾಂಕ್ಯೂ' ಎಂಬ ಲೇಖನದ ಕೆಳಗೆ ಗೌರವ, ಪ್ರಶಸ್ತಿಗಳು ಎಂದು ತಿಳಿಸಿ, ಈಃಖ ಖಛ್ಟ ಅವರಿಗೆ ಸಂದ ಪ್ರಶಸ್ತಿಗಳ ಪಟ್ಟಿ ನೀಡಿದ್ದೀರಿ. ಕಣ್ತಪ್ಪು ಎಂದು ಸುಮ್ಮನಿರಬಹುದಾದರೂ, ಅದ್ಯಾಕೊ ಬೇಜವಾಬ್ದಾರಿ ಕಂಡು ಬಂದಿದ್ದು ಸುಳ್ಳಲ್ಲ...'
'ನೀವೇ ಹೇಳಿ ಹೌದಲ್ಲವಾ? ಇದನ್ನು ವಿನಯಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ... ಇನ್ನಾದರೂ ಹೀಗೆ ಬೇಸರವೆನಿಸುವ ತಪ್ಪಾಗದಿರಲಿ.'
'ಎರಡನೆಯದು... ಇದನ್ನು ತಪ್ಪೆಂದು ಹೇಳಲಾರೆ. ನಾನು ಮೇಲೆ ತಿಳಿಸಿದ ಪಟ್ಟಿಯಲ್ಲಿ ಅವರು '1500 ಸಂಶೋಧನಾ ಪ್ರಬಂಧ ಹಾಗೂ 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆಂದೂ ತಿಳಿಸಿರುವಿರಿ. 5ನೇ ಪುಟದ 'ವಿಜ್ಞಾನದಲ್ಲಿ ರಾರಾಜಿಸಿದ ರಾವ್' ಲೇಖನದ ಕೊನೆಯಲ್ಲಿ ಈ ಸಂಖ್ಯೆಗಳು ಕ್ರಮವಾಗಿ 1400ಕ್ಕೂ ಹೆಚ್ಚು, ಹಾಗೂ 45 ಎಂದು ಪ್ರಕಟವಾಗಿವೆ. 1500 ಎಂದರೆ 1400ಕ್ಕಿಂತ ಹೆಚ್ಚೇ ಎಂದೂ, 45 ಎಂದರೆ 40ಕ್ಕಿಂತ ಹೆಚ್ಚೇ ಎಂದು ತಿಳಿದಿದೆ. ಆದರೆ ಅದೆಷ್ಟು ಎಂದು ಕರೆಕ್ಟಾಗಿ ಒಂದೇ ತರಹದ ಸಂಖ್ಯೆಗಳನ್ನು ಕೊಟ್ಟರೆ ನಮಗೂ ಓದಲು ಅನುಕೂಲ. ನಿಮಗೂ ನಿಖರತೆಯ ಸಮಾಧಾನ ಅಷ್ಟೆ.'
'ಅದೇ ದಿನದ ನಿಮ್ಮ ಪ್ರಯೋಗಶೀಲತೆಗೆ ಶಹಬ್ಬಾಸ್ ಹೇಳಲೇಬೇಕು' ಎಂದಿದ್ದಾರೆ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ನ.11ರಂದು ಪತ್ರಿಕೆಯ ಪುಟ 8ಲ್ಲಿ '5 ಜ್ಞಾನಪೀಠ ಪ್ರಶಸ್ತಿಗಳು ಮಾತ್ರ ಕ್ರಮಬದ್ಧ. ಇನ್ನುಳಿದವು ಲಾಬಿಗಳಿಂದ ಬಂದಿವೆ: ಪಾಪು' ತಲೆಬರಹದಲ್ಲಿ ಮೂಢನಂಬಿಕೆ ನಿಷೇಧ ಮಸೂದೆ ವಿಚಾರವಾಗಿ ಪ್ರಸ್ತಾಪಿಸುತ್ತಾ ಪಾಪು ಅವರು, 'ಹುಬ್ಬಳ್ಳಿಗೆ ಆಗಮಿಸಿದ್ದ ಕೋಡಿಮಠದ ಶ್ರೀಗಳು ನನಗೆ 79 ವರ್ಷ ವಯಸ್ಸು ಎಂದು ಜ್ಯೋತಿಷ್ಯ ನುಡಿದಿದ್ದರು. ನಾನೀಗ 94 ವರ್ಷ ಪೂರೈಸಿದ್ದೇನೆ ಎಂದರು' ಎಂದು ಪ್ರಕಟವಾಗಿದೆ. ಆದರೆ '79 ವರ್ಷ ವಯಸ್ಸು' ಎನ್ನುವ ಬದಲು 'ಆಯುಷ್ಯ' ಎಂದಾಗಬೇಕಿತ್ತು' ಎಂದಿದ್ದಾರೆ.
ನಾಲ್ಕೈದು ಓದುಗರು ಕಚೇರಿಗೆ ದೂರವಾಣಿ ಕರೆ ಮಾಡಿ ಆಗಿರುವ ತಪ್ಪಿನ ಕುರಿತು ಗಮನ ಸೆಳೆದಿದ್ದಾರೆ. 'ನ.20ರ ಮುಖಪುಟದಲ್ಲಿ ಬೆಂಗಳೂರಿನ ಎಟಿಎಂ ಒಂದರಲ್ಲಿ ಮಹಿಳೆ ಮೇಲೆ ನಡೆದ ದಾಳಿಯ ಸುದ್ದಿ ಪ್ರಕಟಿಸಲಾಗಿತ್ತು. ಶಿವಮೊಗ್ಗ ಆವೃತ್ತಿಯ ಮುಖಪುಟದಲ್ಲಿ ಜಾಹೀರಾತಿನಲ್ಲಿ ಕೊಂಚ ವ್ಯತ್ಯಾಸವಿದ್ದ ಕಾರಣ, ಆ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಿಲ್ಲ. ಆದರೆ ಎಲ್ಲ ಆವೃತ್ತಿಯಂತೆ 11ನೇ ಪುಟದಲ್ಲಿ 'ಮೊದಲ ಪುಟದಿಂದ' ಎಂದು ಮುಂದುವರಿದ ಸುದ್ದಿ ಪ್ರಕಟವಾಗಿದೆ.
ಸಂಕೇತ್ ಹುತ್ಗಾರ್ ಅವರು ಹೇಳಿದ ತಪ್ಪು ಮೊದಲ ಮುದ್ರಣದಲ್ಲಿ ಮಾತ್ರ ಆಗಿದೆ. ನಂತರದ ಆವೃತ್ತಿಗಳಲ್ಲಿ ಸರಿಯಾಗಿದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

