ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಸೆ.30ರ ಬೆಂಗಳೂರು ಆವೃತ್ತಿಯ ಪುಟ 4ರಲ್ಲಿ 'ಪೌರ ಸಮಸ್ಯೆ' ವಿಭಾಗದಲ್ಲಿ ಪ್ರಕಟವಾಗಿರುವ 'ದೊಡ್ಡಬಳ್ಳಾಪುರಕ್ಕೆ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿ' ಶೀರ್ಷಿಕೆಯ ಲೇಖನದಲ್ಲಿ ಜಯನಗರ 9ನೇ ಬ್ಲಾಕ್‌ನಲ್ಲಿ ಅತಿ ಪ್ರಸಿದ್ಧ ಹಾಗೂ ಜಾಗೃತ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವಿದ್ದು ಇಲ್ಲಿ ಬಸ್ ತಂಗುದಾಣ ದೇವಾಲಯದ ಪ್ರಸಿದ್ಧಿಗೆ ತಕ್ಕುದಾಗಿ ಇಲ್ಲ ಎಂದು ಪ್ರಕಟವಾಗಿದೆ. ಶೀರ್ಷಿಕೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ಎಂದಿರುವಾಗ ಲೇಖನದಲ್ಲಿ ತಂಗುದಾಣದ ಬಗ್ಗೆ ಇದೆ ದೊಡ್ಡಬಳ್ಳಾಪುರಕ್ಕೂ ಜಯನಗರ 9ನೇ ಬ್ಲಾಕ್‌ಗೂ ಸುಮಾರು 60 ಕಿ.ಮಿ. ಅಂತರವಿದೆ. ಶೀರ್ಷಿಕೆಗೂ ಲೇಖನಕ್ಕೂ ಎಷ್ಟು ಅಂತರವಿರಬಹುದೇ?'
'ಅ.7ರ ಸಂಚಿಕೆಯ ಪುಟ 10ರಲ್ಲಿ 'ವಿಚಾರಣೆಗೆ ತಮಿಳುನಾಡಿಗೆ ತೆರಳಿದ ಪೊಲೀಸರ ವಿಶೇಷ ತಂಡ' ಶೀರ್ಷಿಕೆಯಲ್ಲಿ ತಪ್ಪೊಂದು ನುಸುಳಿದೆ. ತಮಿಳುನಾಡಿಗೆ ಯಾವ ರಾಜ್ಯದವರು ಅಥವಾ ನಗರದವರು ಎಂಬುದೇ ಇಲ್ಲ. ತಮಿಳುನಾಡಿಗೆ ತೆರಳಿದ ಬೆಂಗಳೂರು ಪೊಲೀಸರ ವಿಶೇಷ ತಂಡ ಎಂದಿರಬೇಕಿತ್ತು.'
'ಅ.11ರ ಸಂಚಿಕೆಯ ಪುಟ 7ರಲ್ಲಿ 'ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ ಶೀರ್ಷಿಕೆಯ ಲೇಖನದಲ್ಲಿ 'ಈ ಸಾಹಿತ್ಯ ಸಮ್ಮೇಳನಕ್ಕೆ 2.5 ಕೋಟಿ ಖರ್ಚು ಎಂದು ಅಂದಾಜಿಸಲಾಗಿದೆ. ಉಳಿದ 1.5 ಕೋಟಿಯನ್ನು ಸರ್ಕಾರದಿಂದ ಒದಗಿಸುವಂತೆ ಕೋರಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಉಳಿದ 50 ಲಕ್ಷ ಮೊತ್ತವನ್ನು ಇತರೆ ಮೂಲಗಳಿಂದ ಕ್ರೋಢೀಕರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದು ಪ್ರಕಟವಾಗಿದೆ.'
'1 ಕೋಟಿ ಬಜೆಟ್‌ನಲ್ಲಿ ಮೀಸಲಿದ್ದು, ಉಳಿದ 1.5 ಕೋಟಿ ಮುಖ್ಯಮಂತ್ರಿಯವರಲ್ಲಿ ಕೋರಲಾಗಿರುವಾಗ ಒಟ್ಟು 2.5 ಕೋಟಿ ಆಗಿದ್ದು ಉಳಿದ 50 ಲಕ್ಷ ಸೇರಿದರೆ ಒಟ್ಟು 3 ಕೋಟಿ ಆಗುವುದಿಲ್ಲವೇ? ಅಂದರೆ ಉಪಶೀರ್ಷಿಕೆಯೇ ತಪ್ಪಾಗಿದೆಯೇ?'
'ವಿಚಾರಣೆಗೆ ತಮಿಳುನಾಡಿಗೆ ತೆರಳಿದ ಪೊಲೀಸರ ವಿಶೇಷ ತಂಡ' ಸುದ್ದಿಯಲ್ಲಿ ಯಾವುದೇ ತಪ್ಪಾಗಿಲ್ಲ. ಯಾಕೆಂದರೆ ಸುದ್ದಿಯಲ್ಲಿ ಸರಿಯಾದ ವಿವರಣೆ ಇದೆ. ಶೀರ್ಷಿಕೆಯಲ್ಲೇ ಎಲ್ಲವನ್ನೂ ಹೇಳಬೇಕಾದ ಅನಿವಾರ್ಯವಿಲ್ಲ. ಶೀರ್ಷಿಕೆಯಲ್ಲಿ ಎಲ್ಲವನ್ನೂ ಹೇಳಿಬಿಟ್ಟರೆ, ಸುದ್ದಿ ಯಾಕೆ ಪ್ರಕಟಿಸಬೇಕು?
ಬೇರೆ ಯಾವುದೋ ರಾಜ್ಯದ ಪೊಲೀಸರು, ಇನ್ಯಾವುದೋ ರಾಜ್ಯಕ್ಕೆ ವಿಚಾರಣೆಗೆ ಹೋದರೆ ನಾವು ಅಂತಹ ಸುದ್ದಿಯನ್ನು ಪ್ರಕಟಿಸುವ ಔಚಿತ್ಯವೂ ಇರುವುದಿಲ್ಲ. ಸಾಹಿತ್ಯ ಸಮ್ಮೇಳನದ ಸುದ್ದಿ ಬರೆಯುವಾಗ ಲೆಕ್ಕ ತಪ್ಪಾಗಿದೆ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

