ಸಂಪಾದಕೀಯ

ಮತ್ತೆ ಮಿತವ್ಯಯದ ಮಾತು

Published On :

ಪ್ರಸ್ತುತ ವಿತ್ತೀಯ ವರ್ಷದ ಮೊದಲ ಅರ್ಧಭಾಗ ಮುಗಿಯುತ್ತ ಬಂದಂತೆ, ಕೇಂದ್ರ ಸರ್ಕಾರಕ್ಕೆ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಬೇಕಾದ ಅಗತ್ಯ ಕಂಡು ಬಂದಿದೆ. ಹೀಗಾಗಿ ವಿತ್ತ ಮಂತ್ರಾಲಯದ ಅಧಿಪತಿ ಚಿದಂಬರಮ್ ಅವರು ಮಿತವ್ಯಯ ಸೂತ್ರದ ಸುತ್ತೋಲೆಯನ್ನು ಪ್ರಕಟಿಸಿರುವುದು ಸಾಮಯಿಕ. ಇದು ಅಗತ್ಯವಾಗಿತ್ತು.
ಸಾಮಾನ್ಯವಾಗಿ, ಸರ್ಕಾರಗಳು ಇಂತಹ ಸಮಯದಲ್ಲಿ ಯೋಜನೆಯ ಹೊರತಾದ ಬಾಬಿನ ವೆಚ್ಚವನ್ನು ಶೇಕಡಾ ಹತ್ತರಷ್ಟನ್ನು ಕಡಿಮೆ ಮಾಡಲು ಎಲ್ಲ ಇಲಾಖೆಗಳಿಗೂ ಸೂಚನೆ ನೀಡುತ್ತವೆ. ಇದು ಒಂದು ಮಾಮೂಲಿ ಸೂತ್ರ.
ಅದರಲ್ಲೂ ಹೊಸ ನೇಮಕಗಳು ಬೇಡ, ಆದ್ದೂರಿಯ ಸರ್ಕಾರಿ ಸಮಾರಂಭಗಳು, ವಿಚಾರ ಸಂಕಿರಣಗಳು ಬೇಡ, ಸಾಧ್ಯವಿರುವಷ್ಟೂ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವಂತಹ  ಸೂತ್ರ ನಿಜವಾಗಲೂ ತುಂಬಾ ಹಳೆಯ ಕಾಲದ್ದು. ಅದು ಬಳಕೆಯಲ್ಲಿ ತನ್ನ ಅರ್ಥವನ್ನೇ ಕಳೆದುಕೊಂಡಿದೆ.
ಮಿತವ್ಯಯದ ಘೋಷಣೆ, ಸೂತ್ರ ಇವೆಲ್ಲವೂ ಈಗ ಒಂದು ರೀತಿಯಲ್ಲಿ ಅರ್ಥಹೀನ ಎನ್ನುವ ಭಾವನೆ ಬೆಳೆಯುತ್ತಿದೆ. ಯಾಕೆಂದರೆ ಈ ಸೂತ್ರಗಳನ್ನು ಕೆಳಹಂತಗಳಿಗೆ ರವಾನಿಸಿ, ದೆಹಲಿಯ ಮಂತ್ರಾಲಯಗಳಲ್ಲಿ ಹೆಪ್ಪು ಗಟ್ಟಿ ಕೂತಿರುವ ಅಧಿಕಾರ ಕೇಂದ್ರಗಳಲ್ಲಿ ಅದನ್ನು ಪಾಲಿಸದೇ ಹೋದರೆ ಇನ್ನು ಯಾವ ರೀತಿಯ ಸಂದೇಶ ರವಾನೆಯಾಗುವುದು ಸಾಧ್ಯ?
ಮಿತವ್ಯಯದ ಆಚರಣೆ ಪ್ರತ್ಯಕ್ಷವಾಗಿ ಜನರ ಕಣ್ಣಿಗೆ ಕಾಣುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳಿಂದಲೇ ಆರಂಭವಾಗಬೇಕು. ಇತರ ಕಾರ್ಯಾಲಯಗಳಿಗೆ ಅದು ಉದಾಹರಣೆಯಂತಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.