ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ-'ಸೆ.6ರಂದು ಮುಖಪುಟದ ವರದಿ 'ಆರ್ಥಿಕ ಸಿರಿಯಾ ಮೇಲೇ ಶೃಂಗಸಭೆ ಕಣ್ಣು' ಎಂಬ ವರದಿಯ ಚಿತ್ರದ ಕೆಳಗಡೆ 'ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಗುರುವಾರ ಆರಂಭವಾದ ಜಿ-20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಮಾತನಾಡುತ್ತಿರುವುದು' ಎಂದಿದೆ. ಆದರೆ ಅವರು ಚಿತ್ರದಲ್ಲಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಬೇರೆ ದೇಶದ ಪ್ರತಿನಿಧಿಗಳ ಭಾಷಣದ ಭಾಷಾಂತರ ಕೇಳುತ್ತಿರುವಂತಿದೆ. ಅವರು ಮಾತನಾಡುತ್ತಿದ್ದಾರೆಂದರೆ ಕಿವಿಗೆ ಇಯರ್ ಫೋನ್ ಹಾಕುವ ಅಗತ್ಯವಿರುವುದಿಲ್ಲ ಅಲ್ಲವೇ? ಪ್ರಾಯಶಃ ಅದು 'ಭಾಗವಹಿಸಿರುವುದು' ಎಂದಾಗಬೇಕಿತ್ತು.'
'ಅದೇ ದಿನದ ಪುಟ 2ರಲ್ಲಿ 'ಆರ್ಟಿಇ ದೂರು ಇತ್ಯರ್ಥಕ್ಕೆ ಸಜ್ಜು' ವರದಿಯಲ್ಲಿ ತೀರ್ಪುಗಾರರು 'ನ್ಯಾ ಎ.ಜೆ. ಸದಾಶಿವಯ್ಯ ಎಂದಿದೆ. ಆದರೆ ಅವರು 'ನ್ಯಾ ಎ.ಜೆ ಸದಾಶಿವ'
'ಸೆ.9ರಂದು ಪುಟ 14ರ 'ಮಾಹಿತಿಪ್ರಭ'ದ 'ಗಣೇಶ ಹಬ್ಬ ಹೀಗೆ ಆಚರಿಸಿ...'ಯಲ್ಲಿ 3 ಅಂಶದಲ್ಲಿ 'ಮೂರ್ತಿಯ ಎತ್ತರ ಗರಿಷ್ಠ 5 ಅಡಿಯಿಂದ 1.5 ಮೀಟರ್ ಮಾತ್ರ ಇರಲಿ' ಎಂದಿದೆ. ಆದರೆ 5 ಅಡಿ ಮತ್ತು 1.5 ಮೀಟರ್ ಎರಡೂ ಒಂದೇ ಅಲ್ಲವೇ?'
'ಸೆ.11ರಂದು 'ಬೈಟು ಕಾಫಿ' ಪುಟ 1ರ 'ಚಿತ್ರ ಸೇವೆ ಮಾನವೀಯತೆಗೊಂದು ಕ್ಲಿಕ್' ಲೇಖನದಲ್ಲಿ ಯತೀಶ್ ಶೆಟ್ಟಿ ಬೆಳದ್ದು 'ಚಿಕ್ಕಮಂಗಳೂರು' ಎಂದಾಗಿದೆ. ಮಾನ್ಯರೇ, ಅದು ಎಲ್ಲಿದೆ? ಅಥವಾ 'ಚಿಕ್ಕಮಗಳೂರು' ಅಂತ ಅನ್ನಿಸುತ್ತದೆ' ಎಂದಿದ್ದಾರೆ.
ಗಣೇಶ ಮೂರ್ತಿ ಎತ್ತರಕ್ಕೆ ಸಂಬಂಧಿಸಿದ ಸುದ್ದಿಯಲ್ಲಿ 'ಗರಿಷ್ಠ 5 ಅಡಿ ಅಥವಾ 1.5 ಮೀಟರ್ ಮಾತ್ರ ಇರಲಿ' ಎಂದಾಗಬೇಕಿತ್ತು. 'ಅಥವಾ' ಬಿಟ್ಟುಹೋಗಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. 'ಚಿಕ್ಕಮಗಳೂರು' ಬಹುತೇಕ ಜನರ ಪಾಲಿಗೆ 'ಚಿಕ್ಕಮಂಗಳೂರು' ಆಗಿಬಿಟ್ಟಿದೆ. 'ಮಂಗಳೂರು' ಸ್ವಲ್ಪ ಖ್ಯಾತಿ ಹೊಂದಿರುವುದರಿಂದ, ಇನ್ನೊಂದು 'ಚಿಕ್ಕಮಂಗಳೂರು' ಎಂದು ಭಾವಿಸುವವರೂ ಇದ್ದಾರೆ. ಆದರೆ 'ಚಿಕ್ಕಮಗಳೂರು' ಎಂಬುದು ಸರಿಯಾದ ಬಳಕೆ.
ಮೈಸೂರು ಕುವೆಂಪು ನಗರದಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಸೆ.15ರಂದು ಪತ್ರಿಕೆಯ 10ನೇ ಪುಟ 'ದೇಶ-ವಿದೇಶ'ದಲ್ಲಿ 'ಸಿರಿಯಾಗಿಲ್ಲ ಸದ್ಯ ಸಮರಭೀತಿ' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಇದು ಸರಿಯಾಗಿಲ್ಲ!'
'ಏಕೆಂದರೆ ಸಿರಿಯಾಕ್ಕೆಇಲ್ಲ ಸಿರಿಯಾಕ್ಕಿಲ್ಲ ಎಂಬುದು ಸರಿಯಾದ ಪದಪ್ರಯೋಗ. ಸಿರಿಯಾಗೆಇಲ್ಲ 'ಸಿರಿಯಾಗಿಲ್ಲ' ಎಂದಾಗುವುದಿಲ್ಲ. ಇದು 'ಪ್ಯಾರ್ಗೆ ಆಗ್ಬುಟ್ಟೈತೆ' ಎಂದಂತಾಗಿದೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

