ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಸಾಮಗ ದತ್ತಾತ್ರಿ ಅವರು ಬರೆಯುತ್ತಾರೆ- 'ಆ.25ರಂದು ಪತ್ರಿಕೆಯ ಪುಟ 3ರಲ್ಲಿ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ವಾಚ್ ಡಾಗ್ಗಳಾಗಲಿ ಎಂದಿರುವ ಶೀರ್ಷಿಕೆಯಲ್ಲಿ, ಅಂತೆಯೇ ಸುದ್ದಿಯ ಒಡಲಲ್ಲಿ ವಾಚ್ ಡಾಗ್ ಎಂದು ಇಂಗ್ಲಿಷ್ನ ಢಿಛಝ್ಛಿಜ್ಟ್ಜ ಪದವನ್ನು ಪ್ರತ್ಯೇಕವಾಗಿ ಎರಡು ಪದಗಳನ್ನಾಗಿ ಮಾಡಿರುವುದು ಸರಿಯಲ್ಲ. ಅದು 'ವಾಚ್ಡಾಗ್' ಎಂಬ ಒಂದೇ ಪದ ಆಗಬೇಕು. ಅಲ್ಲದೇ, ವಾಚ್ ಡಾಗ್ ಪ್ರಯೋಗದ ಬದಲು ಕಾವಲುಪಡೆ ಎಂದೇ ಹೇಳಬಹುದಿತ್ತಲ್ಲವೇ?'
'ಪುಟ7ರಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಮ್ಯಾ ಅವರ ಆಸೆ ಮಂಡ್ಯದಲ್ಲಿ ಬಾಡಿಗೆಗೆ ಮನೆ ಪಡೆದು ವಾಸಮಾಡಬೇಕೆನ್ನುವುದು. ಯಾವ ಮನೆ? ಅದು ತೊಟ್ಟಿಮನೆ. ತೊಟ್ಟೆ ಮನೆ ಅಲ್ಲ. ಪುಟ 10ರಲ್ಲಿ 'ಅನೈತಿಕ ಮೈತ್ರಿಯಿಂದ ಕೈಗೆ ಗೆಲುವು: ಡಿ.ಕೆ. ಸುರೇಶ್' ಎಂದಿದೆ. ಅನೈತಿಕ ಮೈತ್ರಿ ಕಾರಣವಾಗಿ ಕೈ ಗೆಲುವು ಸಾಧಿಸಿತು ಎಂದೂ ಅರ್ಥವಾಗುವ ಸಂಭವವಿದೆ!' ಎಂದಿದ್ದಾರೆ.
ಬೆಂಗಳೂರಿನಿಂದ ಸಂತೋಷಕುಮಾರ ಎಲ್.ಎಂ. ಅವರು ಬರೆಯುತ್ತಾರೆ- 'ಸೆ.24ರ 'ಬೈ2ಕಾಫಿ'ಯ ಎರಡನೇ ಪುಟದ 'ಸಣ್ ಸ್ಟೋರಿ'ಗಳಲ್ಲಿ ಒಂದಾದ 'ಮಾಧ್ಯಮ'ದಲ್ಲಿ ಮೂರು ಮುದ್ರಣ ದೋಷಗಳಿವೆ (ಆ ಕಥೆಯನ್ನು ನಾನು ಸರಿಯಾಗಿಯೇ ಬರೆದು ಕಳುಹಿಸಿದ್ದೆ. ಬಹುಶಃ ಮಗದೊಮ್ಮೆ ಅದನ್ನು ಮುದ್ರಣಕ್ಕಾಗಿ ಟೈಪಿಸುವಾಗ ಹೀಗಾಗಿರಬಹುದು).
ಹರಿಯುತ್ತಿರದ್ದ- ಹರಿಯುತ್ತಿದ್ದ
ಸಮ್ಣ- ಸಣ್ಣ
ಮಲಕಿತ್ತು- ಮಲಗಿತ್ತು ಎಂದಾಗಿದೆ.
'ಇತ್ತೀಚೆಗಷ್ಟೇ ಸುರಿದ ಮಳೆಯಿಂದ ಹರಿಯುತ್ತಿದ್ದ ಸಣ್ಣ ತೊರೆಯನ್ನು ನೋಡಿ ಇಡೀ ಜಗ ಮಾತನಾಡುತ್ತಿತ್ತು.
ಒಂದು ಕಾಲದಲ್ಲಿ ಭೋರ್ಗರೆದು, ಧುಮುಕಿ ನಂತರ ಒಡಲು ಬರಿದಾದ ಜಲಪಾತವೊಂದು ಸುಮ್ಮನೆ ಮಲಗಿತ್ತು'
'ನನ್ನ ಹೆಸರೂ ಕೂಡ 'ಸಂತೋಷ್ಕುಮಾರ್ ಎಲ್. ಎಂ.' ಇರಬೇಕಿತ್ತು. ಅದು 'ಸಂತೋಷ್ಕುಮಾರ್ ಎಂ. ಎಲ್.' ಆಗಿದೆ. ಟೈಪಿಸುವವರು ಕೊಂಚ ತಾಳ್ಮೆಯಿಂದಲೇ ಕೆಲಸ ನಿರ್ವಹಿಸಲಿ ಎಂದು ಆಶಿಸುತ್ತೇನೆ' ಎಂದಿದ್ದಾರೆ.
ವ್ಯಾಸನಕೆರೆಯಿಂದ ಹನುಮೇಶ ಪಾಟೀಲ ಅವರು ಬರೆಯುತ್ತಾರೆ- 'ಸೆ.24ರಂದು ಪತ್ರಿಕೆಯ ಪುಟ 9ರಲ್ಲಿ ಮುದ್ರಿತವಾದ 'ಶಿಕ್ಷಕನಿಂದ ಬಾಲಕಿಯ ಮೇಲೆ ಅತ್ಯಾಚಾರ' ಶೀರ್ಷಿಕೆಗೂ ಒಳಗಿರುವ ವಿಷಯಕ್ಕೂ ಸಂಬಂಧವೇ ಇಲ್ಲ. 5ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕಿಯ ಮೇಲೆ ಎಸ್ಎಸ್ಎಲ್ಸಿ ಓದುತ್ತಿರುವ ಬಾಲಕ ಅತ್ಯಾಚಾರವೆಸಗಿದ ವಿಷಯವಿದೆ. ತಲೆಗೂ ಬುಡಕ್ಕೂ ಸಂಬಂಧ ಜೋಡಿಸಿ ಮುದ್ರಿಸುವುದು ಒಳಿತಲ್ಲ' ಎಂದಿದ್ದಾರೆ.
ಸೆ.24ರ ಪತ್ರಿಕೆಯಲ್ಲಿ 4-5 ಅತ್ಯಾಚಾರ ಸುದ್ದಿಗಳು ಪ್ರಕಟವಾಗಿವೆ. ಅದರಲ್ಲಿ 'ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ' ಎಂಬ ಸುದ್ದಿ ಕೂಡ ಒಂದು. ಇನ್ನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ 5ನೇ ತರಗತಿ ಹುಡುಗಿ ಮೇಲೆ ನಡೆಸಿದ ಅತ್ಯಾಚಾರದ ಸುದ್ದಿ. ಇವುಗಳ ನಡುವಿನ ಗೊಂದಲದಿಂದ ಹೀಗಾಗಿರಬೇಕು. ಬೆಂಗಳೂರು ಆವೃತ್ತಿಯಲ್ಲಿ ಈ ಸುದ್ದಿ ಸರಿಯಾಗಿಯೇ ಪ್ರಕಟವಾಗಿದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

