ಆರ್. ಸಿ. ಪರಶುರಾಮ್, 9902203492
ಭಾರತದಲ್ಲೇಕೆ ಕಾಲ್ಚೆಂಡಿನಾಟ ಹೆಚ್ಚು ಜನಪ್ರಿಯಗೊಳ್ಳಲಿಲ್ಲ?
ಇಲ್ಲಿ ಕಾಲೆಳೆದಾಟವೇ ಜನಪ್ರಿಯ!
ಎಂ. ಬಿ. ಕೃಷ್ಣಮೂರ್ತಿ, 9449130531
ಮಾನವನಾಗಿ ಹುಟ್ಟಿದ ಮೇಲೆ ಈ ಭೂಮಿ ಮೇಲೆ ಏನೇನು ಮಾಡಬೇಕು?
ಏನೇ ಮಾಡುವುದಿದ್ದರೂ ಭೂಮಿ ಮೇಲಲ್ಲದೇ ಇನ್ಯಾವ ಆಪ್ಶನ್ ಇಟ್ಟುಕೊಂಡಿದ್ದೀರಿ?
ಓಂ ಚೆನ್ನೇಶ್, ಭದ್ರಾವತಿ, 9901257131
ಕತ್ತೆಗೂ ಕಸ್ತೂರಿಗೂ ಏನು ಸಾಮ್ಯ?
ನೀವು ಎರಡನ್ನೂ ಮೂಸಿ ಸಾಮ್ಯ ಪತ್ತೆ ಹಚ್ಚುವ ಸಾಹಸ ಮಾಡಬಹುದು.
ಶ್ರೀಧರ ಡಿ. ರಾಮಚಂದ್ರಪ್ಪ 9880791106
ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು ಅಂತಾರಲ್ಲ ನಿಜವಾ?
ಹಾಗಂತ ಕೇಳ್ರಪ್ಪೋ ಕೇಳಿಗೆ ಪ್ರಶ್ನೆಗಳನ್ನೇ ಕೇಳಬಾರದು ಅಂತ ಅರ್ಥ ಮಾಡಿಕೊಳ್ಳಬಾರದು!
-ಬಾಣಭಟ್ಟ