ಜಗದೀಶ ಎಸ್. ಬೆಳಗಾವಿ
ಶಾದೀಭಾಗ್ಯ ಅನ್ನೋ ಬದಲು ಅಚ್ಛಕನ್ನಡದಲ್ಲಿ 'ಕಂಕಣಭಾಗ್ಯ' ಎಂದು ಹೆಸರಿಡಬಹುದಿತ್ತಲ್ಲ?
ಅದು ಅಚ್ಛಾ ಕನ್ನಡದ ಮಂದಿಗಾಗಿಯೇ ಇಟ್ಟಿದ್ದು!
ದಾವಣಗೆರೆ ಪ್ರತಿಭಾ
ಬ್ಲೌಸ್ ಡಿಸೈನ್ ಮಾಡುವಷ್ಟೇ ಸೊಗಸಾಗಿ ಫ್ಯಾಷನ್ ಡಿಸೈನರ್ ಮಧು ತುಂಟ ಪ್ರಶ್ನೆಗಳನ್ನೂ ಡಿಸೈನ್ ಮಾಡ್ತಾರಲ್ಲ?
ಅಳತೆ ತೆಗೆದುಕೊಳ್ಳುವಾಗ ತುಂಟತನ ತೋರದಿದ್ದರೆ ಸಾಕು.
ರವೀಂದ್ರನಾಥ ಶಿ., ಬೀಳಗಿ
ಸಕ್ಕರೆ ಡಬ್ಬಿಗೆ ಮುತ್ತಿಗೆ ಹಾಕುವ ಇರುವೆಗಳಿಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ರಾಜಕಾರಣಿಗಳಿಗೂ ವ್ಯತ್ಯಾಸವೇನು?
ಇರುವೆಗೆ ಶುಗರ್ ಇರಲ್ಲ. ಆದರೆ ವಿಧಾನಸೌಧ ಮುತ್ತುವವರಿಗೆ ಶುಗರ್ ಹೆಚ್ಚು!
ವಿ. ಹೇಮಂತಕುಮಾರ, 9910739104
ಒಂದು ಫಾರ್ವರ್ಡ್ ಮೆಸೇಜ್ ಸಹ ಕಳುಹಿಸದಷ್ಟು ಕೋಪಗೊಂಡಿದ್ದಾಳಲ್ಲ?
ಹಾಗೇನಿಲ್ಲ ಎಸ್ಎಂಎಸ್ ಫ್ರೀ ಪ್ಯಾಕ್ ಮುಗಿದಿರಬೇಕು!
-ಬಾಣಭಟ್ಟ