ಉಜ್ಜನಿ ಜಲೇಂದ್ರ ಮಲ್ಲುಂಗೆರೆ, 9972965303
ಬೆಕ್ಕು ಅಡ್ಡಬಂದರೆ ಅಪಶಕುನ. ಹುಡುಗಿ ಅಡ್ಡ ಬಂದರೆ?
ಶುಭಶಕುನ!
ಪಿ.ಜೆ. ರಾಘವೇಂದ್ರ, ಮೈಸೂರು
ಫ್ಯಾಷನ್ ಡಿಸೈನರ್ ಮಧು ಅವರದ್ದು ಹೆಂಗರಳುಂತೆ?
ಅದಕ್ಕೆ ಹೆಂಗಸರ ಫ್ಯಾಷನ್ ಬೇಗ ಅರ್ಥವಾಗುತ್ತೆ!
ವಾದಿರಾಜ ಜಿ. ರಾಯ್ಕರ, ಬೆಂಗಳೂರು
ಭಟ್ರೇ, ಆ ದೇವರು ಎಲ್ಲಾ ಜೀವಿಗಳಿಗೂ ಎರಡು ಕಿವಿಕೊಟ್ಟು ಒಂದು ನಾಲಿಗೆ ಕೊಟ್ಟಿದ್ದಾನಲ್ಲ?
ಒಂದು ನಾಲಿಗೆಯ ಕಾಟವನ್ನೇ ತಡ್ಕೊಳ್ಳೋದು ಕಷ್ಟ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ರಾಹುಲ್ ಗಾಂಧಿ ಅವರನ್ನು ರಾಷ್ಟ್ರದ ಜನತೆ ಒಪ್ಪಿಲ್ಲ ಅಂದರಂತೆ ವಿಶ್ವನಾಥ್?
ಬೇರೆಯವರು ಬಿಡಿ, ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳಲು ಸಿದ್ಧರಿಲ್ಲ!
ಕುಬೇರಪ್ಪ ಎಂ. ವಿಭೂತಿ, ಹರಿಹರ, 9739944200
ಸಿದ್ದಣ್ಣ ತನ್ನ ಶ್ರೀಮತಿಯವರನ್ನು ಕರುನಾಡ ಜನತೆಗೆ ಪರಿಚಯ ಮಾಡಿಸುವುದು ಯಾವಾಗ ಭಟ್ರೇ?
ಅವರು ತಮ್ಮ ಹೆಂಡ್ತಿಗಿಂತ ಮೋದಿ ಹೆಂಡ್ತಿ ಬಗ್ಗೆ ಮಾತಾಡಿದ್ದೇ ಹೆಚ್ಚು!
-ಬಾಣಭಟ್ಟ