ನಿಮಗೆ ಈ ಜೀವಮಾನದಲ್ಲೇ ಬಿದ್ದ ಅತಿಕೆಟ್ಟ ಕನಸು ಯಾವುದು?

Updated on: 

ರವಿಕುಮಾರ ಜಿ.ಬಿ. 9449669897
ಕಳ್ಳರು ಪೊಲೀಸರ ಮನೆಯನ್ನೇ ಕಳ್ಳತನ ಮಾಡಲು ಶುರುಮಾಡಿದ್ದಾರಲ್ಲಾ?
ಅವರು ಬೇರೆಯವರ ಮನೆ ಕಾಯುವುದರಲ್ಲಿ ಬ್ಯೂಸಿ ಇರುತ್ತಾರೆ ಎಂಬ ಖಾತರಿಯಿಂದ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ನಿಮಗೆ ಈ ಜೀವಮಾನದಲ್ಲೇ ಬಿದ್ದ ಅತಿಕೆಟ್ಟ ಕನಸು ಯಾವುದು?
ರಾಗಾ ಮತ್ತೆ ಅರ್ನಬ್‌ಗೆ ಸಂದರ್ಶನ ಕೊಟ್ಟಂತೆ!

ವಿ. ಹೇಮಂತಕುಮಾರ, ಬೆಂಗಳೂರು, 9901739104
ಒಂದು ತಿಂಗಳು ಪೂರೈಸಿದ ಎನ್‌ಡಿಎ ಸರ್ಕಾರ ಹನಿಮೂನ್ ಇಲ್ಲದ ಚೊಕ್ಕಸಂಸಾರ. ಒಂದು ವರ್ಷ ಪೂರೈಸಿದ ರಾಜ್ಯದ ಕಾಂಗ್ರೆಸ್ ಸರ್ಕಾರ?
ಪ್ರಸವದಿಂದ ಹೊಸ ಸದಸ್ಯರ ನಿರೀಕ್ಷೆಯಲ್ಲಿ!

ಆರ್.ಬಿ. ಚಂದ್ರಶೇಖರ, ಕೆ.ಆರ್.ನಗರ
ವೈಭವದ ಮದುವೆ ತೆರಿಗೆಯನ್ನು ಗಂಡಿನ ಕಡೆಯವರು ಕಟ್ಟಬೇಕೊ, ಹೆಣ್ಣಿನ ಕಡೆಯವರು ಕಟ್ಟಬೇಕೊ?
ಈ ಜಗಳದಲ್ಲಿ ಮದುವೆ ಮುರಿದುಹೋದರೆ ಸರ್ಕಾರ ಕೊಡಿಸಿಕೊಡುವುದೇ?

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com