ತಪ್ಪಾಯ್ತು ತಿದ್ಕೋತೀವಿ
ಮೈಸೂರು ಕುವೆಂಪುನಗರದಿಂದ ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಕೆ.ಎಸ್.ರಂಗಪ್ಪ .ಆದರೆ ನಿಮ್ಮ ವರದಿಗಾರರೇ ನಮ್ಮ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುತ್ತಾರೇನೋ.'
'ಮೇ 29ರಂದು 'ಕನ್ನಡಪ್ರಭ'ದ ಮೈಸೂರು ಆವೃತ್ತಿಯ 11ನೇ ಪುಟದಲ್ಲಿ 'ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್' ಎಂದು ಸುದ್ದಿಯೊಂದರ ಉಪ ಶೀರ್ಷಿಕೆ ಹೇಳುತ್ತಿದೆ. ಪ್ರೊ.ಎಂ.ಜಿ.ಕೃಷ್ಣನ್ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಎಸ್.ರಂಗಪ್ಪ.'
'ವರದಿ ಮಾಡಿದ ವರದಿಗಾರ ಸರಿಯಾಗಿಯೇ ವರದಿ ಮಾಡಿದ್ದಾರೆ. ಆದರೆ ಉಪ ಶೀರ್ಷಿಕೆ ನೀಡುವಾಗ ಮಾತ್ರ ಎಡವಿದ್ದಾರೆ. ಪರೀಕ್ಷೆಯಲ್ಲಿ ಉತ್ತರ ಸರಿಯಾಗಿ ಬರೆದು ಪ್ರಶ್ನೆಯ ಸಂಖ್ಯೆಯನ್ನೇ ತಪ್ಪಾಗಿ ಬರೆದ ವಿದ್ಯಾರ್ಥಿಯಂತೆ ಈ ಆಭಾಸ ಉಂಟಾಗಿದೆ.'
'ಎಸ್.ವಿ.ಪದ್ಮನಾಭ ವಿರಚಿತ 'ಪಂಚ್ ಮುಖಿ'ಯ ಪಂಚಿಂಗ್ ಸಾಲುಗಳಿಗೆ ಮೂರು ದಿನಗಳಿಂದ ಮುದ್ರಾರಾಕ್ಷಸ ಪಂಚ್ ನೀಡುತ್ತಿದ್ದಾನೆ. ಇದಕ್ಕೆ ಮುಕ್ತಿ ಎಂದು?' ಪ್ರಶ್ನಿಸಿದ್ದಾರೆ.
ಪಿ.ಜೆ. ರಾಘವೇಂದ್ರ ಅವರು ಕಳುಹಿಸಿದ ಚಿತ್ರಗಳನ್ನು ಗಮನಿಸಿದರೆ ಸತತವಾಗಿ ಮುದ್ರಣದಲ್ಲಿ ದೋಷ ಕಾಣಿಸುತ್ತಿದೆ. ಇದನ್ನು ಮುದ್ರಣ ವಿಭಾಗದ ಗಮನಕ್ಕೆ ತರಲಾಗುವುದು.
ಬೆಂಗಳೂರಿನಿಂದ ಓದುಗರಾದ ಆಶಾ ಅವರು ಕಚೇರಿಗೆ ಕರೆಮಾಡಿದ್ದರು. ಜೂ.2ರಂದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ 'ಅದ್ಧೂರಿ ಮದುವೆ ಅಧ್ವೈರ್ಯುಗಳಾದ ರಾಜಕಾರಣಿಗಳೇ ಮೊದಲು ಆಡಂಬರದ ವಿವಾಹಗಳಿಂದ ದೂರವಿರಿ' ಎಂಬ ಶೀರ್ಷಿಕೆಯಲ್ಲಿ 'ಅಧ್ವೈರ್ಯು' ಶಬ್ದ ತಪ್ಪಾಗಿ ಬಳಕೆಯಾಗಿದೆ ಎಂದಿದ್ದಾರೆ. 'ಅಧ್ವರ್ಯು' ಎಂಬುದು ಸರಿಯಾದ ಪದ ಎಂದಿದ್ದಾರೆ.
ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಮೇ 28ರಂದು 'ಬೈಟು ಕಾಫಿ'ಯಲ್ಲಿ 2ನೇ ಪುಟದಲ್ಲಿ ಡಾ. ಪಿ. ಸದಾನಂದ ಮಯ್ಯ ಅವರ 'ಬೆಳ್ಳಿತಟ್ಟೆ' ಲೇಖನದಲ್ಲಿ 2ನೇ ಪ್ಯಾರಾದಲ್ಲಿ 'ಎದೆಹಾಲು ಕುಣಿಸುವಾಗ ತಾಯಿಯ ಜತೆ ಬಾಂಧ್ಯವ್ಯ ಇರುತ್ತದೆ' ಎಂದಿದೆ.'
'ಎದೆಹಾಲು ಕುಣಿಸುವಾಗ ಎಂಬುದು 'ಎದೆಹಾಲು ಕುಡಿಸುವಾಗ' ಅಥವಾ 'ಎದೆಹಾಲುಣಿಸುವಾಗ' ಎಂದಾಗಬೇಕಿತ್ತು. ಇದೇ ವಿಷಯದ ಕೊನೆಯಲ್ಲಿ 'ಸಾಧರ ನಿರೂಪಿತಗೊಂಡ ಈ ಸಂಗತಿಯನ್ನು ವಿಜ್ಞಾನಲೋಕ ಮರುಮಾತಿಲ್ಲದೇ ಒಪ್ಪಿಕೊಂಡಿತು' ಎಂದಿದೆ. ಇದರಲ್ಲಿ 'ಸಾಧರ ನಿರೂಪಿತಗೊಂಡ' ಎಂಬುದು ಸಾಧಾರಣವಾಗಿ ನಿರೂಪಿತಗೊಂಡ ಎಂದಾಗಬೇಕಿತ್ತು' ಎಂದಿದ್ದಾರೆ.
'ಸಾಧಾರ' ಅಂದರೆ ಆಧಾರ ಸಹಿತವಾದ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಅದನ್ನೇ 'ಸಾಧರ' ಎಂದು ತಪ್ಪಾಗಿ ಬಳಸಲಾಗಿದೆ. ಆದರೆ 'ಸಾಧಾರಣವಾಗಿ ನಿರೂಪಿತವಾದ' ಎಂದು ಬರೆಯಲು ಉದ್ದೇಶಿಸಿದ್ದಲ್ಲ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

