ಕೆಲವು ಹುಡುಗಿಯರು ಕಣ್ಣಿನಲ್ಲೇ ಕೊಲ್ಲುತ್ತಾರಲ್ಲಾ?

Updated on: 

ಮ.ದೇವೇಗೌಡ, ಹೆಬ್ಬಾಳು, ಮೈಸೂರು
ರಾಜ್ಯ ಸರ್ಕಾರದ ಕಾರ್ಯವೈಖರಿ ನೋಡಿದರೆ ಮುಂದೆ ಪ್ರತಿ ಜಾತಿಗೆ ಒಬ್ಬ ಗೃಹಮಂತ್ರಿ ಬೇಕು ಅನಿಸುತ್ತಿದೆಯಲ್ಲಾ?
ಇಲಾಖಾವಾರು ಬದಲು ಜಾತಿವಾರು ಸಚಿವರನ್ನು ಮಾಡುವ ಕಾಲ ದೂರವಿಲ್ಲ!

ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಮಕ್ಕಳಿಗೆ ಹಾಗೂ ದೇವರಿಗೆ ಇರುವ ಭಿನ್ನತೆ ಏನು?
ಮಕ್ಕಳು ನಮ್ಮ ಮೇಲೆ ಕಕ್ಕ ಮಾಡಬಹುದು!

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಕಾಡಿನಲ್ಲಿರಬೇಕಾದ ವನ್ಯಮೃಗಗಳು ನಾಡಿನತ್ತ ಧಾವಿಸುತ್ತಿರುವುದೇಕೆ?
ನಮ್ಮ ನಡಿಗೆ ನಾಡಿನ ಕಡೆಗೆ. ಅವು ಹೊಸ ಯೋಜನೆ ಆರಂಭಿಸಿವೆಯಂತೆ!

ಬರ್ಕಲಿರಮೇಶ, ಮಂಡ್ಯ, 9008741348
ಕೆಲವು ಹುಡುಗಿಯರು ಕಣ್ಣಿನಲ್ಲೇ ಕೊಲ್ಲುತ್ತಾರಲ್ಲಾ?
ಅದನ್ನೇ ರಸಿಕರು ಮಿಂಚಂತೆ ಮಿಂಚಿ ಮಿಂಚಿ ಕಣ್ಹೊಡೆದೆ ಅಂದಿದ್ದು!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com