ಇತ್ತೀಚೆಗೆ ಹೆಣ್ಮಕ್ಕಳು ಹೈ ಹೀಲ್ಡ್ ಚಪ್ಪಲಿ ಹಾಕೋದ್ ಯಾಕೆ?
ಫ್ಯಾಷನ್ ಡಿಸೈನರ್ ಮಧು, 9945737427
ಐವತ್ತರ ಹರೆಯದ ಚೆಲುವೆ 'ಹೃದಯ ಹಳೆಯದಾದರೇನು ಪ್ರೀತಿ ನವನವೀನ' ಅಂತ ಮೆಸೇಜು ಕಳುಹಿಸಿದ್ದಾಳಲ್ಲ?
ಹಲ್ಲು ಉದುರಿಹೋದರೇನು ಹಲ್ಸೆಟ್ ನವನವೀನ ಎಂದು ರಿಪ್ಲೈ ಹಾಕು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಭಾರತದ ರಾಜಕೀಯ ರಂಗದಲ್ಲಿ ದ್ರುವತಾರೆಯಂತೆ ಉದಯಿಸಿದ ಆಪ್ ಈಗ ಉಲ್ಕೆಯಾಗಿ ಬದಲಾಗುತ್ತಿದೆಯಲ್ಲಾ?
ಆಪ್ಕಾ ಹಾತ್ ಕಾಂಗ್ರೆಸ್ ಕೆ ಸಾಥ್ ಅಂತ ಬಿಜೆಪಿ ಯವರು ಬೊಬ್ಬೆಹೊಡೆಯುತ್ತಿದ್ದಾರೆ.
ನಂದ ಯಡಿಯೂರು, 9880055196
ಇತ್ತೀಚೆಗೆ ಹೆಣ್ಮಕ್ಕಳು ಹೈ ಹೀಲ್ಡ್ ಚಪ್ಪಲಿ ಹಾಕೋದ್ ಯಾಕೆ?
ಊಂಚೇ ಲೋಗ್ ಊಂಚಿ ಪಸಂದ್!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನನ್ನವಳು ಮೊದಲ ರಾತ್ರಿಯೇ ಪ್ರಸ್ತದ ಕೋಣೆ ವಾಸ್ತು ಸರಿಯಿಲ್ಲ ಅಂತ ನಿರಾಕರಿಸಿದಳಲ್ಲ?
ಹೀಗಾದರೆ ಸಂಸಾರದ ವಾಸ್ತು ಎಕ್ಕುಟ್ಟುಹೋಗೋದು ಖಂಡಿತ.
ಸರಸ್ವತಿ ರಮೇಶ್, ಹನುಮನಾಳು
ಪ್ರೀತಿಸುವಾಗ ಇರುವ ನಂಬಿಕೆ ಮದುವೆಯಾದ ಮೇಲೆ ಇರುವುದಿಲ್ಲ ಏಕೆ?
ಮದುವೆ ಎಲ್ಲ ನಂಬಿಕೆಗಳನ್ನು ಹುಸಿಗೊಳಿಸುತ್ತದೆ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

