ಚುಂಬನವೇ ಪ್ರೀತಿಯ ಮೊದಲ ಹೆಜ್ಜೇನಾ?

Updated on: 

ವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ, ಬಾಗಲಕೋಟೆ
ಹೃದಯ ಕದ್ದ ಚೋರನಿಗೂ, ಧನಕನಕ ಕದ್ದ ಚೋರರಿಗೂ ಇರುವ ವ್ಯತ್ಯಾಸವೇನು?
ಹೃದಯ ಕದ್ದರೆ ಜೀವಾವಧಿ, ಧನಕನಕ ಕದ್ದರೆ 3-4 ವರ್ಷ!

ವಾದಿರಾಜ ಜಿ. ರಾಯ್ಕರ್, ಬೆಂಗಳೂರು
82ರ ಹರೆಯದ ದೇವೇಗೌಡರಿಗೇ ರಾಜಕೀಯ ಬಿಡುತ್ತಿಲ್ಲವೋ? ದೇವೇಗೌಡರೇ ರಾಜಕೀಯ ಬುಡುತ್ತಿಲ್ಲವೋ?
ಅವೆರಡೂ ಬೇರೆಬೇರೆಯಾಗಿರಲು ಸಾಧ್ಯವೇ ಇಲ್ಲ.

ಪವನಕುಮಾರ ಕೆ.ವಿ. ಬಳ್ಳಾರಿ, 9900515957
ನಾನೊಂದೆಣಿಸಿದರೆ ವಿಧಿಯೊಂದು ಬಗೆದಿತ್ತು ಎನ್ನುವ ಮಾತು ಪ್ರಸ್ತುತ ರಾಜಕಾರಣದಲ್ಲಿ ಯಾರಿಗೆ ಅನ್ವಯವಾಗುತ್ತದೆ?
ಮಮತಾ ಮತ್ತು ಜಯಲಲಿತಾಗೆ!

ವಿ. ಹೇಮಂತಕುಮಾರ, ಬೆಂಗಳೂರು, 9901739104
ಯಾವ ಬೇಕರಿಯಲ್ಲೂ ಕಾಂಗ್ರೆಸ್ ಕಡ್ಲೆಬೀಜ ಸಿಗುತ್ತಿಲ್ಲ ಏಕೆ?
ಕಾಂಗ್ರೆಸ್ ರಹಿತ ಭಾರತ ಎಂಬ ಮಾತನ್ನು ಜನ ಹೀಗೂ ಪಾಲಿಸುತ್ತಿರಬೇಕು!

ಫ್ಯಾಷನ್ ಡಿಸೈನರ್ ಮಧು, 9945737427
ಚುಂಬನವೇ ಪ್ರೀತಿಯ ಮೊದಲ ಹೆಜ್ಜೇನಾ?
ಇದು ಹೊಸ ಫ್ಯಾಷನ್!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com