ಕೇಜ್ರಿವಾಲ್ ಕಲಿಯುಗದ ರಾಜಾಹರಿಶ್ಚಂದ್ರ!

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಕಪಾಳಕ್ಕೆ ರಿಕ್ಷಾವಾಲಾನೊಬ್ಬ ಮಂಗಳವಾರ ಹೊಡೆದ ಏಟಿನ ಸದ್ದು ಟ್ವಿಟರ್‌ನಲ್ಲಿ ಬುಧವಾರವೂ ಪ್ರತಿಧ್ವನಿಸಿದೆ. ಸಾರ್ವಜನಿಕರ 'ಕೈ'ಯಿಂದ ಪದೇ ಪದೆ ಏಟು ತಿನ್ನುತ್ತಿರುವ ಕೇಜ್ರಿವಾಲ್ ಅವರನ್ನು ವಿರೋಧಿಗಳು ಟ್ವಿಟರ್‌ನಲ್ಲಿ ತೀವ್ರ ಟೀಕೆಗೆ ಗುರಿ ಮಾಡಿದ್ದಾರೆ. 'ಕೇಜ್ರಿವಾಲ್ ಕಲಿಯುಗದ ರಾಜಾ ಹರಿಶ್ಚಂದ್ರ'. 'ನಿನ್ನೆ ಕೇಜ್ರಿವಾಲ್‌ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ಇಂದು ಕ್ಷಮೆ ಕೋರುತ್ತಾನೆ' ಎಂದು ವ್ಯಂಗ್ಯವಾಡಿದ್ದಾರೆ.
ಕೆಲವರಂತೂ ಒಂದು ವೇಳೆ ಕೇಜ್ರಿವಾಲ್ ಅವರು ಪ್ರಧಾನಿಯಾಗದಿದ್ದರೆ ರಾಷ್ಟ್ರೀಯ ನಾಟಕ ಶಾಲೆಗೆ ಸೇರಬೇಕು ಎಂದಿದ್ದಾರೆ. ಚುನಾವಣೆ ಸಮಯದಲ್ಲಿ ಹೇಗೆ ನಾಟಕವಾಡಬೇಕು ಎನ್ನುವುದನ್ನು ಕೇಜ್ರಿವಾಲ್‌ರನ್ನು ನೋಡಿ ಕಲಿಯಬೇಕು ಎಂದು ಇನ್ನು ಕೆಲವರು ಟೀಕಿಸಿದರೆ, ಮತ್ತೆ ಕೆಲವರು ಕೇಜ್ರಿವಾಲ್ ಅವರಿಗೆ ಹೂವಿನ ಹಾರ ಕಂಡರೆ ಭಯ ಎಂದು ಹೇಳಿದ್ದಾರೆ. ಇನ್ನು ಕೆಲವರು 'ಅಲ್ಲ... ಹಾರ ಹಾಕುವವರನ್ನು ನೋಡಿದರೆ ಭಯ' ಎಂದು ಕಾಲೆಳೆದಿದ್ದಾರೆ.
ಡ್ರಾಮಾ ಕಂಪನಿ ಸೇರಿಕೊಳ್ಳಬೇಕು ಎಂದ ಟ್ವೀಟಿಗರು
ಚಿದಂಬರಂ ಅವರಿಗೆ ಶೂ ಎಸೆದರೆ ಅದು ನ್ಯಾಯಪರತೆ. ಅರವಿಂದ ಕೇಜ್ರಿವಾಲ್ ವಿರುದ್ಧ ಅದೇ ರೀತಿಯ ಕೃತ್ಯ ಎಸಗಿದರೆ ಅದು ಷಡ್ಯಂತ್ರ...!
-ವರ್ಷಿಣಿ ಕ್ಯೂಟಿ
ಕೇಜ್ರಿವಾಲ್ ಪತ್ನಿ ರಾತ್ರಿ ಕೇಳ್ತಾರೆ... ತಿನ್ನಲಿಕ್ಕೆ ಏನು ಕೊಡ್ಲಿ? ಕೇಜ್ರಿವಾಲ್ ಹೇಳ್ತಾರೆ... ನಾನು ಹೊರಗೆ ತಿಂದುಕೊಂಡೇ ಬಂದಿದ್ದೇನೆ...!
-ಜೀತ್ ಮಶ್ರಾನಿ
ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳಲಾಗದ ವ್ಯಕ್ತಿ ದೇಶದ ಮಹಿಳೆಯರನ್ನು ಹೇಗೆ ರಕ್ಷಿಸಬಲ್ಲ?
-ಮೀನಾಕ್ಷಿ
ಕೇಜ್ರಿವಾಲ್ ಮೊದಲ ಬಾರಿ ನಿರಶನಕ್ಕೆ ಕೂತಾಗ ಯಾರಿಗೂ ಈ ಕುರಿತು ಸಣ್ಣ ಕಲ್ಪನೆಯೂ ಇರಲಿಲ್ಲ. ಈ ವ್ಯಕ್ತಿ ಬದುಕುವುದು ಆಹಾರದಿಂದಲ್ಲ ಬದಲಾಗಿ ಟೀವಿ ಕ್ಯಾಮೆರಾದಿಂದ...!
-ಪಪ್ಪುಕಿಮುಮ್ಮ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ
ಕೇಜ್ರಿವಾಲ್ ಅವರಿಗೆ ಮತಗಳಿಗಿಂತ
ಹೆಚ್ಚು ಕಪಾಳಮೋಕ್ಷವೇ ಸಿಗುತ್ತದೆ.
-ಶಿವರಾಮ್ ಪಾಂಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


