ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್‌ ಬಳಕೆ

ಫೀಫಾ ವಿಶ್ವಕಪ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಡಿಯೊ ಅಸಿಸ್ಟಂಟ್ ರೆಫರಿ ಸಿಸ್ಟಮ್‌ (ವಿಎಆರ್‌) ಬಳಸಿದ ಪಂದ್ಯಕ್ಕೆ ರಷ್ಯಾದ ಕಜನ್‌ ಕ್ರೀಡಾಂಗಣ ಸಾಕ್ಷಿಯಾಯಿತು.
ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್‌ ಬಳಕೆ
ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್‌ ಬಳಕೆ
Updated on: 
ಕಜಾನ್‌: ಫೀಫಾ ವಿಶ್ವಕಪ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಡಿಯೊ ಅಸಿಸ್ಟಂಟ್ ರೆಫರಿ ಸಿಸ್ಟಮ್‌ (ವಿಎಆರ್‌) ಬಳಸಿದ ಪಂದ್ಯಕ್ಕೆ ರಷ್ಯಾದ ಕಜನ್‌ ಕ್ರೀಡಾಂಗಣ ಸಾಕ್ಷಿಯಾಯಿತು.
ಫೀಫಾ ವಿಶ್ವಕಪ್ ಟೂರ್ನಿಯ ನಿಮಿತ್ತ ಶನಿವಾರ ನಡೆದ ಗ್ರೂಪ್ ಸಿ ವಿಭಾಗದ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಈ ಪದ್ಧತಿ  ಅಳವಡಿಸಿಕೊಳ್ಳಲಾಗಿದೆ. ಅಂತೆಯೇ ವಿಎಆರ್ ಪದ್ಧತಿಯ ಪದ್ಧತಿಯ ನೆರವು ಪಡೆದು ಮೊದಲ ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಫ್ರಾನ್ಸ್‌ನ ಆ್ಯಂಟೋಯ್ನ್‌ ಗ್ರಿಜ್‌ಮನ್‌ ಪಾತ್ರರಾಗಿದ್ದಾರೆ. 
ಪಂದ್ಯದ ದ್ವಿತೀಯಾರ್ಧದಲ್ಲಿ ಪೆನಾಲ್ಟಿ ಬಾಕ್ಸ್ ಒಳಗೆ ಆ್ಯಂಟೋಯ್ನ್ ಅವರನ್ನು ಎದುರಾಳಿ ತಂಡದ ಆಟಗಾರ ಬೀಳಿಸಿದರು. ತಂಡದ ಮನವಿಗೆ ಸ್ಪಂದಿಸದ ರೆಫರಿ ಪೆನಾಲ್ಟಿ ಕಿಕ್‌ಗೆ ಅವಕಾಶ ನೀಡಲಿಲ್ಲ. ಹೀಗಾಗಿ ಫ್ರಾನ್ಸ್ ಆಟಗಾರರು ವಿಎಆರ್‌ ಮೊರೆ ಹೋದರು. ಬಳಿಕ ಫ್ರಾನ್ಸ್ ಪರ ತೀರ್ಪು ಬಂದಾಗ ಪೆನಾಲ್ಟಿ ಕಿಕ್ ಗೆ ಅವಕಾಶ ನೀಡಲಾಯಿತು. ಆಗ ಗ್ರೀಜ್‌ಮನ್ ಗೋಲು ಗಳಿಸಿ ಮಿಂಚಿದರು.
ವಿಎಆರ್ ಪದ್ಧತಿಯನ್ನು ಸೀರಿ ‘ಎ’ ಟೂರ್ನಿಗಳಲ್ಲಿ ಮತ್ತು ಬಂಡೆಸ್‌ಲಿಗಾದಲ್ಲಿ ಬಳಸಲಾಗುತ್ತಿದೆ. ಫೀಫಾ ಸಂಸ್ಥೆ ಕಳೆದ ಬಾರಿ ನಡೆದ ಕಾನ್ಫೆಡರೇಷನ್ ಕಪ್‌ ಟೂರ್ನಿಯಲ್ಲಿ ಮೊದಲ ಬಾರಿ ಇದನ್ನು ಜಾರಿಗೆ ತಂದಿತ್ತು. ಈ ಬಾರಿ ವಿಶ್ವಕಪ್‌ನಲ್ಲೂ ಬಳಸಲು ನಿರ್ಧರಿಸಲಾಗಿತ್ತು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಫ್ರಾನ್ಸ್ ನ ಆಟಗಾರ ಗ್ರೀಜ್‌ಮನ್, 'ಇದು ಉತ್ತಮ ವಿಧಾನ. ಈ ಪಂದ್ಯದಲ್ಲಿ ಎದುರಾಳಿ ತಂಡದ ಆಟಗಾರ ನನ್ನ ಎಡಗಾಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದ. ಆದ್ದರಿಂದ ಅದು ಸ್ಪಷ್ಟವಾಗಿ ಪೆನಾಲ್ಟಿ ಅಗಿತ್ತು. ವಿಎಆರ್‌ ಪದ್ಧತಿಯಿಂದಾಗಿ ನಮಗೆ ಅದರ ಲಾಭ ಸಿಕ್ಕಿತು' ಎಂದು  ಹೇಳಿದರು.
ಕ್ರಿಕೆಟ್‌ನಲ್ಲಿ ಜಾರಿಯಾಗಿರುವ ಅಂಪೈರ್ ತೀರ್ಪು ಮರುಪರಿಶೀಲನಾ  ಪದ್ಧತಿ (ಯುಡಿಆರ್‌ಎಸ್)ಮಾದರಿಯಲ್ಲಿ ವಿಎಆರ್‌ ಬಳಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com