ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲಾ ಪುಡಿ, ಖಾರದ ಪುಡಿ, ಗರಂ ಮಸಾಲಾ ಪುಡಿ, ಹಸಿಮೆಣಸಿನ ಕಾಯಿ ಪೇಸ್ಟ್, ಜೀರಿಗೆ ಪುಡಿ, ದನಿಯಾ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗಿ ಚೆನ್ನಾಗಿ ಮಿಶ್ರಣ ಮಾಡಿದ
ಇದಕ್ಕೆ ಕತ್ತರಿಸಿಕೊಂಡ ಪನ್ನೀರ್ ಪೀಸ್ ಗಳನ್ನು ಹಾಗಿ ಮಸಾಲೆ ಚೆನ್ನಾಗಿ ಅಂಟುವ ಹಾಗೆ ಮಿಶ್ರಣ ಮಾಡಿ.
ನಂತರ ಮಸಾಲೆ ಹಚ್ಚಿದ ಪನ್ನೀರ್ ನ್ನು ತೆಗೆದುಕೊಂಡು ಲಾಕ್ ಮಾಡುವ ಕವರ್ ನಲ್ಲಿ ಹಾಕಿ ಗಾಳಿ ಹೋಗದಂತೆ ಲಾಕ್ ಮಾಡಿ ಅದನ್ನು ಫ್ರಿಡ್ಜ್ ನಲ್ಲಿ 2 ರಿಂದ 4 ಗಂಟೆಗಳ ಇಡಬೇಕು.
ಒಲೆಯ ಮೇಲೆ ಪ್ಯಾನ್ ವೊಂದನ್ನು ಇಟ್ಟು ಮಧ್ಯಮ ಉರಿಯಲ್ಲಿ ಕಾಯಲು ಬಿಡಿ
2-4 ಗಂಟೆಗಳ ನಂತರ ಪನ್ನೀರ್ ನ್ನು ಫ್ರಿಡ್ಜ್ ನಿಂದ ಹೊರ ತೆಗೆದು 5 ನಿಮಿಷ ಬಿಡಿ.
ನಂತರ ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಒಂದೊಂದೇ ಪನ್ನೀರ್ ಪೀಸ್ ನ್ನು ಇಟ್ಟು ಚಿನ್ನದ ಬಣ್ಣ ಬರುವವರೆಗೆ ಸುಟ್ಟರೆ ರುಚಿಕರವಾದ ಪನ್ನೀರ್ ಕಬಾಬ್ ಸವಿಯಲು ಸಿದ್ಧ.