ಎಳ್ಳುಂಡೆ

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಎಳ್ಳುಂಡೆ ಮಾಡುವ ವಿಧಾನ...
ಎಳ್ಳುಂಡೆ
ಎಳ್ಳುಂಡೆ
ಬೇಕಾಗುವ ಪದಾರ್ಥಗಳು
  • ಬೆಳಿ ಎಳ್ಳು - ಅರ್ಧ ಬಟ್ಟಲು
  • ಕಪ್ಪು ಎಳ್ಳು - ಅರ್ಧ ಬಟ್ಟಲು
  • ಬೆಲ್ಲ - 1 ಬಟ್ಟಲು
  • ಏಲಕ್ಕಿ ಪುಡಿ - ಸ್ವಲ್ಪ
  • ಬಾದಾಮಿ ಪುಡಿ- 2 ಚಮಚ
  • ಗೋಡಂಬಿ ಪುಡಿ - 2 ಚಮಚ
ಮಾಡುವ ವಿಧಾನ...
  • ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಅದಕ್ಕೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಬೇಕು. 
  • ನಂತರ ಬಿಳಿ ಎಳ್ಳು ಹಾಗೂ ಕಪ್ಪು ಎಳ್ಳನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು. 
  • ಬೆಲ್ಲದ ಪಾಕವಾಗುತ್ತಿದ್ದಂತೆಯೇ ಅದಕ್ಕೆ ಹುರಿದಿಟ್ಟುಕೊಂಡ ಎಳ್ಳು, ಗೋಡಂಬಿ, ಬಾದಾಮಿ ಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. 
  • ನಂತರ ಬೆಲ್ಲ, ಎಳ್ಳು ಮಿಶ್ರಣ ತಣ್ಣಗಾಗಲು ಬಿಟ್ಟು, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡರೆ, ರುಚಿಕರವಾದ ಎಳ್ಳುಂಡೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com