ಆಲೂ ಮಟರ್ ಪಲಾವ್

ರುಚಿಕರವಾದ ಆಲೂ ಮಟರ್ ಪಲಾವ್ ಮಾಡುವ ವಿಧಾನ...
ಆಲೂ ಮಟರ್ ಪಲಾವ್
ಆಲೂ ಮಟರ್ ಪಲಾವ್
Updated on: 

ಬೇಕಾಗುವ ಪದಾರ್ಥಗಳು

  • ಚಕ್ಕೆ, ಲವಂಗ, ಏಲಕ್ಕಿ, ಪವಾವ್ ಎಲೆ- ಸ್ವಲ್ಪ
  • ಈರುಳ್ಳಿ- 2
  • ಹಸಿಮೆಣಸಿನ ಕಾಯಿ- 2
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 2
  • ಅರಿಶಿಣ ಪುಡಿ - ಸ್ವಲ್ಪ
  • ಅಚ್ಚ ಖಾರದ ಪುಡಿ- 2 ಚಮಚ
  • ಬಟಾಣಿ- ಅರ್ಧ ಬಟ್ಟಲು
  • ಆಲೂಗಟ್ಟೆ- ಬೇಯಿಸಿದ್ದು 3
  • ಗರಂ ಮಸಲೆ ಪುಡಿ- ಅರ್ಧ ಚಮಚ
  • ನಿಂಬೆಹಣ್ಣಿನ ರಸ- ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಪುದೀನಾ- ಸ್ವಲ್ಪ
  • ಬಾಸುಮತಿ ಅಕ್ಕಿ- 1 ಬಟ್ಟಲು

ಮಾಡುವ ವಿಧಾನ

  • ಮೊದಲು ಕುಕ್ಕರ್'ನ್ನು ಒಲೆಯ ಮೇಲಿಟ್ಟು 2 ಚಮಚ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಹಾಕಬೇಕು. ಕಾದ ನಂತರ ಚಕ್ಕೆ, ಲವಂಗ, ಪಲಾವ್ ಎಲೆ ಹಾಗೂ ಮಸಾಲೆ ಪದಾರ್ಥಗಳನ್ನು ಹಾಕಬೇಕು. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಬಟಾಣಿ, ಆಲೂಗಡ್ಡೆ, ಗರಂ ಮಸಾಲೆ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕುಕ್ಕರ್ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ ರುಚಿಕರವಾದ ಆಲೂ ಮಟರ್ ಪಲಾವ್ ಸವಿಯಲು ಸಿದ್ಧ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com