ಅಕ್ಕಿಯನ್ನು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಬೇಕು. ನಂತರ ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕದಂತೆ ಅಕ್ಕಿಯನ್ನು ರುಬ್ಬಿಕೊಳ್ಳಬೇಕು. ಅಕ್ಕಿಯನ್ನು ಪುಡಿ ಮಾಡಿಕೊಳ್ಳಬೇಕು.
ಆರೆಂಜ್ ಗಳನ್ನು ಕತ್ತರಿಸಿಕೊಂಡು ರಸ ತೆಗೆಯಬೇಕು.
ಒಲೆಯ ಮೇಲೆ ಬಾಣಲೆಇಟ್ಟು, ಹಾಲನ್ನು ಕಾಯಲು ಬಿಡಬೇಕು. ಹಾಲು ಕಾದ ನಂತರ ಪುಡಿ ಮಾಡಿಕೊಂಡ ಅಕ್ಕಿಯನ್ನು ಹಾಕಿ ಗಂಟಾಗದಂತೆ ಕೈಯಾಡಿಸಬೇಕು.
ಅಕ್ಕಿ ಬಂದ ಬಳಿಕ ಸಕ್ಕರೆ, ಏಲಕ್ಕಿ ಪುಡಿ, ಕೇಸರಿ ದಳ, ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಫಿರ್ನಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
ನಂತರ ಆರೆಂಜ್ ತೆಗೆದುಕೊಂಡು ಸಿಪ್ಪೆಯನ್ನು ತುರಿದು ಸ್ವಲ್ಪ ಹಾಕಬೇಕು. ನಂತರ ಆರೆಂಜ್ ರಸ, ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾ, ಬಾದಾಮಿಯನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾಗ ಆರೆಂಜ್ ಫಿರ್ನಿ ಸವಿಯಲು ಸಿದ್ಧ.