ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ, ಅದರಲ್ಲಿ ಪನೀರ್ ಅನ್ನು ಸುಮಾರು 10-15 ನಿಮಿಷಗಳ ವರೆಗೆ ಇರಿಸಿ. ಇದರಿಂದ ಪನೀರ್ ಮೃದುವಾಗುತ್ತದೆ.
ಬಳಿಕ ಪನೀರ್ ಅನ್ನು ನೀರಿನಿಂದ ತೆಗೆದು, ಕೈಗಳಿಂದಲೇ ಪುಡಿ ಮಾಡಿಕೊಳ್ಳಿ. ಈಗ ಪನೀರ್ ಅನ್ನು ಮಿಕ್ಸರ್ ಜಾರ್ಗೆ ಹಾಕಿ, ಅದಕ್ಕೆ ಕುದಿಸಿ ಆರಿಸಿದ ಹಾಲು, ಕಂಡೆನ್ಸ್ಡ್ ಮಿಲ್ಕ್, ಕೇಸರಿ, ಏಲಕ್ಕಿ, ಸಕ್ಕರೆ ಹಾಗೂ ರೋಸ್ ಎಸೆನ್ಸ್ ಅನ್ನು ಸೇರಿಸಿ ರುಬ್ಬಿಕೊಳ್ಳಿ.
ಈಗ ಕಡಿದ ಮಿಶ್ರಣವನ್ನು ಒಂದು ಪ್ಯಾನ್ಗೆ ಹಾಕಿ ಕುದಿಸಿ, ಉರಿಯನ್ನು ಮಧ್ಯಮದಲ್ಲಿಟ್ಟು ಕೈಯಾಡಿಸುತ್ತಾ ಮಿಶ್ರಣ ದಪ್ಪಗಾಗಲು ಬಿಡಿ.
ಮಿಶ್ರಣ ಪ್ಯಾನ್ ಅನ್ನು ಬಿಟ್ಟು ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ, ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.