ಆಲೂ ಫ್ರೈ

ರುಚಿಕರವಾದ ಆಲೂ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು,,, ಉದ್ದಿನ ಬೇಳೆ – ಎರಡೂವರೆ ಚಮಚ ಕೆಂಪು ಮೆಣಸಿನಕಾಯಿ – 5 ಕಾಳುಮೆಣಸು – 1 ಚಮಚ ಕಡಲೆ ಬೇಳೆ – ಅರ್ಧ ಚಮಚ ಜೀರಿಗೆ – ಕಾಲು ಚಮಚ ಸಾಸಿವೆ – ಕಾಲು ಚಮಚ ಹಿಂಗ್ – ಕಾಲು ಚಮಚ ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ್ದು) ಕರಿಬೇವಿನ ಎಲೆ – ಸ್ವಲ್ಪ ಬೇಯಿಸಿದ ಎಳೆಯ ಆಲೂಗಡ್ಡೆ – 15 ರಿಂದ 20 ಉಪ್ಪ
ಬೇಕಾಗುವ ಪದಾರ್ಥಗಳು,,, ಉದ್ದಿನ ಬೇಳೆ – ಎರಡೂವರೆ ಚಮಚ ಕೆಂಪು ಮೆಣಸಿನಕಾಯಿ – 5 ಕಾಳುಮೆಣಸು – 1 ಚಮಚ ಕಡಲೆ ಬೇಳೆ – ಅರ್ಧ ಚಮಚ ಜೀರಿಗೆ – ಕಾಲು ಚಮಚ ಸಾಸಿವೆ – ಕಾಲು ಚಮಚ ಹಿಂಗ್ – ಕಾಲು ಚಮಚ ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ್ದು) ಕರಿಬೇವಿನ ಎಲೆ – ಸ್ವಲ್ಪ ಬೇಯಿಸಿದ ಎಳೆಯ ಆಲೂಗಡ್ಡೆ – 15 ರಿಂದ 20 ಉಪ್ಪ
Updated on: 

ಬೇಕಾಗುವ ಪದಾರ್ಥಗಳು...

  • ಉದ್ದಿನ ಬೇಳೆ – ಎರಡೂವರೆ ಚಮಚ
  • ಕೆಂಪು ಮೆಣಸಿನಕಾಯಿ – 5
  • ಕಾಳುಮೆಣಸು – 1 ಚಮಚ
  • ಕಡಲೆ ಬೇಳೆ – ಅರ್ಧ ಚಮಚ
  • ಜೀರಿಗೆ – ಕಾಲು ಚಮಚ
  • ಸಾಸಿವೆ – ಕಾಲು ಚಮಚ
  • ಹಿಂಗ್ – ಕಾಲು ಚಮಚ
  • ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ್ದು)
  • ಕರಿಬೇವಿನ ಎಲೆ – ಸ್ವಲ್ಪ
  • ಬೇಯಿಸಿದ ಎಳೆಯ ಆಲೂಗಡ್ಡೆ – 15 ರಿಂದ 20
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಬಾಣಲೆಯಲ್ಲಿ 2 ಚಮಚ ಉದ್ದಿನ ಬೇಳೆ, ಒಣ ಕೆಂಪು ಮೆಣಸಿನಕಾಯಿ, ಕಾಳು ಮೆಣಸನ್ನು ಹಾಕಿ ಹುರಿದುಕೊಳ್ಳಿ.
  • ಬಳಿಕ ಅದನ್ನು ತಣ್ಣಗಾಗಿಸಿ, ಮಿಕ್ಸಿ ಜಾರ್‌ಗೆ ಹಾಕಿ ಪುಡಿಮಾಡಿಕೊಳ್ಳಿ.
  • ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉಳಿದ ಅರ್ಧ ಚಮಚ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಗೂ ಹಿಂಗು ಹಾಕಿ ಸಿಡಿಸಿ.
  • ಬಳಿಕ ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿದುಕೊಳ್ಳಿ. ನಂತರ ಕರಿಬೇವಿನ ಸೊಪ್ಪು ಸೇರಿಸಿ.
  • ಈಗ ಬೇಯಿಸಿದ ಎಳೆಯ ಆಲೂಗಡ್ಡೆಯನ್ನು ಹಾಕಿ ಮಿಶ್ರಣ ಮಾಡಿ.
  • ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಮಿಶ್ರಣ ಮಾಡಿ, ಕೆಲ ನಿಮಿಷ ಬೇಯಿಸಿಕೊಳ್ಳಿ. ಇದೀಗ ಆಲೂಗಡ್ಡೆ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com