ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಮೆಣಸು, ದನಿಯಾ, ಜೀರಿಗೆ, ಚಕ್ಕೆ, ಲವಂಗ ಹಾಕಿ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಳ್ಳಿ.
ನಂತರ ಪ್ಯಾನ್ ಗೆ ಒಂದು 1 ಚಮಚ ಬೆಣ್ಣೆ ಹಾಕಿ ಅದಕ್ಕೆ ಪನ್ನೀರ್, ಕ್ಯಾಪ್ಸಿಕಂ ಹಾಕಿ ಹುರಿದುಕೊಳ್ಳಿ. ಇದನ್ನು ಒಂದು ತಟ್ಟೆಗೆ ಹಾಕಿ ಬದಿಗಿಡಿ.
ನಂತರ ಅದೇ ಪ್ಯಾನ್ ಗೆ ಬೆಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಕೆಂಪಗಾದ ನಂತರ ಅದಕ್ಕೆ ಟೊಮೆಟೊ ಪ್ಯೂರಿ ಹಾಕಿಕೊಳ್ಳಿ. 2 ನಿಮಿಷ ಇದು ಚೆನ್ನಾಗಿ ಬೇಯಲಿ.
ನಂತರ ಅರಿಶಿನ, ರುಬ್ಬಿಟ್ಟುಕೊಂಡ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ 2 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
ನಂತರ ಇದಕ್ಕೆ ಉಪ್ಪು, ಗರಂ ಮಸಾಲ, ಹುರಿದ ಕ್ಯಾಪ್ಸಿಕಂ, ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಕ್ರೀಮ್ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಿ ಕೊಳ್ಳಿ.
ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಸವಿಯಲು ಸಿದ್ಧ.