ಬ್ರೆಡ್ ಮಸಾಲೆ ದೋಸೆ

ರುಚಿಕರವಾದ ಬ್ರೆಡ್ ಮಸಾಲೆ ದೋಸೆ ಮಾಡುವ ವಿಧಾನ...
ಬ್ರೆಡ್ ಮಸಾಲೆ ದೋಸೆ
ಬ್ರೆಡ್ ಮಸಾಲೆ ದೋಸೆ
Updated on: 

ಬೇಕಾಗುವ ಪದಾರ್ಥಗಳು...

  • ಬ್ರೆಡ್ ಸ್ಲೈಸ್ ಗಳು- 8-10
  • ಬಾಂಬೆ ರವೆ- ಅರ್ಧ ಬಟ್ಟಲು
  • ಅಕ್ಕಿ ಹಿಟ್ಟು- 2 ಚಮಚ
  • ಮೊಸರು- ಕಾಲು ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಆಲೂಗಡ್ಡೆ ಪಲ್ಯ- ಸ್ವಲ್ಪ
  • ಸ್ವಲ್ಪ-ಬೆಣ್ಣೆ

ಮಾಡುವ ವಿಧಾನ...

  • ಬ್ರೆಡ್ ಸ್ಲೈಸ್ ತೆಗೆದುಕೊಂಡು ನಾಲ್ಕೂ ಬದಿಯನ್ನು ಕತ್ತರಿಸಿ ತೆಗೆಯಿರಿ. ಕೈಗಳಿಂದ್ಲೇ ಬ್ರೆಡ್ ಅನ್ನು ಪುಡಿ ಪುಡಿ ಮಾಡಿ. ಬಳಿಕ ಅದಕ್ಕೆ ಅರ್ಧ ಬಟ್ಟಲು ರವೆ, ಅಕ್ಕಿ ಹಿಟ್ಟು, ಮೊಸರು, ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಮಿಶ್ರಣವನ್ನು 20-30 ನಿಮಿಷ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರಿನಲ್ಲಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
  • ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಬಿಸಿ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಟಿಶ್ಯೂ ಪೇಪರ್ ನಿಂದ ಒರೆಸಿ. ನಂತರ ದೋಸೆ ಹಿಟ್ಟನ್ನು ತೆಳ್ಳಗೆ ಹೊಯ್ದು ಅದರ ಮೇಲೆ ಬೆಣ್ಣೆ ಹಾಕಿ. ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಒಂದು ನಿಮಿಷ ಹಾಗೇ ಬಿಡಿ.
  • ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ದೋಸೆ ಗರಿಗರಿಯಾದ ಮೇಲೆ ಪೋಲ್ಡ್ ಮಾಡಿ ತೆಗೆಯಿರಿ. ಇದೀಗ ಬ್ರೆಡ್ ಮಸಾಲೆ ದೋಸೆ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com