ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಇಡಿ. ನಂತರ ಇದಕ್ಕೆ ಮ್ಯಾಕ್ರೋನಿ ಹಾಕಿ ಇದು 5 ನಿಮಿಷಗಳ ಕಾಲ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ.
ಇನ್ನೊಂದು ಬೌಲ್ ತೆಗೆದುಕೊಂಡು ಮಯೋನಿಸ್, ಸಾಸಿವೆ, ವಿನೇಗರ್, ಖಾರದ ಪುಡಿ, ಸಕ್ಕರೆ, ಉಪ್ಪು, ಕಾಳುಮೆಣಸು, ಈರುಳ್ಳಿ, ರೆಡ್ ಬೆಲ್ ಪೆಪ್ಪರ್, ಗ್ರೀನ್ ಬೆಲ್ ಪೆಪ್ಪರ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಮ್ಯಾಕ್ರೋನಿ ಸೇರಿಸಿ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್ ನಲ್ಲಿ 4 ಗಂಟೆಗಳ ಕಾಲ ಇಟ್ಟು ತೆಗೆದರೆ ಮ್ಯಾಕ್ರೋನಿ ಸಲಾಡ್ ಸವಿಯಲು ಸಿದ್ಧ.