ಕೈಮಾ ಉಪ್ಪಿಟ್ಟು

ರುಚಿಕರವಾದ ಕೈಮಾ ಉಪ್ಪಿಟ್ಟು ಮಾಡುವ ವಿಧಾನ...
ಕೈಮಾ ಉಪ್ಪಿಟ್ಟು
ಕೈಮಾ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು...

  • ಮಟನ್ ಕೈಮಾ- 200 ಗ್ರಾಂ
  • ರವೆ- 1 ಬಟ್ಟಲು
  • ಎಣ್ಣೆ- 3 ಚಮಚ
  • ಈರುಳ್ಳಿ- ಸಣ್ಣಗೆ ಹಚ್ಚಿದ್ದು  ಅರ್ಧ ಬಟ್ಟಲು
  • ಹಸಿಮೆಣಸಿನ ಕಾಯಿ- 2
  • ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಬಟಾಣಿ- ಅರ್ಧ ಬಟ್ಟಲು
  • ಕರಿಬೇವು- ಸ್ವಲ್ಪ
  • ಅಚ್ಚ ಖಾರದ ಪುಡಿ - 1 ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಚಕ್ಕೆ-ಲವಂಗ ಪುಡಿ- ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಟೊಮೆಟೋ - 1 ಸಣ್ಣಗೆ ಹೆಚ್ಚಿದ್ದು
  • ಬಿಸಿ ನೀರು- ಮೂರು ಬಟ್ಟಲು
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕಾದ ನಂತರ ರವೆಯನ್ನು ಕೆಂಪೆಗೆ ಹುರಿದು ಪಕ್ಕೆಕ್ಕೆ ಇಟ್ಟುಕೊಳ್ಳಿ.
  • ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ ಹಾಕಿ, ಕೆಂಪಗಾದ ಬಳಿಕ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ. ಇದೀಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಟಾಣಿ ಹಾಗೂ ಟೊಮೆಟೋ ಹಾಕಿ ಹುರಿದುಕೊಳ್ಳಿ.
  • ನಂತರ ಬಟನ್ ಕೈಮಾ, ಅರಿಶಿಣದ ಪುಡಿ ಹಾಕಿ 5 ನಿಮಿಷ ಬೇಯಲು ಬಿಡಿ. ಬಳಿಕ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಚಕ್ಕೆ ಲವಂಗ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಲು ಬಿಡಿ. ಇದೀಗ ಬಿಸಿನೀರು ಹಾಕಿ 10 ನಿಮಿಷ ಚೆನ್ನಾಗಿ ಕುದಿಯಲು ಬಿಡಿ, ಬಳಿಕ ಗಂಟುಗಳಾಗದಂತೆ ಸ್ವಲ್ಪ ಸ್ವಲ್ಪವೇ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉರಿಯಲ್ಲಿ 3 ನಿಮಿಷ ಬಿಡಿ, ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕೈಮಾ ಉಪ್ಪಿಟ್ಟು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com