ಕೈಮಾ ವಡೆ

ರುಚಿಕರವಾದ ಕೈಮಾ ವಡೆ ಮಾಡುವ ವಿಧಾನ...
ಕೈಮಾ ವಡೆ
ಕೈಮಾ ವಡೆ

ಬೇಕಾಗುವ ಪದಾರ್ಥಗಳು...

  • ಮಟನ್ ಕೈಮಾ- 500 ಗ್ರಾಂ
  • ಈರುಳ್ಳಿ - 2 ಸಣ್ಣಗೆ ಕತ್ತರಿಸಿದ್ದು
  • ಹಸಿ ಮೆಣಸಿನಕಾಯಿ - 1
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಚಕ್ಕೆ, ಲವಂಗ ಪುಡಿ - 1/4 ಟೀಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಕಡಲೆ ಹಿಟ್ಟು- 1 ಚಮಚ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಪಾತ್ರೆಯೊಂದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು,  ಚಕ್ಕೆ, ಲವಂಗ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಕಡಲೆ ಹಿಟ್ಟು- 1 ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಎಣ್ಣೆ ಕಾಕಿ. ಇದೀಗ ಮಸಾಲೆ ಮಿಶ್ರಣವನ್ನು ವಡೆಗಳಾಗಿ ತಟ್ಟಿ, ಎಣ್ಣೆಗೆ ಬಿಡಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಎರಡೂ ಬದಿಯಲ್ಲಿ ಬೇಯಿಸಿದರೆ, ರುಚಿಕರವಾದ ಕೈಮಾ ವಡೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com