ಗ್ರೀನ್ ಚಿಕನ್ ಕರ್ರಿ

ರುಚಿಕರವಾದ ಗ್ರೀನ್ ಚಿಕನ್ ಕರ್ರಿ ಮಾಡುವ ವಿಧಾನ...
ಗ್ರೀನ್ ಚಿಕನ್ ಕರ್ರಿ
ಗ್ರೀನ್ ಚಿಕನ್ ಕರ್ರಿ

ಬೇಕಾಗುವ ಪದಾರ್ಥಗಳು...

  • ಎಣ್ಣೆ- 3 ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಚಿಕನ್ - ಅರ್ಧ ಕೆಜಿ
  • ಉಪ್ಪು-ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ- ಸ್ವಲ್ಪ
  • ಮೊಸರು- 1/4 ಬಟ್ಟಲು
  • ಗೋಡಂಬಿ- 8
  • ಈರುಳ್ಳಿ- ಎಣ್ಣೆಯಲ್ಲಿ ಫ್ರೈ ಮಾಡಿದ್ದು ಸ್ವಲ್ಪ
  • ಹಸಿಮೆಣಸಿನ ಕಾಯಿ- 2
  • ಕೊತ್ತಂಬರಿ ಸೊಪ್ಪು- ಒಂದು ಹಿಡಿಯಷ್ಟು
  • ಪುದೀನಾ- ಒಂದು ಹಿಡಿಯಷ್ಟು
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಚಕ್ಕೆ-ಲವಂಗ ಪುಡಿ- ಸ್ವಲ್ಪ
  • ದನಿಯಾ ಪುಡಿ- ಸ್ವಲ್ಪ
  • ಗರಂ ಮಸಾಲಾ ಪುಡಿ- ಕಾಲು ಚಮಚ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಿ.
  • ನಂತರ ಚಿಕನ್ ಪೀಸ್ ಗಳನ್ನು ಹಾಕಿ. ನಂತರ ರುಚಿಗೆತಕ್ಕಷ್ಟು ಉಪ್ಪು, ಅರಿಶಿಣದ ಪುಡಿಸ ಮೊಸರು ಹಾಕಿ 3 ನಿಮಿಷ ಬೇಯಿಸಿ.
  • ಬಳಿಕ ಮಿಕ್ಸಿ ಜಾರ್ ಗೆ ಗೋಡಂಬಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಚಿಕನ್ ಗೆ ಹಾಕಿ. 2 ನಿಮಿಷ ಕುಡಿಯಲು ಬಿಡಿ.
  • ನಂತರ ಕಾಳುಮೆಣಸಿನ ಪುಡಿ, ಚಕ್ಕೆ-ಲವಂಗ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಿ, ಮಸಾಲೆ ಗಟ್ಟಿಗಾದ ಬಳಿಕ ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪನೊಂದಿಗ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಚಿಕನ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com