ಗೋಬಿ ಪೆಪ್ಪರ್ ಡ್ರೈ

ರುಚಿಕರವಾದ ಗೋಬಿ ಪೆಪ್ಪರ್ ಡ್ರೈ ಮಾಡುವ ವಿಧಾನ...
ಗೋಬಿ ಪೆಪ್ಪರ್ ಡ್ರೈ
ಗೋಬಿ ಪೆಪ್ಪರ್ ಡ್ರೈ
Updated on: 

ಬೇಕಾಗುವ ಪದಾರ್ಥಗಳು...

  • ಹೂಕೋಸು – 1 ದೊಡ್ಡ ಗಾತ್ರದ್ದು
  • ಉಪ್ಪು – ರುಚಿಗೆ ತಕ್ಕಷ್ಟು
  • ಮೈದಾ – 1 ಬಟ್ಟಲು
  • ಜೋಳದ ಹಿಟ್ಟು – ಮುಕ್ಕಾಲು ಬಟ್ಟಲು
  • ಅರಶಿಣ ಪೌಡರ್ – ಅರ್ಧ ಚಮಚ
  • ಪೆಪ್ಪರ್ ಪೌಡರ್ – 1 ಚಮಚ
  • ಎಣ್ಣೆ – 2 ಚಮಚ
  • ಜೀರಿಗೆ – ಅರ್ಧ ಚಮಚ
  • ಸೋಂಪು– ಅರ್ಧ ಚಮಚ
  • ಕರಿಬೇವು – ಸ್ವಲ್ಪ
  • ಹೆಚ್ಚಿದ ಈರುಳ್ಳಿ – 1
  • ಹೆಚ್ಚಿದ ಬೆಳ್ಳುಳ್ಳಿ – 5
  • ಹೆಚ್ಚಿದ ಶುಂಠಿ – ಸ್ವಲ್ಪ
  • ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
  • ಜೀರಾ ಪೌಡರ್ – ಅರ್ಧ ಚಮಚ
  • ಟೊಮೆಟೊ ಸಾಸ್ – 2 ಚಮಚ
  • ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ

ಮಾಡುವ ವಿಧಾನ...

  • ಮೊದಲಿಗೆ ಹೆಚ್ಚಿದ ಹೂಕೋಸನ್ನು ಬಿಸಿನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ನೀರಿನಿಂದ ಹೂಕೋಸು ಅನ್ನು ತೆಗೆದು ಪಕ್ಕಕ್ಕೆ ಇಡಿ.
  • ಈಗ ಒಂದು ಬೌಲ್‌ನಲ್ಲಿ 1 ಬಟ್ಟಲು ಮೈದಾ, ಮುಕ್ಕಾಲು ಬಟ್ಟಲು ಜೋಳದ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ ಅರಶಿಣ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಅದಕ್ಕೆ 1 ಬಟ್ಟಲು ನೀರನ್ನು ಸೇರಿಸಿಕೊಂಡು ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗ ಹೂಕೋಸನ್ನು ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಹೂಕೋಸನ್ನು ಚನ್ನಾಗಿ ಹೊಂದಿಕೊಳ್ಳಬೇಕು.
  • ನಂತರ ಒಂದು ಬಾಣಾಲೆಯಲ್ಲಿ ಎಣ್ಣೆಯನ್ನು ಬಿಸಿಗಿಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಹೂಕೋಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
  • ಈಗ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ, ಜೀರಿಗೆ ಮತ್ತು ಸೋಂಪು ಹಾಕಿಕೊಳ್ಳಿ. ಬಳಿಕ ಅದಕ್ಕೆ ಕರಿಬೇವುಗಳನ್ನು ಹಾಕಿಕೊಳ್ಳಿ. ನಂತರ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕ್ಯಾಪ್ಸಿಕಂ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.
  • ಬಳಿಕ ಇದಕ್ಕೆ ಅರಶಿಣ ಪುಡಿ, ಜೀರಾ ಪುಡಿ, ಕೊತ್ತಂಬರಿ ಪುಡಿ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.. ಈಗ ಇದಕ್ಕೆ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
  • ಈ ಮಿಶ್ರಣಕ್ಕೆ ಹುರಿದ ಗೋಬಿಯನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಇದಕ್ಕೆ 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಗೋಬಿ ಪೆಪ್ಪರ್ ಡ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com